Assembly Polls; ಮಾಧ್ಯಮ ಪ್ರತಿನಿಧಿಗಳಿಗೂ ಈ ಬಾರಿ ಮತ ಚಲಾಯಿಸಲು ವಿಶೇಷ ಸೌಲಭ್ಯ: ಮನೋಜ್ ಕುಮಾರ್ ಮೀನಾ, ಮುಖ್ಯ ಚುನಾವಣಾಧಿಕಾರಿ

Assembly Polls; ಮಾಧ್ಯಮ ಪ್ರತಿನಿಧಿಗಳಿಗೂ ಈ ಬಾರಿ ಮತ ಚಲಾಯಿಸಲು ವಿಶೇಷ ಸೌಲಭ್ಯ: ಮನೋಜ್ ಕುಮಾರ್ ಮೀನಾ, ಮುಖ್ಯ ಚುನಾವಣಾಧಿಕಾರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 29, 2023 | 5:11 PM

ಮತ ಚಲಾಯಿಸಬಯಸುವ ಪತ್ರಕರ್ತರು ರಾಜ್ಯ ಚುನಾವಣಾ ಕಚೇರಿಯಿಂದ ಮಾನ್ಯತೆ (ಅಕ್ರೆಡಿಟೇಶನ್) ಪಡೆದುಕೊಂಡಿರಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದರು.

ಬೆಂಗಳೂರು: ರಾಷ್ಟ್ರೀಯ ಚುನಾವಣಾ ಅಯೋಗ (Election Commission) ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕಗಳನ್ನು ಘೋಷಿಸಿದ ಬಳಿಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಹ ಒಂದು ಪತ್ರಿಕಾ ಗೋಷ್ಟಿ ನಡೆಸಿದರು. ಚುನಾವಣಾ ನೀತಿ ಸಂಹಿತೆ (Model Code of Conduct) ಇಂದಿನಿಂದ ಜಾರಿಗೊಂಡಿರುವುದರಿಂದ ರಾಜಕಾರಣಿಗಳ ಕಾರ್ಯಭಾರ ಇಂದು ಕೊನೆಗೊಂಡಿದೆ. ಇನ್ನು ಮೇಲೆ ಮಂತ್ರಿಗಳು ಮತ್ತು ಶಾಸಕರು ಸರ್ಕಾರಿ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ರಾಜಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ (Manoj Kumar Meena) ಹೇಳಿದರು. ಚುನಾವಣಾ ಆಯೋಗ ಈಗ ಮಾಧ್ಯಮವನ್ನು ಅಗತ್ಯ ಸೇವೆಗಳ ಶ್ರೇಣಿಯಲ್ಲಿ ಸೇರಿಸುವುದರಿಂದ ಪತ್ರಕರ್ತರಿಗೆ ಮತದಾನ ಮಾಡಲು ವಿಶೇಷ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೀನಾ ಹೇಳಿದರು. ಆದರೆ ಮತ ಚಲಾಯಿಸಬಯಸುವ ಪತ್ರಕರ್ತರು ರಾಜ್ಯ ಚುನಾವಣಾ ಕಚೇರಿಯಿಂದ ಮಾನ್ಯತೆ (ಅಕ್ರೆಡಿಟೇಶನ್) ಪಡೆದುಕೊಂಡಿರಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ