ಹಾಸನ: ರಾಮನವಮಿ ಆಚರಣೆ ವೇಳೆ 2 ಗುಂಪುಗಳ ನಡುವೆ ಮಾರಾಮಾರಿ; ಅಪ್ರಾಪ್ತ ಬಾಲಕರಿಗೆ ಚಾಕು ಇರಿತ
ದೇಶದಾದ್ಯಂತ ರಾಮನವಮಿ ಅದ್ದೂರಿಯಾಗಿ ಜರುಗಿದೆ. ಅದರಂತೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ರಾಮನವಮಿ ಹಿನ್ನೆಲೆ ಮೆರವಣೆಗೆ ಹಮ್ಮಿಕೊಳ್ಳಲಾಗಿದ್ದು. ಇದೇ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ಶುರುವಾಗಿದ್ದು, ಅಪ್ರಾಪ್ತ ಬಾಲಕರಿಗೆ ಚಾಕು ಇರಿಯಲಾಗಿದೆ.
ಹಾಸನ: ದೇಶದಾದ್ಯಂತ ರಾಮನವಮಿ (Ramnavami)ಅದ್ದೂರಿಯಾಗಿ ಜರುಗಿದೆ. ಅದರಂತೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ರಾಮನವಮಿ ಹಿನ್ನೆಲೆ ಮೆರವಣೆಗೆ ಹಮ್ಮಿಕೊಳ್ಳಲಾಗಿದ್ದು. ಇದೇ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ಶುರುವಾಗಿದೆ. ಈ ಸಂದರ್ಭದಲ್ಲಿ ಅನ್ಯಕೋಮಿನ ಯುವಕರ ಗುಂಪೊಂದು ಇಬ್ಬರು ಅಪ್ರಾಪ್ತ ಬಾಲಕರಿಗೆ ಚಾಕುವಿನಿಂದ ಇರಿದಿರುವ ಘಟನೆ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ನಡೆದಿದೆ. ಗಾಯಗೊಂಡ ಮುರಳಿ, ಹರ್ಷಗೆ ಎಂಬ ಬಾಲಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ನಡೆಸಲಾಗುತ್ತಿದ್ದ ಖುರಾನ್ ಪಠಣ ವಿವಾದ
ಇನ್ನು ವಿಶ್ವ ವಿಖ್ಯಾತ ಬೇಲೂರಿನ ಐತಿಹಾಸಿಕ ಚನ್ನಕೇಶವಸ್ವಾಮಿ ರಥೊತ್ಸವದ ವೇಳೆ ನಡೆಸಲಾಗುತ್ತಿದ್ದ ಖುರಾನ್ ಪಠಣ ಈ ವರ್ಷ ವಿವಾದದ ಸ್ವರೂಪ ಪಡೆದುಕೊಂಡಿದೆ, ಈ ವರ್ಷದಿಂದ ರಥೋತ್ಸವದ ವೇಳೆ ಖುರಾನ್ ಪಠಣ ಬೇಡಾ ಎಂದು ಹಿಂದೂಪರ ಸಂಘಟನೆಗಳು ಹೋರಾಟ ನಡೆಸಿ ಮೇ 3ರ ಒಳಗೆ ತೀರ್ಮಾನ ಮಾಡದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ, ಇದೀಗ ಈ ಹೋರಾಟ ರಾಜ್ಯ ಪುರಾತತ್ವ ಇಲಾಖೆಯ ಅಂಗಳಕ್ಕೆ ತಲುಪಿದೆ. ಶತಮಾನಗಳಿಂದ ನಡೆದುಕೊಂಡು ಬರ್ತಿದ್ದ ಸಂಪ್ರದಾಯ ಮುಂದುವರೆಸಬೇಕು ಎನ್ನೋ ಒತ್ತಾಯ ಒಂದೆಡೆಯಾದ್ರೆ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಆಚರಣೆ ಬೇಡಾ ಎನ್ನೋ ಒತ್ತಾಯ ಹಿಂದುಪರ ಸಂಘಟನೆಗಳಿಂದ ಕೇಳಿ ಬಂದಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಈ ಕೋಮು ಗಲಭೆ ಸೃಷ್ಟಿಯಾಗಿದೆ.
ಇದನ್ನೂ ಓದಿ:ಐತಿಹಾಸಿಕ ಕರಗ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ; ಇಂದಿನಿಂದ 11 ದಿನ ಸಂಭ್ರಮ
ಪ್ರತಿವರ್ಷ ನಡೆಯುವ ಶ್ರೀ ಚನ್ನಕೇಶವಸ್ವಾಮಿ ರಥೋ್ತ್ಸವದ ವೇಳೆ ಮೇದೂರಿನ ಖಾಜಿಗಳು ರಥೋತ್ಸವದ ಸಂದರ್ಭ ಖುರಾನ್ ಪಠಣ ಮಾಡೋದು ಸಂಪ್ರದಾಯ, ಆದ್ರೆ ಈ ಸಂಪ್ರದಾಯವನ್ನ 1932 ರಿಂದೀಚೆಗೆ ಸೇರಿಸಲಾಗಿದೆ. 1931ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಕೋಮುಗಲಭೆ ಬಳಿಕ ಕೋಮುಸಾಮರಸ್ಯದ ಹೆಸರಿನಲ್ಲಿ ಅಂದಿನ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಸೇರಿಸಿದ್ದಾರೆ. ಈ ಹಿಂದೆ ಈ ಆಚರಣೆ ಇರಲಿಲ್ಲ ಎನ್ನೋದು ಹಿಂದೂಪರ ಸಂಘಟನೆಗಳ ವಾದ, ಈ ಬಗ್ಗೆ ಹಾಸನದ ವೈದ್ಯ ಡಾ|ರಮೇಶ್ ದಾಖಲೆಗಳ ಸಮೇತ ಬರೆದಿರುವ ಪುಸ್ತಕದಲ್ಲಿ ಬೇಲೂರಿನ ಶ್ರೀ ಚನ್ನಕೇಶವನಿಗೆ ಖುರಾನ್ ಪಠಣ ಬೇಕಿಲ್ಲ. ಈ ಆಚರಣೆಯೇ ಇಲ್ಲ ಎನ್ನೋದನ್ನ ಹೇಳಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:35 am, Fri, 31 March 23