ಅರಸು ಕುಂಜುರಾಯ ದೈವದ ಉತ್ಸವದ ವೇಳೆ ನಡೆಯಿತು ಪವಾಡ: ಸ್ವತಃ ಕಣ್ಣಾರೆ ಕಂಡು ಅಚ್ಚರಿ ಪಟ್ಟ ದೈವ ಆರಾಧಕರು

ದೈವಾರಾಧನೆ ಮೂಲಕ ಸಾವಿರಾರು ದೈವಗಳನ್ನು ಆರಾಧಿಸುವ ಕರಾವಳಿಯಲ್ಲಿ ಒಂದೊಂದು ದೈವಕ್ಕೆ ಒಂದೊಂದು ವಿಶೇಷತೆ ಇದೆ. ಅಂತಹದೇ ಒಂದು ವಿಶೇಷವಾದ ಪವಾಡವೊಂದು ಅರಸು ಕುಂಜುರಾಯ ಅನ್ನೋ ದೈವದ ಉತ್ಸವದ ವೇಳೆ ನಡೆಯುತ್ತದೆ.

ಅರಸು ಕುಂಜುರಾಯ ದೈವದ ಉತ್ಸವದ ವೇಳೆ ನಡೆಯಿತು ಪವಾಡ: ಸ್ವತಃ ಕಣ್ಣಾರೆ ಕಂಡು ಅಚ್ಚರಿ ಪಟ್ಟ ದೈವ ಆರಾಧಕರು
ಅರಸು ಕುಂಜುರಾಯ ದೈವದ ಉತ್ಸವ
Follow us
|

Updated on:Mar 29, 2023 | 10:40 PM

ಮಂಗಳೂರು: ದೈವಾರಾಧನೆ ಮೂಲಕ ಸಾವಿರಾರು ದೈವಗಳನ್ನು ಆರಾಧಿಸುವ ಕರಾವಳಿಯಲ್ಲಿ ಒಂದೊಂದು ದೈವಕ್ಕೆ ಒಂದೊಂದು ವಿಶೇಷತೆ ಇದೆ. ಅಂತಹದೇ ಒಂದು ವಿಶೇಷವಾದ ಪವಾಡವೊಂದು ಅರಸು ಕುಂಜುರಾಯ (arasu Kunjuraya) ಅನ್ನೋ ದೈವದ ಉತ್ಸವದ ವೇಳೆ ನಡೆಯುತ್ತದೆ. ಆ ವಿಶೇಷ ಕ್ಷಣ ಕಣ್ತುಂಬಿಕೊಳ್ಳೋದಿಕ್ಕೆ ಅಂತ ಸಾವಿರಾರು ಜನ ಅಲ್ಲಿ ಸೇರ್ತಾರೆ. ಅಷ್ಟಕ್ಕೂ ಅಲ್ಲಿ ನಡೆಯೋದೇನು ಮುಂದೆ ಓದಿ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಕಿನ್ನಿಗೋಳಿಯ ಕೆಮ್ರಾಲ್ ಅನ್ನೋ ಗ್ರಾಮದಲ್ಲಿನ ದೈವದ ಉತ್ಸವದಲ್ಲಿ ನಡೆದ ಘಟನೆ. ಅತ್ತೂರು ಅರಸು ಕುಂಜಿರಾಯ ಅನ್ನೋ ಗ್ರಾಮ ದೈವದ ಉತ್ಸವಕ್ಕೆ ಅರಿಪಾದೆ ಎಂಬಲ್ಲಿಯ ಜಾರಂಧಾಯ ದೈವಸ್ಥಾನದಿಂದ ಆಭರಣಗಳ ಭಂಡಾರ ಬರುವಾಗ ವಿಸ್ಮಯ ನಡೆಯುತ್ತದೆ.

ದೈವಾರಾಧನೆಯಲ್ಲಿ ಸಾಮಾನ್ಯವಾಗಿ ದೈವವು ಮನುಷ್ಯನ ಮೇಲೆ ಆವಾಹನೆಯಾಗುತ್ತದೆಯಾದ್ರೂ ಇಲ್ಲಿ ದೈವವು ಆಭರಣದ ಬಂಡಾರದ ಮೇಲೆ ಆವಾಹನೆಯಾಗುವುದೇ ವಿಶೇಷ. ಅರಿಪಾದೆಯ ಜಾರಂಧಾಯ ದೈವಸ್ಥಾನದಿಂದ ದೈವದ ಮುಖವಾಡವನ್ನು ಇರಿಸಿ ಪಲ್ಲಕಿಯಲ್ಲಿ ಹೊತ್ತು ಅರಸು ಕುಂಜಿರಾಯ ದೈವಸ್ಥಾನಕ್ಕೆ ತರಲಾಗುತ್ತದೆ. ಸಾಮಾನ್ಯವಾಗಿ ಒಂದು ಪಲ್ಲಕಿ ಹಾಗೂ ಪೆಟ್ಟಿಗೆಯನ್ನು ಹೊರಲು ಕೇವಲ ನಾಲ್ಕು ಜನ ಸಾಕಾಗುತ್ತದೆ. ಆದರೆ ದೈವದ ಮುಖವಾಡ ಹಾಗೂ ಆಭರಣ ಇರುವ ಈ ಪಲ್ಲಕಿ ಹಾಗೂ ಪೆಟ್ಟಿಗೆಯನ್ನು ಕನಿಷ್ಟ ಅಂದ್ರು ಹತ್ತರಿಂದ ಹನ್ನೆರಡು ಜನ ಹೊರುತ್ತಾರೆ. ಅಷ್ಟು ಜನ ಹೊತ್ತುಕೊಂಡ್ರೂ ಯಾರ ನಿಯಂತ್ರಣಕ್ಕೆ ಇದು ಸಿಗೋದಿಲ್ಲ.

ಇದನ್ನೂ ಓದಿ: ಮಂಗಳೂರು: ಕದ್ರಿ ಜೋಗಿ ಮಠದ ಮತ್ಸ್ಯೇಂದ್ರನಾಥ ಗುಡಿ ಆವರಣದಲ್ಲಿ ಕ್ರಿ.ಶ 1423 ಕಾಲದ ಶಾಸನ ಪತ್ತೆ

ಅರಸು ಕುಂಜಿರಾಯ ದೈವದ ಉತ್ಸವಕ್ಕೆ ನಾಲ್ಕು ಗ್ರಾಮಗಳಿಂದ ಬೇರೆ ಬೇರೆ ದೈವಗಳ ಭಂಡಾರ ಬರುವುದು ವಾಡಿಕೆ. ಆದರೆ ಮೂರು ಕಡೆಗಳಿಂದ ಬರುವ ಬಂಡಾರದಲ್ಲಿ ದರ್ಶನ ಪಾತ್ರಿಗಳಿಗಷ್ಟೇ ದೈವದ ಆವೇಶ ಬರುತ್ತದೆ. ಆದರೆ ಅರಿಪಾದೆ ಎಂಬಲ್ಲಿಂದ ಬರೋ ಬಂಡಾರದಲ್ಲಿ ಮಾತ್ರ ಈ ರೀತಿ ಪಲ್ಲಕಿಗೇ ಆವೇಶ ಬರುವುದು. ಸುಮಾರು ಮೂರು ಕಿಲೋ ಮೀಟರ್ ದೂರ ಇರೋ ಅರಸು ಕುಂಜಿರಾಯ ದೈವಸ್ಥಾನಕ್ಕೆ ಆಭರಣಗಳನ್ನು ಮೆರವಣಿಗೆಯಲ್ಲಿ ಹೊತ್ತು ತರಲಾಗುತ್ತದೆ.

ಹೀಗೇ ಮೆರವಣಿಗೆಯಲ್ಲಿ ಬರುವ ಪಲ್ಲಕಿ ಹಾಗೂ ಪೆಟ್ಟಿಗೆಯೂ ಅರಸು ಕುಂಜಿರಾಯ ದೈವಸ್ಥಾನ ಸಮೀಪಿಸ್ತಾ ಇದ್ದಂತೆ ಯಾರ ನಿಯಂತ್ರಣಕ್ಕೂ ಸಿಗದೆ ಓಲಾಡಲು ಆರಂಭಿಸುತ್ತದೆ. ಬಹಳ ವರ್ಷಗಳ ಕಾಲ ಜಾರಂಧಾಯ ದೈವದ ಭಂಡಾರ ಇಲ್ಲಿಗೆ ಬರುವುದು ನಿಂತು ಹೋಗಿತ್ತು. ಕಳೆದ ಹನ್ನೆರಡು ವರ್ಷಗಳಿಂದ ಇದು ಮತ್ತೆ ಆರಂಭವಾಗಿದ್ದು, ಆರಂಭದಲ್ಲೇ ಈ ವಿಚಿತ್ರ ಜನರನ್ನು ಆಶ್ಚರ್ಯಗೊಳಿಸಿತ್ತು. ಬಳಿಕ ಪ್ರಶ್ನೆ ಚಿಂತನೆ ಮೂಲಕ ಕೇಳಿದಾಗ ಇದು ಪಲ್ಲಕಿಗೆ ದೈವದ ಆವಾಹನೆ ಆಗೋದು ಅನ್ನೋ ವಿಚಾರ ಗೊತ್ತಾಗಿತ್ತು.

ಇದನ್ನೂ ಓದಿ: Jackfruit Auction: ಮೂಲರಪಟ್ಣ ಮಸೀದಿಯಲ್ಲಿ ಹಲಸಿನ ಹಣ್ಣು ಹರಾಜು; ಬರೋಬ್ಬರಿ 4.33 ಲಕ್ಷ ರೂ.ಗೆ ಹಲಸು ಖರೀದಿ

ಕರಾವಳಿಯಲ್ಲಿ ದೈವಗಳ ಉತ್ಸವದಲ್ಲಿ ಇಂತಹ ಹಲವಾರು ವಿಸ್ಮಯಗಳು ಅಲ್ಲಲ್ಲಿ ಕಂಡು ಬರುತ್ತದೆ. ಆದರೆ ಪಲ್ಲಕಿಯೊಂದರ ಮೇಲೆ ದೈವದ ಆವಾಹನೆಯಾಗಿ ಜನರನ್ನೇ ಎಳೆದಾಡೋದು ಈ ಕ್ಷೇತ್ರದಲ್ಲಿ ಮಾತ್ರ. ಇದು ಅಸಾಧ್ಯ ಅಂತ ಅನಿಸಿದ ದೈವ ಆರಾಧಕರೇ ಹಲವವರು ಸ್ವತಹ ಬಂದು ಕಣ್ಣಾರೆ ಕಂಡು ಅಚ್ಚರಿ ಪಟ್ಟಿದ್ದಾರೆ. ಸದ್ಯ ಸಕಲ ಭಕ್ತರ ಕೋರಿಕೆಯನ್ನು ಈಡೇರಿಸ್ತಾ ಇರೋ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಇನ್ನು ಮೂರು ದಿನ ಉತ್ಸವದ ಬಳಿಕ ಪಲ್ಲಕಿ ಮತ್ತೆ ಮೂಲ ಸ್ಥಾನಕ್ಕೆ ಹೋಗಲಿದೆ.

ವರದಿ: ಅಶೋಕ್ ಟಿ.ವಿ 9 ಮಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:40 pm, Wed, 29 March 23