Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Polls 2023: 1972 ರಿಂದ 2018 ರವರೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯ ಇತಿಹಾಸ

1972 ರಿಂದ ಕರ್ನಾಟಕ ಚುನಾವಣೆಯ ಇತಿಹಾಸದ ಬಗೆಗಿನ ಮಾಹಿತಿ. ಹಾಗೂ1972 ರಿಂದ ನಮ್ಮ ಮುಖ್ಯಮಂತ್ರಿಗಳಾಗಿದ್ದವರ ಪಟ್ಟಿಯನ್ನು ನೀಡಿದ್ದು ಹಿಂದಿನ ಚುನಾವಣೆಗಳ ಸಣ್ಣ ಝಲಕ ಇಲ್ಲಿದೆ.

Karnataka Assembly Polls 2023: 1972 ರಿಂದ 2018 ರವರೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯ ಇತಿಹಾಸ
ಕರ್ನಾಟಕ ವಿಧಾನಸಭೆ ಚುನಾವಣೆ, ಸಿಂಧನೂರು ಕ್ಷೇತ್ರದ ಫಲಿತಾಂಶ
Follow us
TV9 Web
| Updated By: Digi Tech Desk

Updated on:Mar 30, 2023 | 1:05 PM

ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷಗಳಲ್ಲಿ ಕದನ ನಡೆಯುತ್ತಿರುವುದು ಗೊತ್ತಿರುವ ವಿಚಾರ. ಅದಲ್ಲದೆ ಇಂದು ಚುನಾವಣೆ ದಿನಾಂಕವು ಘೋಷಣೆಯಾಗಿದ್ದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದ್ದು ಕರ್ನಾಟಕದಲ್ಲಿ ಮತ್ತೆ ಯಾರು ಅಧಿಕಾರದ ಗದ್ದುಗೆಗೆ ಏರಲಿದ್ದಾರೆ ಎಂಬುದಕ್ಕೆ ಉತ್ತರ ಸಿಗಲಿದೆ.

1972 ರಿಂದ ಕರ್ನಾಟಕ ಚುನಾವಣೆಯ ಇತಿಹಾಸದ ನೋಟ ಇಲ್ಲಿದೆ.

2018ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಹೇಗಿತ್ತು ?

ಕರ್ನಾಟಕ ವಿಧಾನಸಭಾ ಚುನಾವಣೆ 2018 ಮೇ 12 ರಂದು ನಡೆದು ಮೇ 15ರಂದು ಫಲಿತಾಂಶ ಪ್ರಕಟವಾಯಿತು. ಆಗ ಬಿಜೆಪಿ ಅಧಿಕಾರಕ್ಕೆ ಬಂದು ಬಿ. ಎಸ್. ಯಡಿಯೂರಪ್ಪ(17 ಮೇ 2018, 19 ಮೇ 2018) ಮುಖ್ಯಮಂತ್ರಿಯಾದ ಬಳಿಕ ಆ ಪಟ್ಟವನ್ನು ಎಚ್. ಡಿ. ಕುಮಾರಸ್ವಾಮಿ ವಹಿಸಿಕೊಂಡರು.

2013ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ

2013ರಲ್ಲಿ ಚುನಾವಣೆಯು ಮೇ 5ರಂದು ನಡೆಯಿತು. ಕಾಂಗ್ರೆಸ್ 122 ಸ್ಥಾನಗಳನ್ನು ಗೆಲ್ಲುವ ಮೂಲಕ ಒಂಬತ್ತು ವರ್ಷಗಳ ನಂತರ ಸರ್ಕಾರ ರಚಿಸುವುದರೊಂದಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.

ಫಲಿತಾಂಶಗಳು:

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: 122 ಸ್ಥಾನಗಳು

ಜನತಾ ದಳ (ಜಾತ್ಯತೀತ): 40

ಭಾರತೀಯ ಜನತಾ ಪಕ್ಷ: 40

ಕರ್ನಾಟಕ ಜನತಾ ಪಕ್ಷ: 6

ಇತರೆ: 9

ಕರ್ನಾಟಕ ವಿಧಾನಸಭೆ ಚುನಾವಣೆ 2008

ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ 110 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತು. ಬಹುಮತಕ್ಕೆ ಕೇವಲ ಮೂರು ಸ್ಥಾನಗಳ ಕೊರತೆಯಿಂದ ಪಕ್ಷವು ಆರು ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಮೈತ್ರಿ ಮಾಡಿಕೊಂಡಿತು. ಚುನಾವಣೆಯು ಮೇ 10, ಮೇ 16 ಮತ್ತು ಮೇ 22, 2008 ರಂದು ಮೂರು ಹಂತಗಳಲ್ಲಿ ನಡೆಯಿತು. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದರು ಆದರೆ ಅನಂತರ 2011ರಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಬೇಕಾಯಿತು. ಅವರ ನಂತರ ಡಿವಿ ಸದಾನಂದ ಗೌಡ (2011 ರಿಂದ 2012) ಬಳಿಕ ಜಗದೀಶ್ ಶೆಟ್ಟರ್ (2012 – 2013) ಅವರು ಅಧಿಕಾರ ವಹಿಸಿಕೊಂಡರು.

ಫಲಿತಾಂಶ

ಭಾರತೀಯ ಜನತಾ ಪಕ್ಷ: 110

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: 80

ಜನತಾ ದಳ (ಜಾತ್ಯತೀತ): 28

ಇತರೆ: 6

ಕರ್ನಾಟಕ ವಿಧಾನಸಭೆ ಚುನಾವಣೆ 2004

2004ರ ಏಪ್ರಿಲ್ 20 ಮತ್ತು 26 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದವು. ಆದರೆ ಯಾವುದೇ ಪಕ್ಷವು ಬಹುಮತದ ಪಡೆಯದ ಕಾರಣ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಸಮ್ಮಿಶ್ರ ಸರ್ಕಾರವನ್ನು ರಚಿಸಿತು.

2006ರವರೆಗೆ ಧರಂಸಿಂಗ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಸಮ್ಮಿಶ್ರ ಸರ್ಕಾರ ಪತನವಾದ ನಂತರ ಎಚ್‌ಡಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡರು. 30 ದಿನಗಳಿಗೂ ಹೆಚ್ಚು ಕಾಲ ರಾಷ್ಟ್ರಪತಿ ಆಳ್ವಿಕೆ ಜಾರಿಯಾದಾಗ ಭ್ರಷ್ಟಾಚಾರದ ಆರೋಪದ ಮೇಲೆ ಅವರು ರಾಜೀನಾಮೆ ನೀಡಬೇಕಾಯಿತು. ಯಡಿಯೂರಪ್ಪ ಅವರು 2007ರಲ್ಲಿ ಕೇವಲ ಏಳು ದಿನಗಳ ಕಾಲ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು, ಆಗ 189 ದಿನಗಳ ಕಾಲ ಮುಂದಿನ ಚುನಾವಣೆ ನಡೆಯುವವರೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು.

ಫಲಿತಾಂಶಗಳು:

ಭಾರತೀಯ ಜನತಾ ಪಕ್ಷ: 79

ಕಾಂಗ್ರೆಸ್: 65

ಜನತಾ ದಳ (ಜಾತ್ಯತೀತ): 58

ಜನತಾ ದಳ (ಯುನೈಟೆಡ್): 5

ಇತರೆ: 17

ಕರ್ನಾಟಕ ವಿಧಾನಸಭೆ ಚುನಾವಣೆ 1999

ಎಸ್‌ಎಂ ಕೃಷ್ಣ ಅವರು ಇದ್ದ ಪಕ್ಷ 132 ಸ್ಥಾನಗಳನ್ನು ಪಡೆದು ಮುಖ್ಯಮಂತ್ರಿಯಾದ ನಂತರ ಕಾಂಗ್ರೆಸ್ ಸರ್ಕಾರ ರಚಿಸಿತು. ಅಕ್ಟೋಬರ್ 1999ರಲ್ಲಿ ಚುನಾವಣೆ ನಡೆಯಿತು.

ಫಲಿತಾಂಶಗಳು

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: 132

ಭಾರತೀಯ ಜನತಾ ಪಕ್ಷ: 44

ಜನತಾ ದಳ (ಯುನೈಟೆಡ್): 18

ಜನತಾ ದಳ (ಜಾತ್ಯತೀತ): 10

ಇದನ್ನೂ ಓದಿ: Bypolls 2023 Schedule: ಜಲಂಧರ್ ಲೋಕಸಭಾ ಕ್ಷೇತ್ರ ಮತ್ತು 4 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಉಪಚುನಾವಣೆ

ಕರ್ನಾಟಕ ವಿಧಾನಸಭೆ ಚುನಾವಣೆ 1994

ಜನತಾದಳ 115 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಯಿತು. ಎಚ್‌ಡಿ ದೇವೇಗೌಡರು ಡಿಸೆಂಬರ್ 11, 1994 – ಮೇ 31, 1996 ವರೆಗೆ ಮುಖ್ಯಮಂತ್ರಿಯಾದರು. ಮೇ 31, 1996 – ಅಕ್ಟೋಬರ್ 7, 1999 ರವರೆಗೆ JH ಪಟೇಲ್ ಅವರು ಅಧಿಕಾರದಲ್ಲಿದ್ದರು.

ಫಲಿತಾಂಶಗಳು

ಜನತಾ ದಳ: 221

ಭಾರತೀಯ ಜನತಾ ಪಕ್ಷ: 40

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: 34

ಇತರೆ: 35

ಕರ್ನಾಟಕ ವಿಧಾನಸಭೆ ಚುನಾವಣೆ 1985

ಜನತಾದಳ ಪಕ್ಷವು 139 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಬಳಿಕ ಆಗಸ್ಟ್ 1988 ರಲ್ಲಿ, ಎಸ್ಆರ್ ಬೊಮ್ಮಾಯಿ ಮುಖ್ಯಮಂತ್ರಿಯಾದರು.

ಫಲಿತಾಂಶಗಳು

ಜನತಾ ಪಕ್ಷ: 139

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: 65

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ: 3

ಭಾರತೀಯ ಜನತಾ ಪಕ್ಷ: 2

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ: 2

ಸ್ವತಂತ್ರರು: 13

ಕರ್ನಾಟಕ ವಿಧಾನಸಭೆ ಚುನಾವಣೆ 1983

ಜನತಾ ಪಕ್ಷ 95 ಸ್ಥಾನಗಳನ್ನು ಗೆದ್ದು ಬೀಗಿತು ರಾಮಕೃಷ್ಣ ಹೆಗಡೆ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಿದರು. ಕರ್ನಾಟಕ ವಿಧಾನಸಭೆ ಚುನಾವಣೆ 1978. 1978 ರಲ್ಲಿ ಕಾಂಗ್ರೆಸ್ (ಇಂದಿರಾ) ಬಣ 149 ಸ್ಥಾನಗಳನ್ನು ಗೆದ್ದು, ದೇವರಾಜ್ ಅರಸು ಮುಖ್ಯಮಂತ್ರಿಯಾದರು. ಕರ್ನಾಟಕ ವಿಧಾನಸಭೆ ಚುನಾವಣೆ 1972, ಕಾಂಗ್ರೆಸ್ (ಇಂದಿರಾ) ಚುನಾವಣೆಯಲ್ಲಿ ಗೆದ್ದ ನಂತರ ಡಿ.ದೇವರಾಜ್ ಅರಸು ಮುಖ್ಯಮಂತ್ರಿಯಾದರು.

1972 ರಿಂದ ಕರ್ನಾಟಕದ ಮುಖ್ಯಮಂತ್ರಿಗಳು

-ಡಿ. ದೇವರಾಜ ಅರಸು(20 ಮಾರ್ಚ್ 1972 – 31 ಡಿಸೆಂಬರ್ 1977)

-ರಾಷ್ಟ್ರಪತಿ ಆಡಳಿತ (31 ಡಿಸೆಂಬರ್ 1977 – 28 ಫೆಬ್ರವರಿ 1978)

-ಡಿ. ದೇವರಾಜ ಅರಸು (28 ಫೆಬ್ರವರಿ 1978 – 7 ಜನವರಿ 1980)

-ಆರ್. ಗುಂಡೂರಾವ್ (12 ಜನವರಿ 1980 – 6 ಜನವರಿ 1983)

-ರಾಮಕೃಷ್ಣ ಹೆಗಡೆ (8 ಮಾರ್ಚ್ 1985 – 13 ಫೆಬ್ರವರಿ 1986)

-ಎಸ್. ಆರ್. ಬೊಮ್ಮಾಯಿ (13 ಆಗಸ್ಟ್ 1988 – 21 ಏಪ್ರಿಲ್ 1989)

-ರಾಷ್ಟ್ರಪತಿ ಆಡಳಿತ(21 ಏಪ್ರಿಲ್ 1989 – 30 ನವೆಂಬರ್ 1989)

-ವೀರೇಂದ್ರ ಪಾಟೀಲ್(30 ನವೆಂಬರ್ 1989 – 10 ಅಕ್ಟೋಬರ್ 1990)

-ರಾಷ್ಟ್ರಪತಿ ಆಡಳಿತ( 10 ಅಕ್ಟೋಬರ್ 1990 – 17 ಅಕ್ಟೋಬರ್)

– ಎಸ್. ಬಂಗಾರಪ್ಪ (7 ಅಕ್ಟೋಬರ್ 1990 – 19 ನವೆಂಬರ್ 1992)

-ಎಂ. ವೀರಪ್ಪ ಮೊಯಿಲಿ (19 ನವೆಂಬರ್ 1992 – 11 ಡಿಸೆಂಬರ್ 1994)

-ಎಚ್. ಡಿ. ದೇವೇಗೌಡ (11 ಡಿಸೆಂಬರ್ 1994 – 31 ಮೇ 1996)

-ಜೆ. ಎಚ್. ಪಟೇಲ್( 31 ಮೇ 1996 – 7 ಅಕ್ಟೋಬರ್ 1999)

-ಎಸ್. ಎಂ. ಕೃಷ್ಣ(11 ಅಕ್ಟೋಬರ್ 1999 – 28 ಮೇ 2004)

– ಎನ್. ಧರ್ಮಸಿಂಗ್( 28 ಮೇ 2004 – 2 ಫೆಬ್ರವರಿ 2006)

-ಎಚ್. ಡಿ. ಕುಮಾರಸ್ವಾಮಿ(3 ಫೆಬ್ರವರಿ 2006 – 8 ಅಕ್ಟೋಬರ್ 2007)

-ರಾಷ್ಟ್ರಪತಿ ಆಡಳಿತ(8 ಅಕ್ಟೋಬರ್ 2007 – 12 ನವೆಂಬರ್ 2007)

-ಬಿ. ಎಸ್. ಯಡಿಯೂರಪ್ಪ(12 ನವೆಂಬರ್ 2007 – 19 ನವೆಂಬರ್ 2007)

-ರಾಷ್ಟ್ರಪತಿ ಆಡಳಿತ(20 ನವೆಂಬರ್ 2007 – 29 ಮೇ 2008)

-ಬಿ. ಎಸ್. ಯಡಿಯೂರಪ್ಪ(30 ಮೇ 2008 – 4 ಆಗಸ್ಟ್ 2011)

-ಡಿ. ವಿ. ಸದಾನಂದ ಗೌಡ( ಆಗಸ್ಟ್ 2011 – 11 ಜುಲೈ 2012)

-ಜಗದೀಶ್ ಶೆಟ್ಟರ್( 12 ಜುಲೈ 2012 – 12 ಮೇ 2013)

-ಸಿದ್ದರಾಮಯ್ಯ(13 ಮೇ 2013 – 15 ಮೇ 2018)

-ಬಿ. ಎಸ್. ಯಡಿಯೂರಪ್ಪ(17 ಮೇ 2018 – 19 ಮೇ 2018)

-ಎಚ್. ಡಿ. ಕುಮಾರಸ್ವಾಮಿ(23 ಮೇ 2018 – 23 ಜುಲೈ 2019)

-ಬಿ. ಎಸ್. ಯಡಿಯೂರಪ್ಪ(26 ಜುಲೈ 2019 –26 ಜುಲೈ 2021)

-ಬಸವರಾಜ ಬೊಮ್ಮಾಯಿ (28 ಜುಲೈ, 2021) ಪ್ರಸ್ತುತ

ಲೇಖನ: ಪ್ರೀತಿ ಭಟ್​, ಗುಣವಂತೆ

Published On - 4:00 pm, Wed, 29 March 23

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!