AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣೆ ಹೊಸ್ತಿಲಲ್ಲೇ ಮಂಡ್ಯಕ್ಕೆ 800 ಕೋಟಿ ರೂ. ಯೋಜನೆ ಘೋಷಿಸಿದ ರಾಜ್ಯ ಸರ್ಕಾರ

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಗೆ ರಾಜ್ಯ ಬಿಜೆಪಿ ಸರ್ಕಾರ ಭರ್ಜರಿ ಕೊಡುಗೆ ನೀಡಿದ್ದು, ತೀವ್ರ ಕುತೂಹಲ ಮೂಡಿಸಿದೆ.

ಚುನಾವಣೆ ಹೊಸ್ತಿಲಲ್ಲೇ ಮಂಡ್ಯಕ್ಕೆ 800 ಕೋಟಿ ರೂ. ಯೋಜನೆ ಘೋಷಿಸಿದ ರಾಜ್ಯ ಸರ್ಕಾರ
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ರಮೇಶ್ ಬಿ. ಜವಳಗೇರಾ
|

Updated on: Feb 20, 2023 | 9:59 PM

Share

ಬೆಂಗಳೂರು/ಮಂಡ್ಯ: ಹಳೇ ಮೈಸೂರು ಭಾಗದಲ್ಲಿ ಮಂಡ್ಯವನ್ನೇ ಟಾರ್ಗೆಟ್ ಮಾಡಿರೋ ಅಮಿತ್ ಶಾ(Amit Shah), ನಾನಾ ತಂತ್ರಗಳು, ಟಾಸ್ಕ್‌ಗಳನ್ನ ಹೆಣೆದು ವ್ಯೂಹವನ್ನೇ ರಚಿಸಿದ್ದಾರೆ. ಇದರ ಭಾಗವಾಗಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಡ್ಯ(Mandya) ಜಿಲ್ಲೆಗೆ ರಾಜ್ಯ ಸರ್ಕಾರ ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದೆ. ಮಂಡ್ಯ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಗೆ (jal jeevan mission scheme ) 800 ಕೋಟಿ ರೂಪಾಯಿ ನೀಡಲು ಅನುಮೋದನೆ ನೀಡಿದೆ. ಇಂದು(ಫೆ.20) ಸಂಪುಟ ಸಭೆಯಲ್ಲಿ ಮಂಡ್ಯಕ್ಕೆ ಕೋಟಿ ಕೋಟಿ ರೂ. ಅನುದಾನಕ್ಕೆ ಒಪ್ಪಿಗೆ ನೀಡಲಾಗಿದೆ. ಈಗಾಗಲೇ ಅಮಿತ್ ಶಾ ‘ಮಿಷನ್ ದಕ್ಷಿಣ್’ ಯಜ್ಞ ಆರಂಭಿಸಿರುವ ಮಧ್ಯೆಯೇ ಸರ್ಕಾರ ಭರ್ಜರಿ ಕೊಡುಗೆ ಘೋಷಣೆ ಮಾಡಿದ್ದು, ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ಕೊನೆಗೂ ಎಚ್ಚೆತ್ತುಕೊಂಡ ಬಿಜೆಪಿ ಹೈ ಕಮಾಂಡ್: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಆರ್​. ಅಶೋಕ್ ಔಟ್, ಸಿಎಂ ಬೊಮ್ಮಾಯಿ ಸ್ಪಷ್ಟನೆ

ಹಳೇ ಮೈಸೂರು ಭಾಗದಲ್ಲಿ ಮಂಡ್ಯವನ್ನೇ ಟಾರ್ಗೆಟ್ ಮಾಡಿರೋ ಅಮಿತ್ ಶಾ, ನಾನಾ ತಂತ್ರಗಳು, ಟಾಸ್ಕ್‌ಗಳನ್ನ ಹೆಣೆದು ವ್ಯೂಹವನ್ನೇ ರಚಿಸಿದ್ದಾರೆ. ಇದೀಗ ರಾಜ್ಯ ಸರ್ಕಾರ ಜಲ ಜೀವನ್ ಮಿಷನ್ ಯೋಜನೆ ನೀಡುವ ಮೂಲಕ ಮಂಡ್ಯ ಜನತೆ ಮನಗೆಲ್ಲುವ ತಂತ್ರ ರೂಪಸಿದೆ.

ಮೈಸೂದು ಭಾಗದಲ್ಲಿ ಪ್ರಮುಖವಾಗಿ ಜೆಡಿಎಸ್​ನ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯನ್ನೇ ಟಾರ್ಗೆಟ್ ಮಾಡಿದ್ದು, ಇದಕ್ಕಾಗಿ ಒಕ್ಕಲಿಗ ನಾಯಕ ಆರ್‌.ಅಶೋಕ್‌ರನ್ನ ಕಣಕ್ಕಿಳಿಸಲಾಗಿತ್ತು. ಆದ್ರೆ, ಮಂಡ್ಯದಲ್ಲಿ ಅಶೋಕ್ ವಿರುದ್ಧ ಸದ್ದು ಮಾಡಿದ ಗೋ ಬ್ಯಾಕ್ ಅಭಿಯಾನದಿಂದ ಹಿನ್ನಡೆಯಾಗಿತ್ತು. ಇದರಿಂದ ಬಿಜೆಪಿಗೆ ಉಸ್ತುವಾರಿ ಉಸಾಬರಿ ತಲೆನೋವಾಗಿ ಪರಿಣಮಿಸಿತ್ತು. ಆದ್ರೆ, ಕಿಂಚಿತ್ತೂ ಬೆಚ್ಚದೇ, ಬೆದರದೇ, ಹಿಡಿದ ಹಠ ಸಾಧಿಸಲು ಅಮಿತ್ ಶಾ ಹೊಸ ಬಾಣವನ್ನೇ ಬಿಟ್ಟಿದ್ದಾರೆ. ಒಕ್ಕಲಿಗ ಪ್ರಬಲ ನಾಯಕ ಅಶ್ವತ್ಥ್ ನಾರಾಯಣ, ಲಿಂಗಾಯತ ಪ್ರಬಲ ನಾಯಕ ವಿಜಯೇಂದ್ರರನ್ನ ಮಂಡ್ಯ ಕಣಕ್ಕಿಳಿಸಿದ್ದಾರೆ. ಅರ್ಥಾತ್ ಅಳೆದು ತೂಗಿ ಅಶ್ವತ್ಥ್ ನಾರಾಯಣಗೆ ಮಂಡ್ಯ ಉಸ್ತುವಾರಿ ಪಟ್ಟ ಕಟ್ಟಲು ಎಲ್ಲಾ ಪ್ಲ್ಯಾನ್‌ಗಳು ಬಿಜೆಪಿ ಕೋಟೆಯಲ್ಲಿ ನಡೆದಿವೆ.

ಹೇಳಿ ಕೇಳಿ ಮಂಡ್ಯ ಒಕ್ಕಲಿಗರ ಭದ್ರಕೋಟೆ. ಅಶ್ವತ್ಥ್ ನಾರಾಯಣ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ. ಅಷ್ಟೇ ಅಲ್ಲ, ಅಶ್ವತ್ಥ್ ಕುಟುಂಬಸ್ಥರು ಮಂಡ್ಯದ ಕಿರಗಂದೂರಿನವರು. ಮಂಡ್ಯವನ್ನ ತುಂಬಾ ಹತ್ತಿರದಿಂದ ನೋಡಿರುವ ಅಶ್ವತ್ಥ್ ನಾರಾಯಣ, ಮಂಡ್ಯ ರಾಜಕಾರಣದ ಬಗ್ಗೆ ಚೆನ್ನಾಗಿ ಅರೆದು ಕುಡಿದಿದ್ದಾರೆ. ಅಲ್ಲದೇ, ಕಾಂಗ್ರೆಸ್, ಜೆಡಿಎಸ್‌ನ ಒಕ್ಕಲಿಗ ಭದ್ರಕೋಟೆಯಾಗಿರುವ ರಾಮನಗರದಲ್ಲಿ ಅಶ್ವತ್ಥ್ ಈಗಾಗಲೇ ಹಿಡಿತ ಸಾಧಿಸಿ ಬಿಜೆಪಿಗೆ ಶಕ್ತಿ ತುಂಬಿದ್ದಾರೆ. ಡಿಕೆ ಬ್ರದರ್ಸ್‌ಗೆ ಎದುರಾಳಿಯಾಗಿ ನಿಂತು ವಿಜಯ ಸಂಕಲ್ಪ ಯಾತ್ರೆ ಸಕ್ಸಸ್ ಮಾಡಿ ತಾನೇನು ಎನ್ನುವುದನ್ನು ಪ್ರೂ ಮಾಡಿದ್ದಾರೆ. ಕಡಿಮೆ ಸಮಯದಲ್ಲಿ ಪ್ರಬಲ ಒಕ್ಕಲಿಗ ನಾಯಕನಾಗಿ ಬೆಳೆದಿದ್ದಾರೆ. ಅಲ್ಲದೇ ಮಂಡ್ಯದಲ್ಲೂ ಅಶ್ವತ್ಥ್ ಹೆಸರು ಜಾಲ್ತಿಯಲ್ಲಿದ್ದು, ಉಸ್ತುವಾರಿಯಾಗ್ತರೆಂಬ ಗುಸು ಗುಸು ಚರ್ಚೆ ನಡೆಯುತ್ತಿದೆ. ಹೀಗಾಗಿ ಅಶ್ವತ್ಥ್‌ಗೆ ಮಂಡ್ಯ ಜವಾಬ್ದಾರಿ ನೀಡಲು ಅಮಿತ್ ಶಾ ಪ್ಲ್ಯಾನ್ ಮಾಡಿದ್ದಾರೆ. ಅಶ್ವತ್ಥ್‌ಗೆ ಹೊಣೆ ನೀಡಿದ್ರೆ ಗೆಲುವು ಗ್ಯಾರಂಟಿ ಎಂಬ ಲೆಕ್ಕಚಾರ ಹಾಕಿದ್ದಾರೆ.

ಅಶ್ವತ್ಥ್ ನಾರಾಯಣ ಈಗಾಗಲೇ ಟಾಸ್ಕ್ ಶುರು ಮಾಡಿದ್ದು, ಮಂಡ್ಯದಲ್ಲೇ ನಿಂತು ದಳಪತಿಗಳ ವಿರುದ್ಧ ಕಿಡಿಕಾರಿದ್ದಾರೆ. ಕುಟುಂಬ ರಾಜಕಾರಣವನ್ನ ಕುಟುಕಿದ್ದಾರೆ. ಇತ್ತ ವಿಜಯೇಂದ್ರ ಸಹ ಅಮಿತ್ ಶಾ ಸೂಚನೆಯಂತೆ ಯುದ್ಧಭೂಮಿಗಿಳಿಯಲು ಸಜ್ಜಾಗಿದ್ದಾರೆ. ಇದರ ಮಧ್ಯೆ ಇದೀಗ 800 ಕೋಟಿ ರೂ. ಯೋಜನೆ ಘೋಷಿಸಿದ್ದು, ಮಂಡ್ಯ ರಾಜಕಾರಣ ಕುತೂಹಲ ಮೂಡಿಸಿದೆ.

ಮಂಡ್ಯ ಜಿಲ್ಲೆಯ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ