ಕರ್ನಾಟಕದಲ್ಲಿ ಮೊದಲ ಬಿಎನ್‌ಎಸ್‌ ಪ್ರಕರಣ ದಾಖಲು: ಯಾವ ಪೊಲೀಸ್ ಠಾಣೆಯಲ್ಲಿ ಗೊತ್ತಾ?

| Updated By: ರಮೇಶ್ ಬಿ. ಜವಳಗೇರಾ

Updated on: Jul 01, 2024 | 4:56 PM

ಕರ್ನಾಟಕದಲ್ಲಿ ಮೊದಲ ಬಿಎನ್ಎಸ್ ಪ್ರಕರಣ ದಾಖಲಾಗಿದೆ. ಇಂದಿನಿಂದ ದೇಶಾದ್ಯಂತ ಜಾರಿಯಾಗುತ್ತಿರುವ ನೂತನ ಅಪರಾಧ ಕಾಯಿದೆ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಮಹಿಳೆಯೊಬ್ಬರ ಸಾವಿಗೆ ಕಾರಣನಾದ ಚಾಲಕನ ಮೇಲೆ ಪ್ರಯೋಗಿಸಲ್ಪಟ್ಟಿದೆ. ಹಾಗಾದ್ರೆ, ಎಲ್ಲಿ ಈ ಮೊದಲ ಪ್ರಕರಣ ದಾಖಲಾಗಿದ್ದು, ಯಾವ ವಿಚಾರಕ್ಕೆ ಎನ್ನುವ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಮೊದಲ ಬಿಎನ್‌ಎಸ್‌ ಪ್ರಕರಣ ದಾಖಲು: ಯಾವ ಪೊಲೀಸ್ ಠಾಣೆಯಲ್ಲಿ ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು/ ಹಾಸನ, (ಜುಲೈ 01):  ಬ್ರಿಟಿಷ್​ ವಸಾಹತು ಕಾಲದ ಕ್ರಿಮಿನಲ್‌ ಕಾನೂನುಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಇಂದಿನಿಂದ ದೇಶಾದ್ಯಂತ ನೂತನ ಅಪರಾಧ ಕಾಯಿದೆ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬಂದಿದೆ. ಇದರ ಬೆನ್ನಲ್ಲೇ ಇಂದು (ಜುಲೈ 01) ಫಸ್ಟ್​ ಡೇ ಕರ್ನಾಟಕದಲ್ಲಿ ಮೊದಲ ಬಿಎನ್ಎಸ್ ಪ್ರಕರಣ ದಾಖಲಾಗಿದೆ. ಹಾಸನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಮೊದಲ ಬಿಎನ್ಎಸ್ ಪ್ರಕರಣ ದಾಖಲಾಗಿದೆ. ವೈದ್ಯ ಶಂಕರೇಗೌಡ ಎಂಬವರು ನೀಡಿದ ದೂರಿನ ಮೇಲೆ ಪೊಲೀಸರು, ಇದನ್ನು ಭಾರತೀಯ ನ್ಯಾಯ ಸಂಹಿತೆ (ಬಿಎನ್​ಎಸ್​) ಸೆಕ್ಷನ್ 281, 106 ಅಡಿ ದಾಖಲು ಮಾಡಿಕೊಂಡಿದ್ದಾರೆ. ಸಾಗರ್ ಎಂಬ ಕಾರು ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈತ ಅತಿ ವೇಗ ಹಾಗು ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿ ಮಹಿಳೆಯ ಸಾವಿಗೆ ಕಾರಣನಾಗಿದ್ದಾನೆ ಎಂದು ದೂರಲಾಗಿದೆ.

ಕಾಶಿ ಯಾತ್ರೆ ಮುಗಿಸಿ ವಾಪಾಸ್ ಆಗಿದ್ದ ದೂರುದಾರ ಶಂಕರೇಗೌಡ ಅವರ ಅತ್ತೆ ಇಂದುಮತಿ(67) ಮತ್ತು ಮಾವ ಯೋಗೇಶ್ ಅವರನ್ನು 01/07/2024 ರಂದು ಕಾರು ಚಾಲಕ ಸಾಗರ್ ಎಂಬಾತ ಬೆಂಗಳೂರು ಕೆಐಎಎಲ್ ಏರ್ಪೋರ್ಟ್ ನಿಂದ ಪಿಕಪ್ ಮಾಡಿದ್ದ. ಆದ್ರೆ, ಕಾರು ಹಾಸನದ ಹಳೆಬೀಡು ರಸ್ತೆ ಸೀಗೆಗೇಟ್ ಸಮೀಪದ ಸೇತುವೆಯಿಂದ ಪಲ್ಟಿಯಾಗಿತ್ತು. ಈ ಘಟನೆಯಲ್ಲಿ ಇಂದುಮತಿ ಎನ್ನುವರು ಮೃತಪಟ್ಟಿದ್ದರು. ಇನ್ನು ಇಂದುಮತಿ ಪತಿ ಯೋಗೇಶ್​ (ದೂರುದಾರರ ಮಾವ) ಯೋಗೇಶ್ ಬಚಾವ್ ಆಗಿದ್ದರು.

ಇದನ್ನೂ ಓದಿ: ಐಪಿಸಿ, ಸಿಆರ್​ಪಿಸಿ ಇನ್ನು ಗತ ಇತಿಹಾಸ; ಇಂದಿನಿಂದ ಹೊಸ ಕ್ರಿಮಿನಲ್ ಕಾನೂನುಗಳು ಅಸ್ತಿತ್ವಕ್ಕೆ

ಈ ಹಿನ್ನೆಲೆಯಲ್ಲಿ ಇದೀಗ (ಇಂದು (ಜುಲೈ 1) ಮೃತ  ಇಂದುಮತಿಯವರ ಅಳಿಯ ಶಂಕರೇಗೌಡ ಅವರು ಕಾರು ಚಾಲಕ ಸಾಗರ್​ ವಿರುದ್ಧ ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಾರೆ. ಈ ದೂರಿ ಮೇರೆಗೆ ಹಾಸನ ಗ್ರಾಮೀಣ ಪೊಲೀಸರು, BNS 281,106 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಬಿಎನ್ಎಸ್ ಅಡಿ ಮೊದಲ ಪ್ರಕರಣ ಹಾಸನದಲ್ಲಿ ದಾಖಲಾದಂತಾಗಿದೆ.

ನೂರಕ್ಕೂ ಹೆಚ್ಚು ವರ್ಷಗಳಿಂದ ಜಾರಿಯಲ್ಲಿದ್ದ ಹಳೆಯ ಕ್ರಿಮಿನಲ್ ಕಾನೂನುಗಳಿಗೆ ಕೇಂದ್ರ ಸರ್ಕಾರ ತಿಲಾಂಜಲಿ ಹೇಳಿದೆ. ಐಪಿಸಿ, ಸಿಆರ್​ಪಿಸಿ, ಎವಿಡೆನ್ಸ್ ಆ್ಯಕ್ಟ್ ಬದಲು ಭಾರತೀಯ ನ್ಯಾಯ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ. ಸಾಕ್ಷ್ಯ ಅಧಿನಿಯಮ ಇಂದಿನಿಂದ ಜಾರಿಗೆ ಬಂದಿದೆ. ತ್ವರಿತವಾಗಿ ವಿಚಾರಣೆ ಮತ್ತು ನ್ಯಾಯ ಸಿಗುವ ರೀತಿಯಲ್ಲಿ ಕಾನೂನು ರೂಪಿಸಲಾಗಿದ್ದು, ಇದು ಇಂದಿನಿಂದ (ಜುಲೈ 01) ಜಾರಿಗೆ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ