Assembly Polls: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ಯಾರು ಅನ್ನೋದೇ ಹೆಚ್ ಡಿ ರೇವಣ್ಣಗೆ ಗೊತ್ತಿಲ್ವಂತೆ!

Assembly Polls: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್ ಯಾರು ಅನ್ನೋದೇ ಹೆಚ್ ಡಿ ರೇವಣ್ಣಗೆ ಗೊತ್ತಿಲ್ವಂತೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 29, 2023 | 6:13 PM

ರೇವಣ್ಣ ಮಾತಾಡುತ್ತಿದ್ದ ವರಸೆ ಮತ್ತು ಧಾಟಿ ಗಮನಿಸಿದರೆ ಅವರ ಪತ್ನಿ ಭವಾನಿಯವರಿಗೆ ಟಿಕೆಟ್ ಖಚಿತವಾಗಿ ಬಿಟ್ಟಿದೆ ಅನಿಸುತ್ತದೆ.

ಹಾಸನ: ಹೊಳೆನರಸೀಪುರದ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರಿಗೆ ಹಾಸನ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಸ್ವರೂಪ್ ಪ್ರಕಾಶ್ (Swaroop Prakash) ಯಾರು ಅನ್ನೋದೇ ಗೊತ್ತಿಲ್ವಂತೆ. ನಗರದಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ, ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ, ಅವರು ಯಾವ ಸಾಮಾನ್ಯ ಕಾರ್ಯಕರ್ತನ ಬಗ್ಗೆ ಮಾತಾಡುತ್ತಿದ್ದಾರೆ ಅಂತಲೂ ನನಗೆ ಗೊತ್ತಿಲ್ಲ ಎಂದು ರೇವಣ್ಣ ಹೇಳಿದರು. ಕಳೆದ ಎರಡೂವರೆ ದಶಕಗಳಿಂದ ಹಾಸನ ಜಿಲ್ಲೆಯಲ್ಲಿ ಪಕ್ಷಕ್ಕಾಗಿ ದುಡಿದಿರುವುದರಿಂದ ಜಿಲ್ಲೆಯ ಚಿತ್ರಣ ತನಗೆ ಚೆನ್ನಾಗಿ ಗೊತ್ತಿದೆ ಅಂತ ಅವರು ಹೇಳಿದರು. ರೇವಣ್ಣ ಮಾತಾಡುತ್ತಿದ್ದ ವರಸೆ ಮತ್ತು ಧಾಟಿ ಗಮನಿಸಿದರೆ ಅವರ ಪತ್ನಿ ಭವಾನಿಯವರಿಗೆ ಟಿಕೆಟ್ ಖಚಿತವಾಗಿ ಬಿಟ್ಟಿದೆ ಅನಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ