AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲೇ ಇದ್ದುಬಿಟ್ರೆ ಕೊರೊನಾದಿಂದ ಅಲ್ಲ, ಹಸಿವಿನಿಂದ ಸಾಯ್ತೇವೆ: ಮಂಡ್ಯ ಮಹಿಳೆ ಅಳಲು

ಮಂಡ್ಯ: ನಾವು ಇಲ್ಲಿ ಮುಂಬೈನಲ್ಲಿಯೇ ಇದ್ದುಬಿಟ್ರೆ ಕೊರೊನಾ ಸೋಂಕಿನಿಂದ ಅಲ್ಲ, ಬದಲಿಗೆ ಹಸಿವಿನಿಂದ ಸಾಯುತ್ತೇವೆ ಎಂದು ಮಂಡ್ಯ ಮೂಲದ ಮಹಿಳೆಯೊಬ್ಬರು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ತವರು ಜಿಲ್ಲೆಯಾದ ಮಂಡ್ಯ ಜಿಲ್ಲೆಯ ಜನತೆಯಲ್ಲೂ ಅವರು ಒಂದು ಮನವಿಯನ್ನ ಮುಂದಿಟ್ಟಿದ್ದಾರೆ. ನಮ್ಮನ್ನು ರಾಜ್ಯಕ್ಕೆ ಬರಬೇಡಿ ಎಂದು ಹೇಳಿದರೆ ಹೇಗೆ? ನಿಮ್ಮ ಕುಟುಂಬದವರು ಇಲ್ಲಿ ಇದ್ದಿದ್ದರೆ ಹೀಗೆ ಮಾಡ್ತಿದ್ರಾ? ದಯವಿಟ್ಟು ನಾವು ನಮ್ಮೂರಿಗೆ ಬರಲು ಅವಕಾಶ ನೀಡಿ ಎಂದು ಸೌಮ್ಯ ರಾಣಿ ಎಂಬ ಹೆಸರಿನ ಆ […]

ಮುಂಬೈನಲ್ಲೇ ಇದ್ದುಬಿಟ್ರೆ ಕೊರೊನಾದಿಂದ ಅಲ್ಲ, ಹಸಿವಿನಿಂದ ಸಾಯ್ತೇವೆ: ಮಂಡ್ಯ ಮಹಿಳೆ ಅಳಲು
ಸಾಧು ಶ್ರೀನಾಥ್​
|

Updated on: May 06, 2020 | 1:47 PM

Share

ಮಂಡ್ಯ: ನಾವು ಇಲ್ಲಿ ಮುಂಬೈನಲ್ಲಿಯೇ ಇದ್ದುಬಿಟ್ರೆ ಕೊರೊನಾ ಸೋಂಕಿನಿಂದ ಅಲ್ಲ, ಬದಲಿಗೆ ಹಸಿವಿನಿಂದ ಸಾಯುತ್ತೇವೆ ಎಂದು ಮಂಡ್ಯ ಮೂಲದ ಮಹಿಳೆಯೊಬ್ಬರು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ತವರು ಜಿಲ್ಲೆಯಾದ ಮಂಡ್ಯ ಜಿಲ್ಲೆಯ ಜನತೆಯಲ್ಲೂ ಅವರು ಒಂದು ಮನವಿಯನ್ನ ಮುಂದಿಟ್ಟಿದ್ದಾರೆ.

ನಮ್ಮನ್ನು ರಾಜ್ಯಕ್ಕೆ ಬರಬೇಡಿ ಎಂದು ಹೇಳಿದರೆ ಹೇಗೆ? ನಿಮ್ಮ ಕುಟುಂಬದವರು ಇಲ್ಲಿ ಇದ್ದಿದ್ದರೆ ಹೀಗೆ ಮಾಡ್ತಿದ್ರಾ? ದಯವಿಟ್ಟು ನಾವು ನಮ್ಮೂರಿಗೆ ಬರಲು ಅವಕಾಶ ನೀಡಿ ಎಂದು ಸೌಮ್ಯ ರಾಣಿ ಎಂಬ ಹೆಸರಿನ ಆ ಕನ್ನಡತಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ನಾವು ಕೊರೊನಾ ಟೆಸ್ಟ್ ಮಾಡಿಸಿಕೊಂಡೇ ನಮ್ಮೂರಿಗೆ ಬರ್ತೀವಿ, ದಯವಿಟ್ಟು ನಮ್ಮ ಪರವಾಗಿರಿ ಎಂದೂ ವಾಟ್ಸಪ್​ ಗ್ರೂಪ್​ಗಳಲ್ಲಿ ಈ ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಾವೇನು ಪಾಕಿಸ್ತಾನದವರಾ? ಕನ್ನಡಿಗರು ಎಂದು ಎದೆ ತಟ್ಟಿಕಂಡು ಹೇಳುತ್ತೇವೆ! ನಾವೇನು ಪಾಕಿಸ್ತಾನದವರಾ? ಎಲ್ಲೇ ಹೋದರು ನಾವು ಕನ್ನಡಿಗರು ಎಂದು ಎದೆ ತಟ್ಟಿಕಂಡು ಹೇಳುತ್ತೇವೆ. ಆದ್ರೆ ಮುಂಬೈ ಕನ್ನಡಿಗರನ್ನ ಕರ್ನಾಟಕ ಸರ್ಕಾರ ಮರೆತಿದೆ. ಇನ್ನು, ನಮ್ಮ ಊರಿನವರೇ ನಮ್ಮನ್ನ ಬರಬೇಡಿ ಬರಬೇಡಿ ಅಂತಿದ್ದಾರೆ. ಯಾರೋ ಮೂವರಿಗೆ ಸೋಂಕು ಬಂದ ತಕ್ಷಣ ನಮಗೆಲ್ಲರಿಗೂ ಬಂದಿದೆ ಅಂತಲ್ಲ. ಇದೇ ಸ್ಥಾನದಲ್ಲಿ ನಿಮ್ಮ ಮನೆಯ ಸದಸ್ಯರಿದ್ರೂ ಹೀಗೆ ಮಾತಾಡ್ತಿದ್ರಾ ? ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಸ್ವಂತ ವಾಹನದಲ್ಲಿ‌ ನಮ್ಮ ಊರು ಸೇರಲು ಅವಕಾಶ ಕೊಡಿ: ನಾವೂ ಕೊರೋನಾ ಬಂದು ಸಾಯೋದಕ್ಕಿಂದ ಹಸಿವಿನಿಂದ ಸಾಯುತ್ತೇವೆ. ದಯವಿಟ್ಟು ನಮಗೆ ಊರಿಗೆ ಬರಲು ಅವಕಾಶ ಕೊಡಬೇಕು. ಸರ್ಕಾರ ನಮ್ಮ ಸಹಾಯಕಕ್ಕೆ ಬರಬೇಕು. ಸರ್ಕಾರ ಬಸ್ ವ್ಯವಸ್ಥೆ ಮಾಡದಿದ್ದರೂ ಪರವಾಗಿಲ್ಲ. ನಮ್ಮ ಸ್ವಂತ ವಾಹನಗಳಲ್ಲಿ‌ ನಾವು ನಮ್ಮ ಊರು ಸೇರಲು ಅವಕಾಶ ಕೊಡಬೇಕು ಎಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.