ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ನೀಡಿತು ಶಾಕ್ ಟ್ರೀಟ್ಮೆಂಟ್!
ಬೆಂಗಳೂರು: ಲಾಕ್ಡೌನ್ ಅವಧಿಯಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಸರ್ಕಾರ ಮೂರು ದಿನಗಳಿಂದ ಹಳೆಯ ದರದಲ್ಲಿಯೇ ಮದ್ಯ ಸರಬರಾಜು ಮಾಡಿ, ಮದ್ಯ ಪ್ರಿಯರಿಂದ ಸೈ ಟನ್ನಿಸಿಕೊಂಡಿತ್ತು. ಆದ್ರೆ ಈಗ ರಾಜ್ಯ ಸರ್ಕಾರ ಕುಡುಕರಿಗೆ ಅಪ್ರಿಯ ನ್ಯೂಸ್ ನೀಡಿದೆ. ಬ್ರಾಂದಿ, ವಿಸ್ಕಿ, ರಮ್, ಜಿನ್ ಇತರ ಮದ್ಯಗಳ ಸುಂಕ ಹೆಚ್ಚಳ ನಾಳೆಯಿಂದಲೇ ಜಾರಿಗೆ ಬರುವಂತೆ ಮದ್ಯದ ದರವನ್ನು ದುಬಾರಿ ಮಾಡಲಾಗಿದೆ. ಸರ್ಕಾರ ನಾಳೆಯಿಂದ ಮದ್ಯಕ್ಕೆ ಶೇ. 11ರಷ್ಟು ಸುಂಕ ಹೆಚ್ಚಿಸಿದೆ. ಚೀಪ್ ಲಿಕ್ಕರ್ ಶೇ. 17ರಷ್ಟು ಸುಂಕ ಹೆಚ್ಚಳಗೊಂಡಿದೆ. […]

ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಲಾಕ್ಡೌನ್ ಅವಧಿಯಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಸರ್ಕಾರ ಮೂರು ದಿನಗಳಿಂದ ಹಳೆಯ ದರದಲ್ಲಿಯೇ ಮದ್ಯ ಸರಬರಾಜು ಮಾಡಿ, ಮದ್ಯ ಪ್ರಿಯರಿಂದ ಸೈ ಟನ್ನಿಸಿಕೊಂಡಿತ್ತು. ಆದ್ರೆ ಈಗ ರಾಜ್ಯ ಸರ್ಕಾರ ಕುಡುಕರಿಗೆ ಅಪ್ರಿಯ ನ್ಯೂಸ್ ನೀಡಿದೆ.
ಬ್ರಾಂದಿ, ವಿಸ್ಕಿ, ರಮ್, ಜಿನ್ ಇತರ ಮದ್ಯಗಳ ಸುಂಕ ಹೆಚ್ಚಳ ನಾಳೆಯಿಂದಲೇ ಜಾರಿಗೆ ಬರುವಂತೆ ಮದ್ಯದ ದರವನ್ನು ದುಬಾರಿ ಮಾಡಲಾಗಿದೆ. ಸರ್ಕಾರ ನಾಳೆಯಿಂದ ಮದ್ಯಕ್ಕೆ ಶೇ. 11ರಷ್ಟು ಸುಂಕ ಹೆಚ್ಚಿಸಿದೆ. ಚೀಪ್ ಲಿಕ್ಕರ್ ಶೇ. 17ರಷ್ಟು ಸುಂಕ ಹೆಚ್ಚಳಗೊಂಡಿದೆ. ಮಿಡಲ್ ಬ್ರ್ಯಾಂಡ್ ಶೇ. 21ರಷ್ಟು ಸುಂಕ ಹೆಚ್ಚಳ ಕಂಡಿದೆ. ಇನ್ನು, ಹೈಬ್ರ್ಯಾಂಡ್ ಮದ್ಯಕ್ಕೆ ಶೇ. 25ರಷ್ಟು ಸುಂಕ ಹೆಚ್ಚಳವಾಗಿದೆ. ಬಿಯರ್, ವೈನ್, ಫೆನ್ನಿ, ಹೆಂಡದ ಸುಂಕದಲ್ಲಿ ಹೆಚ್ಚಳವಿಲ್ಲ.
Published On - 5:23 pm, Wed, 6 May 20




