ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ನೀಡಿತು ಶಾಕ್ ಟ್ರೀಟ್ಮೆಂಟ್!

ಬೆಂಗಳೂರು: ಲಾಕ್​ಡೌನ್​ ಅವಧಿಯಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಸರ್ಕಾರ ಮೂರು ದಿನಗಳಿಂದ ಹಳೆಯ ದರದಲ್ಲಿಯೇ ಮದ್ಯ ಸರಬರಾಜು ಮಾಡಿ, ಮದ್ಯ ಪ್ರಿಯರಿಂದ ಸೈ ಟನ್ನಿಸಿಕೊಂಡಿತ್ತು. ಆದ್ರೆ ಈಗ ರಾಜ್ಯ ಸರ್ಕಾರ ಕುಡುಕರಿಗೆ ಅಪ್ರಿಯ ನ್ಯೂಸ್ ನೀಡಿದೆ. ಬ್ರಾಂದಿ, ವಿಸ್ಕಿ, ರಮ್, ಜಿನ್ ಇತರ ಮದ್ಯಗಳ ಸುಂಕ ಹೆಚ್ಚಳ ನಾಳೆಯಿಂದಲೇ ಜಾರಿಗೆ ಬರುವಂತೆ ಮದ್ಯದ ದರವನ್ನು ದುಬಾರಿ ಮಾಡಲಾಗಿದೆ. ಸರ್ಕಾರ ನಾಳೆಯಿಂದ ಮದ್ಯಕ್ಕೆ ಶೇ. 11ರಷ್ಟು ಸುಂಕ ಹೆಚ್ಚಿಸಿದೆ. ಚೀಪ್ ಲಿಕ್ಕರ್‌ ಶೇ. 17ರಷ್ಟು ಸುಂಕ ಹೆಚ್ಚಳಗೊಂಡಿದೆ. […]

ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ನೀಡಿತು ಶಾಕ್ ಟ್ರೀಟ್ಮೆಂಟ್!
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​

Updated on: May 06, 2020 | 5:32 PM

ಬೆಂಗಳೂರು: ಲಾಕ್​ಡೌನ್​ ಅವಧಿಯಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಸರ್ಕಾರ ಮೂರು ದಿನಗಳಿಂದ ಹಳೆಯ ದರದಲ್ಲಿಯೇ ಮದ್ಯ ಸರಬರಾಜು ಮಾಡಿ, ಮದ್ಯ ಪ್ರಿಯರಿಂದ ಸೈ ಟನ್ನಿಸಿಕೊಂಡಿತ್ತು. ಆದ್ರೆ ಈಗ ರಾಜ್ಯ ಸರ್ಕಾರ ಕುಡುಕರಿಗೆ ಅಪ್ರಿಯ ನ್ಯೂಸ್ ನೀಡಿದೆ.

ಬ್ರಾಂದಿ, ವಿಸ್ಕಿ, ರಮ್, ಜಿನ್ ಇತರ ಮದ್ಯಗಳ ಸುಂಕ ಹೆಚ್ಚಳ
ನಾಳೆಯಿಂದಲೇ ಜಾರಿಗೆ ಬರುವಂತೆ ಮದ್ಯದ ದರವನ್ನು ದುಬಾರಿ ಮಾಡಲಾಗಿದೆ. ಸರ್ಕಾರ ನಾಳೆಯಿಂದ ಮದ್ಯಕ್ಕೆ ಶೇ. 11ರಷ್ಟು ಸುಂಕ ಹೆಚ್ಚಿಸಿದೆ. ಚೀಪ್ ಲಿಕ್ಕರ್‌ ಶೇ. 17ರಷ್ಟು ಸುಂಕ ಹೆಚ್ಚಳಗೊಂಡಿದೆ. ಮಿಡಲ್ ಬ್ರ್ಯಾಂಡ್‌ ಶೇ. 21ರಷ್ಟು ಸುಂಕ ಹೆಚ್ಚಳ ಕಂಡಿದೆ. ಇನ್ನು, ಹೈಬ್ರ್ಯಾಂಡ್‌ ಮದ್ಯಕ್ಕೆ ಶೇ. 25ರಷ್ಟು ಸುಂಕ ಹೆಚ್ಚಳವಾಗಿದೆ. ಬಿಯರ್, ವೈನ್, ಫೆನ್ನಿ, ಹೆಂಡದ ಸುಂಕದಲ್ಲಿ ಹೆಚ್ಚಳವಿಲ್ಲ.

Published On - 5:23 pm, Wed, 6 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us