AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರ ಜಿಲ್ಲಾಧಿಕಾರಿಗಳ ಸಹಿ ಫೋರ್ಜರಿ; 1 ಕೋಟಿಗೂ ಅಧಿಕ ಹಣ ಲೂಟಿ ಮಾಡಿದ ಡಿ.ಗ್ರೂಪ್ ನೌಕರ

ಆತ ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಹೊರಗುತ್ತಿಗೆ ಡಿ.ಗ್ರೂಪ್ ನೌಕರ. ಆದರೆ ಆತ ಮಾಡಿದ ಕೆಲಸಕ್ಕೆ ಇಡೀ ಜಿಲ್ಲಾಡಳಿತವೇ ಒಂದು ಕ್ಷಣ ದಂಗು ಬಡಿದಿದೆ. ಜಿಲ್ಲಾಧಿಕಾರಿಗಳ ಚೆಕ್​ಗೆ ಪೋರ್ಜರಿ ಸಹಿ‌ ಮಾಡಿ ಒಂದು ಕೋಟಿಗೂ ಹೆಚ್ಚು ಹಣ ಲಪಟಾಯಿಸಿದ್ದಾನೆ.

ಅಪರ ಜಿಲ್ಲಾಧಿಕಾರಿಗಳ ಸಹಿ ಫೋರ್ಜರಿ; 1 ಕೋಟಿಗೂ ಅಧಿಕ ಹಣ ಲೂಟಿ ಮಾಡಿದ ಡಿ.ಗ್ರೂಪ್ ನೌಕರ
ಆರೋಪಿ ರಾಜೇಶ್
ಕಿರಣ್ ಹನುಮಂತ್​ ಮಾದಾರ್
|

Updated on: Apr 01, 2023 | 7:51 AM

Share

ಚಾಮರಾಜನಗರ: ಈ ಫೋಟೋದಲ್ಲಿರುವ ಈತನ ಹೆಸರು ರಾಜೇಶ್ ಎಂಬಾತ, ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಗ್ರಾಮದ ಈತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದ. ಇತ ಗ್ರಾಮೀಣ ರಸಪ್ರಶ್ನೆ ಯೋಜನೆ ಖಾತೆಯಲ್ಲಿನ 1.20 ಕೋಟಿ ರೂಪಾಯಿಯನ್ನ ಎಗರಿಸಿ ಈಗ ಕಂಬಿ ಎಣಿಸುತ್ತಿದ್ದಾನೆ. ಹೌದು ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಆನಂದ್ ಅವರ ಸಹಿಯನ್ನ ಫೋರ್ಜರಿ ಮಾಡಿ ಖಾತೆಯಲ್ಲಿನ ಕೋಟ್ಯಂತರ ರೂಪಾಯಿಯನ್ನ ಲಪಟಾಯಿಸಿದ್ದಾನೆ. ಇದೀಗ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕ್ ಖಾತೆ ನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕಿ ಸೌಮ್ಯ ಅವರನ್ನು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಮಾನತು ಮಾಡಿ ಆದೇಶಿಸಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿ ಬೆಂಗಳೂರಿನಲ್ಲಿ ಹಾಯಾಗಿದ್ದ ರಾಜೇಶ್​ನನ್ನು ಚಾಮರಾಜನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.

ಇನ್ನು ಈತ ಅಪರ ಜಿಲ್ಲಾಧಿಕಾರಿಗಳ ಖಾತೆಯಲ್ಲಿದ್ದ ಸರ್ಕಾರಿ ಕಚೇರಿ ಕಟ್ಟಡಗಳ ಅನುದಾನ ಸಹ ದುರುಪಯೋಗ ಮಾಡಿದ್ದಾನೆ ಎನ್ನಲಾಗುತ್ತಿದೆ. ಯಾರಿಗೂ ಗೊತ್ತಾಗದಂತೆ ಪ್ರತಿಸಲ ಚೆಕ್ ಬುಕ್ ಕದ್ದು, ತಾನೇ ಅಪರ ಜಿಲ್ಲಾಧಿಕಾರಿಗಳ ಸಹಿ ಪೋರ್ಜರಿ ಮಾಡಿ ಹಣ ಡ್ರಾ ಮಾಡಿದ್ದಾನೆ. ಒಮ್ಮೆ ತನ್ನ ಖಾತೆಗೆ ಹಣ ರವಾನೆ ಮಾಡಿದರೆ. ಕೆಲವೊಮ್ಮೆ ತನ್ನ ಆತ್ಮೀಯರ ಖಾತೆಗೆ ಹಣ ಪಾವತಿಸಿದ್ದಾನೆ. ಜಿಲ್ಲಾಧಿಕಾರಿ ಕಚೇರಿಯಲ್ಲೇ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನ ತನ್ನ ಗುರಿ ಸಾಧನೆಯ ಅಡ್ಡೆಯನ್ನಾಗಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಒಬ್ಬ ಡಿ. ಗ್ರೂಪ್ ನೌಕರ ಜಿಲ್ಲಾಡಳಿತ ಖಜಾನೆಯನ್ನೆ ಅಕ್ರಮ ಲೂಟಿ ಮಾಡಿದ್ದು ನಿಜಕ್ಕೂ ಪೊಲೀಸರಿಗೂ ಆಶ್ಚರ್ಯವಾಗಿದೆ.

ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಸಾರ್ವಜನಿಕರ 819 ಕೋಟಿ ಹಣ ಲೂಟಿ ಮಾಡಿದ್ದಾರೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಗಂಭೀರ ಆರೋಪ

ಒಟ್ಟಿನಲ್ಲಿ ಈ ಪ್ರಕರಣ ಗಮನಿಸಿದರೆ ಕೇವಲ ಒಬ್ಬನಿಂದ ಈ ಕೆಲಸ ಆಗಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತೆ. ಪ್ರತಿ ವರ್ಷ ಆಡಿಟ್ ನಡೆದರೂ ಕಳೆದ ಮೂರು ವರ್ಷದಿಂದ ಈ ಬಗ್ಗೆ ಗೊತ್ತಾಗದೆ ಇರುವುದರಿಂದ ಇದಕ್ಕೆ ಇನ್ನು ಸಾಕಷ್ಟು ಜನರ ಕುಮ್ಮಕ್ಕು ಇದೆ ಎಂಬ ಸಂಶಯ ಕಾಡುತ್ತಿದ್ದು, ಕಸ್ಟಡಿಯಲ್ಲಿರುವ ರಾಜೇಶನೇ ಇದಕ್ಕೆಲ್ಲ ಉತ್ತರ ಹೇಳಬೇಕಿದೆ.

ವರದಿ: ದಿಲೀಪ್ ಚೌಡಹಳ್ಳಿ ಟಿವಿ9 ಚಾಮರಾಜನಗರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ