Bengaluru: ಮತಕ್ಕಾಗಿ ಉಡುಗೊರೆ ತಡೆಯಲು ಚುನಾವಣಾ ಆಯೋಗದಿಂದ ವೀಕ್ಷಕರ ನೇಮಕ
ರಾಜಕಾರಣಿಗಳು ಮತದಾರರಿಗೆ ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಇದನ್ನು ತಡೆಯುವುದಕ್ಕಾಗಿ ಮತ್ತು ಪರಿಶೀಲಿಸಲು ಸಹಾಯಕ ವೆಚ್ಚ ವೀಕ್ಷಕರ ನೇಮಕ ಮಾಡಲಾಗಿದೆ ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Assembly Election) ದಿನಾಂಕಗಳನ್ನು ಬುಧವಾರ ಪ್ರಕಟಿಸಿದೆ. ಇದಾದ ಕೆಲವೇ ಗಂಟೆಗಳ ನಂತರ ಹೇಳಿಕೆ ನೀಡಿರುವ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ (ಬಿಬಿಎಂಪಿ ಆಯುಕ್ತ) ತುಷಾರ್ ಗಿರಿನಾಥ್, ಮೇ 10 ರಂದು ನಿಗದಿಯಾಗಿರುವ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ರಾಜಕಾರಣಿಗಳು ಮತದಾರರಿಗೆ ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಇದನ್ನು ತಡೆಯುವುದಕ್ಕಾಗಿ ಮತ್ತು ಪರಿಶೀಲಿಸಲು ಸಹಾಯಕ ವೆಚ್ಚ ವೀಕ್ಷಕರ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಖರ್ಚುಗಳನ್ನು ಮೇಲ್ವಿಚಾರಣೆ ಮಾಡಲು ವಿವಿಧ ಕ್ಷೇತ್ರಗಳಲ್ಲಿ ಹಲವಾರು ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಬೂತ್‌ಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆ ಎಂದು ವಿಂಗಡಿಸಿದ್ದೇವೆ. ಬ್ಯಾಟರಾಯನಪುರದಲ್ಲಿ 3 ಕೋಟಿ ರೂ. ಮೌಲ್ಯದ ಕುಕ್ಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಲ್ಲದೆ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳನ್ನು ವೆಚ್ಚ ಸೂಕ್ಷ್ಮ (ಮತಕ್ಕಾಗಿ ಮತದಾರರಿಗೆ ಹೆಚ್ಚು ಆಮಿಷ ನೀಡುವುದಕ್ಕೆ ಸಂಬಂಧಿಸಿ) ಪ್ರದೇಶಗಳೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ
ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿಗಳನ್ನು ಹೆಸರಿಸಲಾಗಿದೆ ಎಂದು ಗಿರಿನಾಥ್ ಅವರು ಚುನಾವಣಾ ಸಿದ್ಧತೆ ಕುರಿತು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಒಂದು ಪಕ್ಷದ ಚಿಹ್ನೆವುಳ್ಳ 3 ಕೋಟಿ ರೂ. ಮೌಲ್ಯದ ಕುಕ್ಕರ್ ಸೇರಿ ಇತರೆ ವಸ್ತುಗಳು ಜಪ್ತಿ: ತುಷಾರ್ ಗಿರಿನಾಥ್
ಬೆಂಗಳೂರು ಮತದಾರರ ವಿವರ
- ಒಟ್ಟು ಮತದಾರರು – 9,51,3,880
- ಪುರುಷ ಮತದಾರರು – 4,92,6,270
- ಮಹಿಳಾ ಮತದಾರರು – 4,58,5,824
- 18ರಿಂದ 19 ವರ್ಷ ವಯಸ್ಸಿನ ಮತದಾರರು –
- 80 ವರ್ಷ ಮೇಲ್ಪಟ್ಟ ಮತದಾರರು – 2,36,719
ಬೆಂಗಳೂರಿನಾದ್ಯಂತ 8,615 ಮತಗಟ್ಟೆಗಳು ಇದ್ದು ಈ ಪೈಕಿ 2,217 ಸೂಕ್ಷ್ಮ ಮತಗಟ್ಟೆಗಳಾಗಿವೆ ಎಂದು ಗಿರಿನಾಥ್ ಮಾಹಿತಿ ನೀಡಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ