ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಇಂದಿನಿಂದ ಮೊಬಲಿಟಿ ಕಾರ್ಡ್ ಲಭ್ಯ, ಏನಿದರ ವಿಶೇಷ?

ಒಂದು ದೇಶ, ಒಂದು ಕಾರ್ಡ್ ಘೋಷಣೆ ಅಡಿ ಈ ನೂತನ ವ್ಯವಸ್ಥೆ ಜಾರಿ ಮಾಡಲಾಗಿದೆ. ಇಂದಿನಿಂದ ನ್ಯಾಷನಲ್‌ ಕಾಮನ್‌ ಮೊಬಲಿಟಿ ಕಾರ್ಡ್‌ (ಎನ್‌ಸಿಎಂಸಿ) ಪ್ರಯಾಣಿಕರಿಗೆ ಲಭ್ಯವಾಗಲಿದೆ.

Follow us
|

Updated on:Mar 30, 2023 | 10:38 AM

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ(Namma Metro) ಗುಡ್ ನ್ಯೂಸ್. ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಇಂದಿನಿಂದ (ಮಾರ್ಚ್ 30) ನ್ಯಾಷನಲ್‌ ಕಾಮನ್‌ ಮೊಬಲಿಟಿ ಕಾರ್ಡ್‌ (ಎನ್‌ಸಿಎಂಸಿ) ಪ್ರಯಾಣಿಕರಿಗೆ ಲಭ್ಯವಾಗಲಿದೆ. ಬೆಂಗಳೂರು ಮೆಟ್ರೋ ರೈಲ್ವೆ ನಿಗಮ(ಬಿಎಂಆರ್​ಸಿಎಲ್) ಇಂದಿನಿಂದ ನೂತನ ವ್ಯವಸ್ಥೆಯನ್ನು ಜನರಿಗೆ ನೀಡಿದೆ. ಒಂದು ದೇಶ, ಒಂದು ಕಾರ್ಡ್ ಘೋಷಣೆ ಅಡಿ ಈ ನೂತನ ವ್ಯವಸ್ಥೆ ಜಾರಿ ಮಾಡಲಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಆರ್‌ಬಿಎಲ್‌ ಬ್ಯಾಂಕ್‌ ಸಹಯೋಗದಲ್ಲಿ ರುಪೇ ಎನ್‌ಸಿಎಂಸಿ ಕಾರ್ಡ್‌ ಪೂರೈಕೆಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಕಾರ್ಡನ್ನು ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ನಂತೆ ರಿಚಾರ್ಜ್‌ ಮಾಡಿಸಿಕೊಂಡು ಮೆಟ್ರೋ ಪ್ರಯಾಣ ಮಾಡಬಹುದು. ಕೇವಲ ಮೆಟ್ರೋ ಅಷ್ಟೇ ಅಲ್ಲದೇ ಮೆಟ್ರೋದಿಂದಾಚೆಗೂ ಕಾರ್ಡ್ ಬಳಕೆ ಮಾಡಬಹುದು. ಕಾರ್ಡ್ ಬಳಸಿ ಶಾಪಿಂಗ್, ಇಂಧನ ಖರೀದಿ, ಟೋಲ್ ಶುಲ್ಕ ಪಾವತಿ ಸೇರಿದಂತೆ ಇತರೆ ಪಾವತಿಗಳನ್ನು ಮಾಡಬಹುದು. ಕಾರ್ಡ್ ಬಳಕೆಗಾಗಿ ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಆರ್​ಬಿಎಲ್ ಬ್ಯಾಂಕ್ ನಿಂದ ಪಿಓಎಸ್ ಮೆಷಿ‌ನ್ ಗಳ ವ್ಯವಸ್ಥೆ ಮಾಡಲಾಗಿದೆ. ನಗರದ 6 ಲಕ್ಷಕ್ಕೂ ಹೆಚ್ಚಿನ ಮೆಟ್ರೋ ಪ್ರಯಾಣಿಕರಿಗೆ ಈ ಕಾರ್ಡ್ ಬಳಕೆಗೆ ಲಭ್ಯವಾಗಲಿದೆ. ನಿಲ್ದಾಣಗಳಲ್ಲಿ ಹಾಗೂ ಆರ್‌ಬಿಎಲ್‌ ಬ್ಯಾಂಕ್‌ನ MoBank ಆ್ಯಪ್‌ ಮೂಲಕವೂ ಎನ್‌ಸಿಎಂಸಿ ಕಾರ್ಡನ್ನು ರಿಚಾರ್ಜ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: BMRCL Recruitment 2023: ನಮ್ಮ ಮೆಟ್ರೋ ನೇಮಕಾತಿ: PUC ಪಾಸಾದವರಿಗೆ ಸುವರ್ಣಾವಕಾಶ

ಕಾರ್ಡಿನ ವಿಶೇಷತೆಗಳೇನು?

  • ಕಾರ್ಡ್ ಮೂಲಕ ರಿಚಾರ್ಜ್ ಸಾಧ್ಯ.
  • ಕಾರ್ಡ್ ಬಳಕೆ ಮಾಡಿ ಪೆಟ್ರೋಲ್, ಡಿಸೇಲ್ ಭರ್ತಿ ಮಾಡಿಸಬಹುದು.
  • ಶಾಪಿಂಗ್, ಟೋಲ್, ಪಾರ್ಕಿಂಗ್ ಪಾವತಿ ಕೂಡ ಮಾಡಬಹುದು.
  • ಈ ಕಾರ್ಡ್ ನ್ನ ಮೆಟ್ರೋ ನಿಲ್ದಾಣ ಮತ್ತು ಮೊಬೈಲ್ ಆ್ಯಪ್ ಮೂಲಕವು ರಿಚಾರ್ಜ್ ಮಾಡಿಕೊಳ್ಳಬಹುದು

    ದೇಶದ ಎರಡನೇ ಅತಿದೊಡ್ಡ ಮೆಟ್ರೋ ನೆಟ್​ವರ್ಕ್ ಆಗಿ ಹೊರಹೊಮ್ಮಿದ ಬೆಂಗಳೂರು ನಮ್ಮ ಮೆಟ್ರೋ

    ಬೆಂಗಳೂರು: ಬಹು ನಿರೀಕ್ಷಿತ ಕೆಆರ್ ಪುರಂ-ವೈಟ್‌ಫೀಲ್ಡ್ ಮೆಟ್ರೋ (KR Puram-Whitefield Metro) ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾರ್ಚ್ 25ರಂದು ಉದ್ಘಾಟಿಸುವ ಮೂಲಕ ಬೆಂಗಳೂರು ನಮ್ಮ ಮೆಟ್ರೋ (Namma Metro) ದೇಶದ ಎರಡನೇ ಅತಿದೊಡ್ಡ ಮೆಟ್ರೋ ನೆಟ್​ವರ್ಕ್ ಆಗಿ ಹೊರಹೊಮ್ಮಿದೆ. 63 ನಿಲ್ದಾಣಗಳೊಂದಿಗೆ 69.66 ಕಿ.ಮೀ ಕಾರ್ಯಾಚರಣೆ ನಡೆಸುತ್ತಿರುವ ನಮ್ಮ ಮೆಟ್ರೋ ದೆಹಲಿಯ ನಂತರ ದೇಶದ ಎರಡನೇ ಅತಿದೊಡ್ಡ ಮೆಟ್ರೋ ನಿಲ್ದಾಣವಾಗಿದೆ. ಪ್ರಧಾನಮಂತ್ರಿಯವರು ಉದ್ಘಾಟಿಸಿರುವ ಈ ನಿರ್ದಿಷ್ಟ ವಿಸ್ತರಣೆಯು ಬೆಂಗಳೂರಿನ ಪೂರ್ವ ಅಂಚನ್ನು ನೈಋತ್ಯ ಅಂಚಿಗೆ ಸೇರುತ್ತದೆ.

    ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗಿನ ನೇರಳೆ ಮಾರ್ಗದ ಒಟ್ಟು ಉದ್ದವು ಸುಮಾರು 42.5 ಕಿಮೀ ಹೊಂದಿದ್ದು, ಇದು ಕೆಆರ್ ಪುರಂನಲ್ಲಿ (ಬ್ಲೂ ಲೈನ್) ಇಂಟರ್‌ಚೇಂಜ್‌ ಹೊಂದಿದೆ. ಎಂಜಿ ರಸ್ತೆಯಲ್ಲಿ (ನೇರಳೆ ಲೈನ್) ಮತ್ತು ಮೆಜೆಸ್ಟಿಕ್​ನಲ್ಲಿ (ಹಸಿರು ಲೈನ್) ಇಂಟರ್​ಚೇಂಜ್ ಹೊಂದಿದೆ. ಪ್ರಸ್ತುತ ಈ ಮಾರ್ಗವು ಕೆಂಗೇರಿಯಿಂದ ಬೈಯಪ್ಪನಹಳ್ಳಿಯವರೆಗೆ (ಸುಮಾರು 26 ಕಿಮೀ) ಒಟ್ಟು ಉದ್ದದ ಕೇವಲ 60 ಪ್ರತಿಶತದಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ.

    ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:40 am, Thu, 30 March 23

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ