ಐತಿಹಾಸಿಕ ಕರಗ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ; ಇಂದಿನಿಂದ 11 ದಿನ ಸಂಭ್ರಮ

ಇಂದು(ಮಾರ್ಚ್ 30) ತಿಗಳರಪೇಟೆಯ ಧರ್ಮರಾಯ ದೇಗುಲದಲ್ಲಿ ಬೆಳ್ಳಿ ರಥೋತ್ಸವಕ್ಕೆ ಹಾಗೂ ದ್ರೌಪದಿ ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ರಾತ್ರಿ 1 ಗಂಟೆಗೆ ರಥೋತ್ಸವದ ಜೊತೆಗೆ ಬೆಳಗಿನ ಜಾವ 3 ಗಂಟೆಗೆ ಧ್ವಜ ಸ್ತಂಭ ನೆಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯ್ತು.

Follow us
ಆಯೇಷಾ ಬಾನು
|

Updated on:Mar 30, 2023 | 10:43 AM

ಬೆಂಗಳೂರು: ಬೆಂಗಳೂರಿನ ಸಾಂಸ್ಕೃತಿಕ ಹಿರಿಮೆ ಸಾರೋ, ವಿಶ್ವ ವಿಖ್ಯಾತ ಬೆಂಗಳೂರು ಧರ್ಮರಾಯಸ್ವಾಮಿ ಕರಗ(Bengaluru Karga) ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದೆ. 11 ದಿನಗಳ ಕಾಲ ನಡೆಯಲಿರುವ ಈ ಐತಿಹಾಸಿಕ ಕರಗ ಮಹೋತ್ಸವ ಏಪ್ರಿಲ್ 09 ರವರೆಗೆ ನಡೆಯಲಿದ್ದು, ಇಂದು(ಮಾರ್ಚ್ 30) ತಿಗಳರಪೇಟೆಯ ಧರ್ಮರಾಯ ದೇಗುಲದಲ್ಲಿ ಬೆಳ್ಳಿ ರಥೋತ್ಸವಕ್ಕೆ ಹಾಗೂ ದ್ರೌಪದಿ ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ರಾತ್ರಿ 1 ಗಂಟೆಗೆ ರಥೋತ್ಸವದ ಜೊತೆಗೆ ಬೆಳಗಿನ ಜಾವ 3 ಗಂಟೆಗೆ ಧ್ವಜ ಸ್ತಂಭ ನೆಡುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಯ್ತು. ಬೆಳಗಿನ ಜಾವ 3 ಗಂಟೆಯ ನಂತರ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಲಾಯಿತು.

ಏಪ್ರಿಲ್ 6 ರಂದು ರಾತ್ರಿ ಕರಗ ಮೆರವಣಿಗೆ ನಡೆಯಲಿದ್ದು, ಅಂದು ರಾತ್ರಿ 12:30 ರ ಬಳಿಕ ದ್ರೌಪದಮ್ಮನ ಕರಗ ಕುಂಬಾರಪೇಟೆ, ನಗರ್ತಪೇಟೆ ಗೊಲ್ಲರಪೇಟೆಗಳಲ್ಲಿ ಸಂಚಾರಿಸಲಿದೆ. ಸಂಪ್ರದಾಯದಂತೆ ಮಸ್ತಾನ್ ಸಾಬ್ ದರ್ಗಾಕ್ಕೂ ಕೂಡ ಕರಗ ಭೇಟಿ ನೀಡಲಿದೆ. ಇನ್ನು ಏಪ್ರಿಲ್ 7 ರಂದು ಬೆಳಗ್ಗೆ ಧರ್ಮರಾಯಸ್ವಾಮಿ ದೇವಾಲಯ ತಲುಪಿ ಏಪ್ರಿಲ್ 8 ರ ಸಂಜೆ 4 ಗಂಟೆಗೆ ವಸಂತೋತ್ಸವ ಹಾಗೂ ರಾತ್ರಿ 12ಕ್ಕೆ ಧ್ವಜರೋಹಣ ಮೂಲಕ 2023 ರ ಕರಗಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ: ಅರಸು ಕುಂಜುರಾಯ ದೈವದ ಉತ್ಸವದ ವೇಳೆ ನಡೆಯಿತು ಪವಾಡ: ಸ್ವತಃ ಕಣ್ಣಾರೆ ಕಂಡು ಅಚ್ಚರಿ ಪಟ್ಟ ದೈವ ಆರಾಧಕರು

ಇಂದಿನಿಂದ ಐತಿಹಾಸಿಕ ಕರಗ ಉತ್ಸವಕ್ಕೆ ಚಾಲನೆ ಸಿಕಿದ್ದು, ಕರಗ ಶಕ್ತ್ಯೋತ್ಸವ ಈ ಬಾರಿ ಅದ್ದೂರಿಯಾಗಿ ನಡೆಯಲಿದೆ. ಹೀಗಾಗಿ ವಹ್ನೀ ಕುಲ ಕ್ಷತ್ರೀಯರ ಮನೆಗಳಲ್ಲಿ ಸಂತಸ ಮನೆಮಾಡಿದ್ದು,‌ ನಗರದ ಧರ್ಮರಾಯ ಸ್ವಾಮಿ ದೇವಾಲಯ ಆವರಣವೂ ಕರಗ ಶಕ್ತ್ಯೋತ್ಸವಕ್ಕೆ ಸಿದ್ಧಗೊಂಡಿದೆ.

ಬೆಂಗಳೂರು ಕರಗ ಬಗ್ಗೆ ತಿಳಿಯಬೇಕಾದ ಸಂಗತಿಗಳು

  • ಬೆಂಗಳೂರು ಕರಗವನ್ನು ಸಾಂಪ್ರದಾಯಿಕವಾಗಿ ತಮಿಳು ಮಾತನಾಡುವ ತಿಗಳರು ಎಂದು ಕರೆಯಲ್ಪಡುವವರುಕರಗಹಬ್ಬವನ್ನು ವಿಜೃಂಭಣೆಯಿಂದ ಮಾಡುತ್ತಾರೆ. ಕಾಟನ್‌ಪೇಟೆಯಲ್ಲಿರುವ 18 ನೇ ಶತಮಾನದ ಮುಸ್ಲಿಂ ಸಂತನ ಸಮಾಧಿಗೆ ಭೇಟಿ ಮಾಡಿ ಮೆರವಣಿಗೆ ಮೂಲಕ ಕರಗ ಆಚರಿಸಲಾಗುತ್ತೆ.
  • ‘ಕರಗ’ ಎಂಬುದು ಹೂವಿನ ಮಣ್ಣಿನ ಮಡಕೆ ಎಂದು ಅನುವಾದಿಸುತ್ತಾರೆ. ಸಾಮಾನ್ಯವಾಗಿ ಮಹಿಳೆಯಂತೆ ವೇಷಭೂಷಣ ಧರಿಸಿದ ತಿಗಳರ ಪುರುಷರು ಕರಗವನ್ನು ಹೊತ್ತುತ್ತಾರೆ. ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದು ದ್ರೌಪದಿ ‘ಆದಿ ಶಕ್ತಿ’ ರೂಪದಲ್ಲಿ ಹಿಂದಿರುಗುತ್ತಾಳೆ ಎಂದು ಈ ಸಮುದಾಯದ ಜನರು ನಂಬುತ್ತಾರೆ.
  • ಐತಿಹಾಸಿಕ ‘ಬೆಂಗಳೂರು ಕರಗ’ವು ನಗರದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವಿನ ಏಕತೆಯನ್ನು ಪ್ರದರ್ಶಿಸುತ್ತದೆ.
  • ಈ ವರ್ಷ ದ್ರೌಪದಿ ದೇವಿ ಕರಗ ಶಕ್ತ್ಯೋಸ್ತವದಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:50 am, Thu, 30 March 23