Karnataka Assembly Polls 2023: 15 ದಿನಗಳ ಬಳಿಕ ಚುನಾವಣೆ ಘೋಷಣೆಯಾಗುತ್ತೆ: ಭವಿಷ್ಯ ನುಡಿದ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕರ್ನಾಟಕ ವಿಧಾನಸ ಚುನಾವಣೆ ದಿನಾಂಕ ಘೋಷಣೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಚಾಮರಾಜನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Polls 2023) ದಿನಾಂಕ ಘೋಷಣೆಗೆ ಮುನ್ನವೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಭರ್ಜರಿ ಮತಬೇಟೆಗಿಳಿದಿವೆ. ಮೂರು ಪಕ್ಷಗಳು ಯಾತ್ರೆಗಳ ಮೂಲಕ ರಾಜ್ಯದ ಮೂಲೆ-ಮೂಲೆಗಳಲ್ಲಿ ಸುತ್ತಾಡುತ್ತಿವೆ. ಇದರ ಮಧ್ಯೆ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa)ಅವರು ಏಪ್ರಿಲ್ 10ರಿಂದ 12ರೊಳಗೆ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದರು. ಇದರ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಚುನಾವಣೆ ದಿನಾಂಕ ಘೋಷಣೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಹೆಚ್ಚು ಗ್ಯಾರಂಟಿ ಕಾರ್ಡ್ ವಿತರಣೆ ಮಾಡುವವರಿಗೆ ಟಿವಿ ಉಡುಗೊರೆ: ಡಿ.ಕೆ.ಶಿವಕುಮಾರ್ ಘೋಷ
ಇಂದು (ಫೆ.21) ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದ ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಇನ್ನೂ 15 ದಿನಗಳ ಬಳಿಕ ಚುನಾವಣೆ ಘೋಷಣೆಯಾಗುತ್ತೆ. ಅವರದ್ದು ಇನ್ನು ಒಂದು ತಿಂಗಳ ಸರ್ಕಾರ ಅಷ್ಟೇ. ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತೆ. ಮುಂದೆ ಫ್ರೀ ಕರೆಂಟ್ ಕೊಡುತ್ತೇವೆ. ಎಷ್ಟು ಉಪಯೋಗಿಸುತ್ತೀರಾ ಅಷ್ಟನ್ನೆ ಉಪಯೋಗಿಸಿ. ಇಲ್ಲದಿದ್ದರೆ ಡಬಲ್ ಕಟ್ಟಬೇಕಾಗುತ್ತೆ ಎಂದು ಹೇಳಿದರು.
ಇನ್ನು ಇದೇ ವೇಳೆ ಡಿಕೆ ಶಿವಕುಮಾರ್ ಅವರು, ಕೊಳ್ಳೇಗಾಲದ ಬಿಜೆಪಿ ಮಾಜಿ ಶಾಸಕ ನಂಜುಂಡಸ್ವಾಮಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸುಳಿವು ನೀಡಿದ್ದಾರೆ. ಕೊಳ್ಳೇಗಾಲದ ಮಾಜಿ ಶಾಸಕ ನಂಜುಂಡಸ್ವಾಮಿ ಕಾಂಗ್ರೆಸ್ನಲ್ಲೇ ಇದ್ದ. ಅವರಿಗೆ ನಾನು ಟಿಕೆಟ್ ಕೊಡಿಸಿದ್ದೆ, ಆದರೆ ಬಿಜೆಪಿ ಸೇರಿಕೊಂಡಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಅಂತಾ ಖರ್ಗೆ ಭೇಟಿಯಾಗಿದ್ದಾರೆ. ನನ್ನ ಭೇಟಿಯಾಗಬೇಕೆಂದು ಧ್ರುವನಾರಾಯಣ ಬಳಿ ಹೇಳಿಕೊಂಡಿದ್ದಾರೆ. ಪಾಪ ವಿಮೋಚನೆಗಾಗಿ ನಂಜುಂಡಸ್ವಾಮಿ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದರು.
ಕೊಳ್ಳೇಗಾಲ ಮೂವರು ಆಕಾಂಕ್ಷಿಗಳು ಒಳ್ಳೊಳ್ಳೆ ಕಲಾವಿದರು. ಒಬ್ಬೊಬ್ಬರು ಮಾತಿನಲ್ಲಿ ಒಂದೊಂದು ಪಟ್ಟಾಕಿದ್ರು. ಮಹೇಶಣ್ಣ ಇಲ್ಲಿ ಗೆಲ್ಲಲ್ಲ. ಮಹೇಶಣ್ಣ ಮಂತ್ರಿಯಾಗಿದ್ದ. ಬಿಜೆಪಿಗೆ ಹೋಗಿ ಅಧಿಕಾರ ಸಿಗಲಿಲ್ಲ.ಇದರ ಅರ್ಥ ಮುಂದೆಯೂ ಎಂಎಲ್ ಎ ಆಗಲ್ಲ. ಬೆಜೆಪಿಗೆ ಯಾಕೆ ಸೇರಿದ್ದ ಅಂತ ಗೊತ್ತಿಲ್ಲ. ದುಡ್ಡೋ ಬಾಟಲೋ ಅದೇನು ಗೊತ್ತಿಲ್ಲ. ನಾವು ಸರ್ವೆ ಮಾಡಿಸಿದ್ದು, ಮಹೇಶಣ್ಣ ಮೇಲೆ ಕೆಳಗೆ ನಡೆದ್ರು ಕೊಳ್ಳೇಗಾಲದಲ್ಲಿ ಗೆಲ್ಲಲ್ಲ. ಇಲ್ಲಿ ಗೆಲ್ಲೋದು ಕಾಂಗ್ರೆಸ್, ಆದ್ರೆ ಮೂವರು ಒಬ್ಬರಿಗೊಬ್ಬರು ಕಾಲೆಳೆಯಬಾರದು ಎಂದು ಪರೋಕ್ಷವಾಗಿ ಟಿಕೆಟ್ ಆಕಾಂಕ್ಷಿಗಳಿ ಸಲಹೆ ನೀಡಿದರು.
ಕರ್ನಾಟಕ ವಿಧಾನಸಭೆ ಚುನಾವಣೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:05 pm, Tue, 21 February 23