ಮೈಸೂರು: ಉಪಮುಖ್ಯಮಂತ್ರಿ ಆಗುವ ಸಮಯದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲುಗೆ ಸಂಕಷ್ಟ ಎದುರಾಗಿದೆ. ಶ್ರೀರಾಮುಲು ನಾಯಕ ಸಮುದಾಯ ಅಲ್ಲ, ಅವರು ಬೋಯ ಸಮುದಾಯಕ್ಕೆ ಸೇರುತ್ತಾರೆ ಅಂತ ಕರ್ನಾಟಕ ರಾಜ್ಯ ಬುಡಕಟ್ಟು ಹಿರಕ್ಷಣಾ ಸಂಘದ ಅಧ್ಯಕ್ಷ ಸುಭಾಷ್ ಆರೋಪಿಸುತ್ತಿದ್ದಾರೆ. ತಮ್ಮ ಜಾತಿಯನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವಂತೆ ಶ್ರೀರಾಮುಲುಗೆ ಪತ್ರ ಬರೆದಿದ್ದಾರೆ. ಶ್ರೀರಾಮುಲು ಬೋಯ ಸಮುದಾಯದ ಹಿಂದುಳಿದ ವರ್ಗಕ್ಕೆ ಸೇರಿದ್ದವರೆಂದು 2019ರಲ್ಲೇ ಸುಭಾಷ್ ದೂರು ನೀಡಿದ್ದಾರೆ.
2019ರ ಮಾರ್ಚ್ 13 ರಂದು ಶ್ರೀರಾಮುಲು ಬೋಯ ಸಮುದಾಯದ ಹಿಂದುಳಿದ ವರ್ಗಕ್ಕೆ ಸೇರಿದ್ದವರೆಂದು ನಾಗರೀಕರ ಹಕ್ಕು ಜಾರಿ ನಿರ್ದೇಶನಾಲಯದ ಎ.ಡಿ.ಜಿ.ಪಿಗೆ ದೂರು ನೀಡಿದ್ದರು. 2020 ರ ಆಗಸ್ಟ್ 7 ಕ್ಕೆ ದಾವಣಗೆರೆಯ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ನೀವು ನಾಯಕ ಪರಿಶಿಷ್ಟ ಪಂಗಡ ಎಂದು ಹೇಳಿಕೊಂಡು ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಹೊರಟ್ಟಿದ್ದೀರಿ. ಇದು ಅಕ್ಷಮ್ಯ ಅಪರಾಧ ಎಂದು ಸುಭಾಷ್ ಆರೋಪಿಸುತ್ತಿದ್ದಾರೆ.
ತಾವು ತಮ್ಮ ಜಾತಿಯ ಬಗ್ಗೆ ನಾಯಕ ಸಮುದಾಯಕ್ಕೆ ಮತ್ತು ಕರ್ನಾಟಕ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು. ನಾಯಕನ ಅಥವಾ ಭೊಯನಾ ಎಂದು ಸಾರ್ವಜನಿಕವಾಗಿ ಉತ್ತರ ಕೊಡಬೇಕು. ನೀವು ನಾಯಕ ಸಮುದಾಯದ ಹಕ್ಕನ್ನು ಕಬಳಸುತ್ತಿದ್ದೀರಿ. ನೀವು ಕರ್ನಾಟಕದ ಜನತೆಗೆ ಮೋಸ ಮಾಡುತ್ತಿದ್ದೀರಿ. ಇದು ಕ್ರಿಮಿನಲ್ ಬ್ರೀಚ್ ಆಫ್ ಟ್ರಸ್ಟ್ (Criminal Breach of Trust) ಆಗುತ್ತದೆ. ಆದ್ದರಿಂದ ಈ ಕೂಡಲೇ ಸ್ಪಷ್ಟಿಕರಣ ನೀಡಬೇಕೆಂದು ಒತ್ತಾಯಿಸಿದ್ದಾರೆ.
ನಾಯಕರಾಗಿದ್ದರೆ ಎಸ್ಟಿ (ST) ಇದ್ದರೆ ನಮ್ಮ ಅಭ್ಯಂತರವಿಲ್ಲ. ಇಲ್ಲದಿದ್ದರೆ ನಿಮ್ಮ ವಿರುದ್ಧ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆ ದಾಖಲೆ ಮಾಡಬೇಕಾಗುತ್ತದೆ. ಪರಿಶಿಷ್ಟ ಪಂಗಡದವನಾಗಿ ನ್ಯಾಯದಾನದ ಹಿತದೃಷ್ಟಿಯಿಂದ ಕೇಳುತ್ತಿದ್ದೇನೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘದ ಅಧ್ಯಕ್ಷ ಸುಭಾಷ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿಯಾದ ಬಳಿಕ ಮಾಡುವ ಮೊಟ್ಟ ಮೊದಲ ಕೆಲಸ ಇದು – ಬಸವರಾಜ ಬೊಮ್ಮಾಯಿ
(Subhash has urged SriRamulu to make his caste public)