ಕೊನೆಗೂ ಎಚ್ಚೆತ್ತುಕೊಂಡ ಬಿಜೆಪಿ ಹೈ ಕಮಾಂಡ್: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಆರ್. ಅಶೋಕ್ ಔಟ್, ಸಿಎಂ ಬೊಮ್ಮಾಯಿ ಸ್ಪಷ್ಟನೆ
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಸಚಿವ ಆರ್. ಅಶೋಕ್ರನ್ನು ಮುಕ್ತ ಮಾಡಲಾಗಿದೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.
ಬೆಂಗಳೂರು: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ (Mandya District In-Charge Minister) ಆರ್.ಅಶೋಕ್ (R Ashok ) ಅವರನ್ನು ನೇಮಕ ಮಾಡಲಾಗಿತ್ತು. ಗೋಪಾಲಯ್ಯ (K. Gopalaiah) ಅವರ ಬದಲಿಗೆ ಮಂಡ್ಯ ಜಿಲ್ಲಾ ಉಸ್ತುವಾರಿಯನ್ನು ಅಶೋಕ್ ಹೆಗಲಿಗೆ ಹಾಕಿ ರಾಜ್ಯ ಸರ್ಕಾರ ಜ. 24 ರಂದು ಆದೇಶ ಹೊರಡಿಸಿತ್ತು. ಇದು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಂಡ್ಯ ಉಸ್ತುವಾರಿ ನೇಮಕ ತೀವ್ರ ಕುತೂಹಲಕ್ಕೂ ಕಾರಣವಾಗಿತ್ತು. ಆದರೆ ಈಗ ಕಹಾನಿ ಮೇ ಟ್ವಿಸ್ಟ್..! ಎನ್ನುವಂತೆ ಮತ್ತೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿದ್ದು, ಆ ಸ್ಥಾನದಿಂದ ಆರ್. ಅಶೋಕ್ ಔಟ್ ಆಗಿದ್ದಾರೆ. ಉಸ್ತುವಾರಿಯಿಂದ ಮುಕ್ತ ಮಾಡಿ ಎಂದು ಸಚಿವ ಆರ್.ಅಶೋಕ್ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದರು.
ಮಂಡ್ಯ ಜಿಲ್ಲೆಯಿಂದ ಆರ್. ಅಶೋಕ್ ಗೆ ಮುಕ್ತ ಮಾಡಲಾಗಿದೆ ಸಿಎಂ ಬೊಮ್ಮಾಯಿ
ಸದ್ಯ ಈ ವಿಚಾರವಾಗಿ ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಉಸ್ತುವಾರಿ ಸಚಿವ ಸ್ಥಾನದಿಂದ ಅಶೋಕ್ರನ್ನು ಮುಕ್ತ ಮಾಡಲಾಗಿದೆ. ಗ್ರಾಮ ವಾಸ್ತವ್ಯ ಮಾಡಲು ಆರ್.ಅಶೋಕ್ಗೆ ಸೂಚನೆ ನೀಡಿದ್ದೇನೆ. ಹಲವು ಕಾರ್ಯಕ್ರಮ ವಹಿಸಿದ್ದೇವೆ. ಹಾಗಾಗಿ ಅಶೋಕ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಮುಕ್ತಿ ನೀಡಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ಇದನ್ನೂ ಓದಿ: Mandya In-Charge Minister ವಿಧಾನಸಭೆ ಚುನಾವಣೆ ಹೊತ್ತಲ್ಲೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ
ಕೊನೆಗೂ ಎಚ್ಚೆತ್ತ ಬಿಜೆಪಿ ಹೈ ಕಮಾಂಡ್
ಇನ್ನು ಆರ್. ಅಶೋಕ್ರನ್ನ ನೂತನ ಉಸ್ತುವಾರಿಯನ್ನಾಗಿ ರಾಜ್ಯ ಸರ್ಕಾರ ನೇಮಿಸುತ್ತಿದ್ದಂತೆ ಮಂಡ್ಯದಲ್ಲಿ ಆಂತರಿಕ ಭಿನ್ನಮತ ಸ್ಪೋಟಗೊಂಡಿತ್ತು. ಸ್ಥಳೀಯ ಮುಖಂಡ ಡಾ. ಸಿದ್ದರಾಮಯ್ಯ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಟಿವಿ9 ಮುಂದೆ ಅಶೋಕ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ಡಾ. ಸಿದ್ಧರಾಮಯ್ಯ, ಹೊಂದಾಣಿಕೆ ರಾಜಕೀಯ, ಅಡ್ಜೆಸ್ಟ್ಮೆಂಟ್ ರಾಜಕಾರಣಿ ಎಂದು ಕಿಡಿ ಕಾರಿದ್ದರು. ಸ್ಥಳೀಯ ಕಾರ್ಯಕರ್ತರು ಗೋ ಬ್ಯಾಕ್ ಆರ್.ಅಶೋಕ್, ಬಾಯ್ಕಟ್ ಅಶೋಕ್ ಎಂದು ಬಿತ್ತಿ ಪತ್ರ ಹಾಗೂ ಗೋಡೆ ಬರಹಗಳನ್ನು ಬರೆದಿದ್ದರು.
ಅಶೋಕ್ ನೇಮಕ ಬೆನ್ನಲ್ಲೆ ಬಿಜೆಪಿ ಕಾರ್ಯಕರ್ತರು ಸಪ್ಪೆಯಾಗಿದ್ದರು. ಗೋಪಾಲಯ್ಯ ಹೋದ ಬಳಿಕ ಕಾರ್ಯಕರ್ತರು ತಣ್ಣಗಾಗಿದ್ದರು. ಯಾವುದೇ ರ‍್ಯಾಲಿ, ಸಭೆ ಸಮಾರಂಭ ನಡೆಯದೆ ಕಮಲಪಡೆ ಮಂಕಾಗಿತ್ತು. ಆರ್. ಅಶೋಕ್ ಉಸ್ತುವಾರಿಯಾದ ಬಳಿಕ ಕೇವಲ ಎರಡೆ ಬಾರಿ ಮಂಡ್ಯಕ್ಕೆ ಬಂದಿದ್ರು. ಈ ಕುರಿತು ಟಿವಿ9 ನಿರಂತರ ಸುದ್ದಿ ಬಿತ್ತರಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Fri, 10 February 23