ಬಿಸಿಲಿನಿಂದ ರಕ್ಷಿಸಲು ಭರ್ಜರಿ ಐಡಿಯಾ: ಮೈಸೂರು ಝೂ ಪ್ರಾಣಿಗಳು ಫುಲ್ ಹ್ಯಾಪಿ
ಮೈಸೂರು: ಬೇಸಿಗೆ ಆರಂಭವಾಯ್ತು ಅಂದ್ರೆ ಸಾಕು ಸುಡು ಬಿಸಿಲು. ಹೊರಗೆ ಕಾಲಿಟ್ಟರೆ ನೆತ್ತಿ ಮೇಲೆ ಸೂರ್ಯ ನರ್ತನ ಮಾಡ್ತಾನೆ. ಈ ಬಿಸಿಲ ತಾಪಕ್ಕೆ ಮನುಷ್ಯ ಮಾತ್ರವಲ್ಲ ಪ್ರಾಣಿಗಳು ಕಂಗೆಟ್ಟು ಹೋಗಿವೆ. ಇದನ್ನ ಅರಿತ ಮೃಗಾಲಯದ ಅಧಿಕಾರಿಗಳು ಹೊಸ ಪ್ಲ್ಯಾನ್ ಮಾಡಿದ್ದಾರೆ. ತುಂಟಾಟ ಮಾಡುತ್ತಾ.. ತಣ್ಣನೆಯ ನೀರಿನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಚಿಂಪಾಂಜಿ.. ನೀರಿಗೆ ಮೈಯೊಡ್ಡಿ ಕೂಲ್ ಕೂಲ್ ಆಗುತ್ತಿರುವ ಗಜಪಡೆ.. ರಿಲ್ಯಾಕ್ಸ್ ಮೂಡ್‌ನಲ್ಲಿರುವ ಮೃಗಾಲಯದ ಪ್ರಾಣಿಗಳು.. ಪ್ರಾಣಿಗಳಿಗೂ ಸಿಕ್ಕಿದ ಶವರ್ ಸೌಭಾಗ್ಯ: ಯೆಸ್, ಮೈಸೂರಿನಲ್ಲಿರುವ ಶ್ರೀ ಚಾಮರಾಜೇಂದ್ರ […]
ಮೈಸೂರು: ಬೇಸಿಗೆ ಆರಂಭವಾಯ್ತು ಅಂದ್ರೆ ಸಾಕು ಸುಡು ಬಿಸಿಲು. ಹೊರಗೆ ಕಾಲಿಟ್ಟರೆ ನೆತ್ತಿ ಮೇಲೆ ಸೂರ್ಯ ನರ್ತನ ಮಾಡ್ತಾನೆ. ಈ ಬಿಸಿಲ ತಾಪಕ್ಕೆ ಮನುಷ್ಯ ಮಾತ್ರವಲ್ಲ ಪ್ರಾಣಿಗಳು ಕಂಗೆಟ್ಟು ಹೋಗಿವೆ. ಇದನ್ನ ಅರಿತ ಮೃಗಾಲಯದ ಅಧಿಕಾರಿಗಳು ಹೊಸ ಪ್ಲ್ಯಾನ್ ಮಾಡಿದ್ದಾರೆ.
ತುಂಟಾಟ ಮಾಡುತ್ತಾ.. ತಣ್ಣನೆಯ ನೀರಿನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಚಿಂಪಾಂಜಿ.. ನೀರಿಗೆ ಮೈಯೊಡ್ಡಿ ಕೂಲ್ ಕೂಲ್ ಆಗುತ್ತಿರುವ ಗಜಪಡೆ.. ರಿಲ್ಯಾಕ್ಸ್ ಮೂಡ್‌ನಲ್ಲಿರುವ ಮೃಗಾಲಯದ ಪ್ರಾಣಿಗಳು..
ಪ್ರಾಣಿಗಳಿಗೂ ಸಿಕ್ಕಿದ ಶವರ್ ಸೌಭಾಗ್ಯ: ಯೆಸ್, ಮೈಸೂರಿನಲ್ಲಿರುವ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿರುವ ಪ್ರಾಣಿಗಳು ಈಗ ಫುಲ್ ಹ್ಯಾಪಿಯಾಗಿವೆ. ಯಾಕಂದ್ರೆ ಇಷ್ಟು ದಿನ ಇಲ್ಲಿರುವ ಪ್ರಾಣಿಗಳು ಬಿಸಿಲಿಗೆ ಬೇಸತ್ತು ಹೋಗಿದ್ವು. ಆದ್ರೆ ಈಗ ಮೃಗಾಲಯದ ಪ್ರಾಣಿಗಳನ್ನು ಬಿಸಿಲಿನಿಂದ ರಕ್ಷಿಸಲು ಕೃತಕ ನೀರಿನ ಚಿಲುಮೆಗಳ ವ್ಯವಸ್ಥೆ ಮಾಡಲಾಗಿದೆ. ಕೃತಕ ನೀರಿನ ಚಿಲುಮೆಯಿಂದ ಚಿಮ್ಮುವ ನೀರಿಗೆ ಎಲ್ಲಾ ಪ್ರಾಣಿಗಳು ಮೈಯೊಡ್ಡಿ ಕೂಲ್ ಕೂಲ್ ಆಗುತ್ತಿವೆ.
ಚಿಂಪಾಂಜಿ, ಕರಡಿ, ಜಿರಾಫೆ, ಕಾಡೆಮ್ಮೆ, ಹುಲಿ, ಸಿಂಹಗಳು ಇರುವ ಸ್ಥಳದಲ್ಲಿ ಕೃತಕ ನೀರಿನ ಚಿಲುಮೆಗಳನ್ನು ಮಾಡಲಾಗಿದೆ. ಆದರೆ ಆನೆಗಳಿಗೆ ಶವರ್ ನಿರ್ಮಿಸಲಾಗಿದೆ. ಬಿಸಿಲು ಹೆಚ್ಚಾದಾಗ ಆನೆಗಳು ಶವರ್‌ನ ಕೆಳಗೆ ನಿಂತು ಸ್ನಾನ ಮಾಡಿ ರಿಲ್ಯಾಕ್ಸ್ ಆಗುತ್ತವೆ. ಹಾಗೇ ಹಕ್ಕಿಗಳಿಗೆ ಕುಡಿಯುವ ನೀರು, ಪರಿಸರ ಹಸಿರಾಗಿರುವಂತೆ ವ್ಯವಸ್ಥೆ ಮಾಡಲಾಗಿದೆ.
ಒಟ್ನಲ್ಲಿ ಮನುಷ್ಯರಾದ ನಾವು ಬಿಸಿಲಿನಿಂದ ತಪ್ಪಿಸಿಕೊಳ್ಳವುದಕ್ಕೆ ಎಸಿ, ತಂಪು ಪಾನೀಯಗಳ ಮೊರೆ ಹೋಗುತ್ತೇವೆ. ಆದ್ರೆ ಪ್ರಾಣಿಗಳು ಬಿಸಿಲಿನ ಬೇಗೆಗೆ ಬೆಂದು ಹೋಗುತ್ತಿವೆ. ಇದನ್ನ ಅರಿತ ಮೈಸೂರಿನ ಮೃಗಾಲಯದ ಅಧಿಕಾರಿಗಳು ಪ್ರಾಣಿಗಳನ್ನು ಕೂಲ್ ಕೂಲ್ ಮಾಡಲು ಮುಂದಾಗಿರುವುದು ನಿಜಕ್ಕೂ ಮೆಚ್ಚುವಂತಹದ್ದು.