ಮೈಸೂರು: ಗ್ರಾಮಕ್ಕೆ ನುಗ್ಗಿದ್ದ ಚಿರತೆ ಮರಿಯನ್ನು ಗ್ರಾಮಸ್ಥರೇ ಕಟ್ಟಿ ಹಾಕಿ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿರುವ ಅಪರೂಪದ ಘಟನೆ ಹುಣಸೂರು ತಾಲೂಕಿನ ರಾಮಪಟ್ಟಣ ಗ್ರಾಮದಲ್ಲಿ ನಡೆದಿದೆ. ಕಾಡಂಚಿನ ಗ್ರಾಮವಾದ ರಾಮಪಟ್ಟಣಕ್ಕೆ ಆಹಾರ ಅರಸಿ ಚಿರತೆ ಮರಿ ನುಗ್ಗಿತ್ತು.
ಗ್ರಾಮಕ್ಕೆ ನುಗ್ಗಿದ್ದ ಚಿರತೆ ಮರಿ ಜನರನ್ನು ಕಂಡ ಭಯದಿಂದ ಜಮೀನಿನಲ್ಲೇ ಅವಿತು ಕುಳಿತುಕೊಂಡಿತ್ತು. ಚಿರತೆಯನ್ನು ನೋಡಿದ ಕೂಲಿ ಕಾರ್ಮಿಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಬಳಿಕ ಗ್ರಾಮಸ್ಥರು ಚಿರತೆ ಮರಿಯನ್ನು ಹುಡುಕಿ ಕಟ್ಟಿಹಾಕಿದ್ದಾರೆ. 5 ತಿಂಗಳ ಮರಿಯಾಗಿರುವುದರಿಂದ ಚಿರತೆಗೆ ಯಾವುದೇ ಅಪಾಯವಾಗಿಲ್ಲ. ಸೆರೆ ಹಿಡಿದ ಚಿರತೆ ಮರಿಯನ್ನ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.