Karnataka Rain: ಬೆಂಗಳೂರು ಸೇರಿದಂತೆ ಮುಂದಿನ 3 ದಿನ ರಾಜ್ಯಾದ್ಯಂತ ಮಳೆ ಸಾದ್ಯತೆ: ಹವಾಮಾನ ಇಲಾಖೆ

|

Updated on: Apr 01, 2023 | 7:21 AM

ರಾಜಧಾನಿ ಸೇರಿದಂತೆ ಮುಂದಿನ 3 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Rain: ಬೆಂಗಳೂರು ಸೇರಿದಂತೆ ಮುಂದಿನ 3 ದಿನ ರಾಜ್ಯಾದ್ಯಂತ ಮಳೆ ಸಾದ್ಯತೆ: ಹವಾಮಾನ ಇಲಾಖೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ರಾಜಧಾನಿ ಸೇರಿದಂತೆ ಮುಂದಿನ 3 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಕರಾವಳಿ, ಉತ್ತರ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು (Bengaluru) ನಗರದಲ್ಲಿಂದು ಗುಡುಗು ಸಹಿತ ಮಳೆಯಾಗುವ ಸಂಭವ ಇದೆ. ದಕ್ಷಿಣ ಒಳನಾಡಿನ ಪ್ರದೇಶಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ,‌ ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರದಲ್ಲೂ ಕೂಡ ಗುಡುಗು ಸಹಿತ ಭಾರೀ ಮಳೆಯಾಗಬಹುದು.

ಉತ್ತರ ಒಳನಾಡಿನ ಬೀದರ್, ಕಲಬುರಗಿ ಜಿಲ್ಲೆಯಲ್ಲೂ ಮಳೆ ಸಂಭವವಿದ್ದು, ತಗ್ಗುಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ರಾಜ್ಯದ ವಿವಿಧ ನಗರಗಳ ಹವಾಮಾನ ವರದಿ

ಬೆಂಗಳೂರು: ಗರಿಷ್ಠ 32 ಕನಿಷ್ಠ 21 ಡಿಗ್ರಿ ಸೆಲ್ಸಿಯಸ್​, ಮಂಗಳೂರು: ಗರಿಷ್ಠ 32 ಕನಿಷ್ಠ 24 , ಶಿವಮೊಗ್ಗ: ಗರಿಷ್ಠ 37 ಕನಿಷ್ಠ 18 , ಬೆಳಗಾವಿ: ಗರಿಷ್ಠ 36 ಕನಿಷ್ಠ 18 , ಮೈಸೂರು: ಗರಿಷ್ಠ 34 ಕನಿಷ್ಠ 21, ಮಂಡ್ಯ: ಗರಿಷ್ಠ 35 ಕನಿಷ್ಠ 21 , ಮಂಡ್ಯ: 35-21, ಮಡಿಕೇರಿ: ಗರಿಷ್ಠ 31ಕನಿಷ್ಠ 16 , ರಾಮನಗರ: ಗರಿಷ್ಠ 34 ಕನಿಷ್ಠ 22 ಡಿಗ್ರಿ ಸೆಲ್ಸಿಯಸ್​ ತಾಪಮಾನ ಇರಲಿದೆ.

ಹಾಸನ: ಗರಿಷ್ಠ 34 ಕನಿಷ್ಠ 18 ​, ಚಾಮರಾಜನಗರ: ಗರಿಷ್ಠ 33 ಕನಿಷ್ಠ 22 ​, ಚಿಕ್ಕಬಳ್ಳಾಪುರ: ಗರಿಷ್ಠ 32 ಕನಿಷ್ಠ 19 ​, ಕೋಲಾರ: ಗರಿಷ್ಠ 32 ಕನಿಷ್ಠ 21 ​, ತುಮಕೂರು: ಗರಿಷ್ಠ 33 ಕನಿಷ್ಠ 20, ಉಡುಪಿ: ಗರಿಷ್ಠ 33 ಕನಿಷ್ಠ 24 ​, ಕಾರವಾರ: ಗರಿಷ್ಠ 33 ಕನಿಷ್ಠ 23, ಚಿಕ್ಕಮಗಳೂರು: ಗರಿಷ್ಠ 34 ಕನಿಷ್ಠ 17, ದಾವಣಗೆರೆ: ಗರಿಷ್ಠ 37 ಕನಿಷ್ಠ 19, ಹುಬ್ಬಳ್ಳಿ: ಗರಿಷ್ಠ 37 ಕನಿಷ್ಠ 19, ಚಿತ್ರದುರ್ಗ: ಗರಿಷ್ಠ 36 ಕನಿಷ್ಠ 19, ಹಾವೇರಿ: ಗರಿಷ್ಠ 37 ಕನಿಷ್ಠ 19 ಡಿಗ್ರಿ ಸೆಲ್ಸಿಯಸ್​ ತಾಪಮಾನ ಇರಲಿದೆ.

ಬಳ್ಳಾರಿ: ಗರಿಷ್ಠ 38 ಕನಿಷ್ಠ 23, ಗದಗ: ಗರಿಷ್ಠ 37 ಕನಿಷ್ಠ 21, ಕೊಪ್ಪಳ: ಗರಿಷ್ಠ 36 ಕನಿಷ್ಠ 21, ರಾಯಚೂರು: ಗರಿಷ್ಠ 38 ಕನಿಷ್ಠ 23, ಯಾದಗಿರಿ: ಗರಿಷ್ಠ 37 ಕನಿಷ್ಠ 22, ವಿಜಯಪುರ: ಗರಿಷ್ಠ 36 ಕನಿಷ್ಠ 22, ಬೀದರ್: ಗರಿಷ್ಠ 35 ಕನಿಷ್ಠ 21, ಕಲಬುರಗಿ: ಗರಿಷ್ಠ 37 ಕನಿಷ್ಠ 22, ಬಾಗಲಕೋಟೆ: ಗರಿಷ್ಠ 37 ಕನಿಷ್ಠ 22 ಡಿಗ್ರಿ ಸೆಲ್ಸಿಯಸ್​ ತಾಪಮಾನ ಇರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ