ಬೆಂಗಳೂರು, ಡಿ.18: ಇತ್ತೀಚೆಗಷ್ಟೇ ಕರ್ನಾಟಕದ ಬೆಂಗಳೂರು (Bengaluru) ಸೇರಿದಂತೆ ಮಹಾರಾಷ್ಟ್ರದ 44 ಕಡೆಗಳಲ್ಲಿ ಎನ್ಐಎ ದಾಳಿ (NIA Raid) ನಡೆಸಿತ್ತು. ಅಂದು ಬೆಂಗಳೂರಿನಲ್ಲಿ ಶಂಕಿತ ಉಗ್ರ ಅಲಿ ಅಬ್ಬಾಸ್ನನ್ನು ಬಂಧಿಸಲಾಗಿತ್ತು. ಇಂದು ಮತ್ತೆ ದೇಶಾದ್ಯಂತ 41 ಕಡೆಗಳಲ್ಲಿ ಎನ್ಐಎ ದಾಳಿ ನಡೆದಿದ್ದು, ಬೆಂಗಳೂರಿನಲ್ಲಿ ಶಮೀವುಲ್ಲಾ ಎಂಬಾತನ ಮನೆಯಲ್ಲಿ ಸ್ಫೋಟಕ ತಯಾರಿಕೆಗೆ ಬಳಸುವ ಏಳು ಕೆಜಿ ಸೋಡಿಯಂ ನೈಟ್ರೇಟ್ ಪತ್ತೆಯಾಗಿದೆ.
ನಗರದ ಶಿವಾಜಿನಗರ, ಪುಲಿಕೇಶಿನಗರ, ಸುಲ್ತಾನ್ ಪಾಳ್ಯ, ಆರ್.ಟಿ.ನಗರ, ಜೆ.ಸಿ.ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ನಗರದ 20ಕ್ಕೂ ಹೆಚ್ಚು ಕಡೆಗಳಲ್ಲಿ ಹಾಗೂ ಬಳ್ಳಾರಿಯಲ್ಲಿ ಒಂಬತ್ತು ಕಡೆಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದರಂತೆ, ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಶಮಿವುಲ್ಲಾ ವಾಸವಿದ್ದ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದಾಗ ಸ್ಫೋಟಕ ತಯಾರಿಕೆಗೆ ಬಳಸುವ 7 ಕೆಜಿ ಸೋಡಿಯಂ ನೈಟ್ರೇಟ್ ಪತ್ತೆಯಾಗಿದೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಐವರು ಸೇರಿ 24 ವಾಂಟೆಡ್ ಆರೋಪಿಗಳ ಹೆಸರು ಪ್ರಕಟಿಸಿದ ಎನ್ಐಎ
ದಾಳಿ ವೇಳೆ ಶಮಿವುಲ್ಲಾ, ಸೂಫಿಯಾನ್ ಆಗಿ ಮತಾಂತರಗೊಂಡಿದ್ದ ನಿಖಿಲ್, ನಿಷೇಧಿತ ಪಿಎಫ್ಐ ಬಳ್ಳಾರಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸುಲೇಮಾನ್, ಅಜಾಜ್ ಅಹ್ಮದ್, ತಬ್ರೇಜ್, ಮುಜಾಮಿಲ್ ಎಂಬುವರನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ