ಹದಿಹರೆಯದ ವಯಸ್ಸಿನಲ್ಲಿ ಹುಟ್ತು ಪ್ರೀತಿ.. ತಾಯಿಯನ್ನು ಕಳೆದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡ ಯುವತಿ

ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹದಿಹರೆಯದ ವಯಸ್ಸಿನಲ್ಲಿ ಹುಟ್ತು ಪ್ರೀತಿ.. ತಾಯಿಯನ್ನು ಕಳೆದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡ ಯುವತಿ
ಭರತ್ ಬಂಧಿತ ವ್ಯಕ್ತಿ

Updated on: Jan 10, 2021 | 7:30 AM

ಬೆಂಗಳೂರು: ಹದಿಹರೆಯದ ವಯಸ್ಸಿನಲ್ಲಿ ಪ್ರೀತಿಯ ಗೀಳಿಗೆ ಬಿದ್ದು ಯುವತಿ ಜೀವನವನ್ನೇ ಅಂತ್ಯಗೊಳಿಸಿದ್ದಾಳೆ. ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೆಮಿನಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ತಾಯಿ ಆತ್ಮಹತ್ಯೆ ಮಾಡಿಕೊಂಡ ಎರಡೇ ತಿಂಗಳಿಗೆ ಜೆಮಿನಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಬೆಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಜೆಮಿನಿ, ಕಾಲೇಜಿನಲ್ಲಿದ್ದಾಗಲೇ ಭರತ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಗಾಂಜಾ ವ್ಯಸನಿಯಾಗಿದ್ದ ಭರತ್ ಸಹವಾಸ ಬೇಡವೆಂದು ಪೋಷಕರು ಬುದ್ಧಿವಾದ ಹೇಳಿದ್ದರು. ಆದ್ರೆ ಪೋಷಕರ ಮಾತನ್ನ ಧಿಕ್ಕರಿಸಿ ಭರತ್​ನನ್ನ ಪ್ರೀತಿಸುತ್ತಿದ್ದ ಮಗಳ ವರ್ತನೆಗೆ ಬೇಸತ್ತು ಎರಡು ತಿಂಗಳ ಹಿಂದೆ ತಾಯಿ ಶಶಿಕಲಾ ಆತ್ಮಹತ್ಯೆಗೆ ಶರಣಾಗಿದ್ದರು.

ತಾಯಿಯ ಸಾವಿನ ನಂತರವೂ ಜೆಮಿನಿ, ಭರತ್ ಸಹವಾಸ ಮುಂದುವರೆಸಿದ್ದಳು. ಜನವರಿ 1 ರಂದು ಭರತ್, ಜೆಮಿನಿಯ ತಂದೆ ನಾಗರಾಜ್​ಗೆ ಕರೆ ಮಾಡಿ ಜೆಮಿನಿಗೆ ವಿಶ್ ಮಾಡಲು‌ ಫೋನ್ ಕೊಡುವಂತೆ ಕೇಳಿಕೊಂಡಿದ್ದ. ಆ ವೇಳೆ ನಾಗರಾಜ್, ಭರತ್​ಗೆ ಬೈದು ಬುದ್ಧಿವಾದ ಹೇಳಿದ್ದರು. ಆದ್ರೆ ಜನವರಿ 5 ರಂದು ಜೆಮಿನಿ ನೇಣಿಗೆ ಶರಣಾಗಿದ್ದಾಳೆ. ತಂದೆ ನಾಗರಾಜ್ ದೂರಿನನ್ವಯ ಪ್ರಕರಣ ದಾಖಲಾಗಿದ್ದು ಆರೋಪಿ ಭರತ್​ನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಬಂಗಾರಪೇಟೆಯಲ್ಲಿ ಅಗ್ನಿ ಅವಘಡ: ಎಲೆಕ್ಟ್ರಿಕ್ ಉಪಕರಣಗಳ ಮಳಿಗೆ ಸಂಪೂರ್ಣ ಭಸ್ಮ