ನೆಚ್ಚಿನ ವಾನರನ ಸಾವಿನಿಂದ ಪರಿತಪಿಸುತ್ತಿದ್ದ ಸಾರಾ, ಚಿಂಟು ಮಂದಿರ ನಿರ್ಮಿಸಿಯೇ ಬಿಟ್ಟರು!

ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಫಾರಿನ್ ಟ್ರಿಪ್​ನಲ್ಲಿದ್ದಾಗ ಅವರ ಅಚ್ಚು ಮೆಚ್ಚಿನ ಕೋತಿ ಸಾವಿಗೀಡಾಗಿತ್ತು. ಕೋತಿಯ ನೆನಪಿಗಾಗಿ ಸಾರಾ ಮಹೇಶ್ ದೇಗುಲ ಕಟ್ಟಲು ನಿರ್ಧರಿಸಿದ್ದರು. ಈಗ ಆ ದೇವಾಲಯ ಶೇಕಡ 80ರಷ್ಟು ಪೂರ್ಣಗೊಂಡಿದ್ದು, ನೆಚ್ಚಿನ ಕೋತಿಯ ವಿಗ್ರಹ ಸಿದ್ಧವಾಗಿದೆ. ಮೈಸೂರಿನ ದಟ್ಟಗಳ್ಳಿಯ ಸಾ.ರಾ ಫಾರಂನಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಕ್ಕೆ ಸಾರಾ ಮಹೇಶ್ ಭಾರಿ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಕುರಿಯ ಮೇಲೆ ಕುಳಿತ ಕೋತಿ ಚಿಂಟುವಿನ ವಿಗ್ರಹ ತಯಾರಾಗಿದೆ. 20 ಲಕ್ಷ ವೆಚ್ಚದಲ್ಲಿ ಈ ದೇವಾಲಯ ನಿರ್ಮಾಣವಾಗುತ್ತಿದ್ದು, ಖ್ಯಾತ […]

ನೆಚ್ಚಿನ ವಾನರನ ಸಾವಿನಿಂದ ಪರಿತಪಿಸುತ್ತಿದ್ದ ಸಾರಾ, ಚಿಂಟು ಮಂದಿರ ನಿರ್ಮಿಸಿಯೇ ಬಿಟ್ಟರು!
ಸಾಧು ಶ್ರೀನಾಥ್​

Updated on: Feb 07, 2020 | 1:26 PM

ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಫಾರಿನ್ ಟ್ರಿಪ್​ನಲ್ಲಿದ್ದಾಗ ಅವರ ಅಚ್ಚು ಮೆಚ್ಚಿನ ಕೋತಿ ಸಾವಿಗೀಡಾಗಿತ್ತು. ಕೋತಿಯ ನೆನಪಿಗಾಗಿ ಸಾರಾ ಮಹೇಶ್ ದೇಗುಲ ಕಟ್ಟಲು ನಿರ್ಧರಿಸಿದ್ದರು. ಈಗ ಆ ದೇವಾಲಯ ಶೇಕಡ 80ರಷ್ಟು ಪೂರ್ಣಗೊಂಡಿದ್ದು, ನೆಚ್ಚಿನ ಕೋತಿಯ ವಿಗ್ರಹ ಸಿದ್ಧವಾಗಿದೆ.

ಮೈಸೂರಿನ ದಟ್ಟಗಳ್ಳಿಯ ಸಾ.ರಾ ಫಾರಂನಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಕ್ಕೆ ಸಾರಾ ಮಹೇಶ್ ಭಾರಿ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಕುರಿಯ ಮೇಲೆ ಕುಳಿತ ಕೋತಿ ಚಿಂಟುವಿನ ವಿಗ್ರಹ ತಯಾರಾಗಿದೆ. 20 ಲಕ್ಷ ವೆಚ್ಚದಲ್ಲಿ ಈ ದೇವಾಲಯ ನಿರ್ಮಾಣವಾಗುತ್ತಿದ್ದು, ಖ್ಯಾತ ಶಿಲ್ಪ ಕಲಾವಿದ ಅರುಣ್ ವಿಗ್ರಹ ಕೆತ್ತನೆ ಕಾರ್ಯ ನಿರ್ವಹಿಸಿಕೊಂಡಿದ್ದಾರೆ. ಕೃಷ್ಣಶಿಲೆಯಲ್ಲಿ ವಿಗ್ರಹ ನಿರ್ಮಾಣವಾಗಿದೆ. ಶೇಕಡ 80ರಷ್ಟು ಕೆಲಸ ಮುಕ್ತಾಯಗೊಂಡಿದ್ದು, ಅಂತಿಮ ಹಂತದ ರೂಪ ಕೊಡುವ ಕೆಲಸ ಮಾತ್ರ ಬಾಕಿ ಇದೆ.


Published On - 12:41 pm, Fri, 7 February 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us