ಬಳ್ಳಾರಿಯಲ್ಲಿ 1,000 ದಾಟಿದ ಸೋಂಕಿತರ ಸಂಖ್ಯೆ, ಬೀದರ್‌ನಲ್ಲೂ ಬಾಲ ಬಿಚ್ಚಿದ ಹೆಮ್ಮಾರಿ

ಬಳ್ಳಾರಿ: ಡೆಡ್ಲಿ ಕೊರೊನಾ ಇವತ್ತು ಬಳ್ಳಾರಿ ಜಿಲ್ಲೆಯಲ್ಲಿ ನಡುಕ ಹುಟ್ಟಿಸಿದೆ. ಇವತ್ತು ಒಂದೇ ದಿನ ಗಣಿನಾಡು ಬಳ್ಳಾರಿಯಲ್ಲಿ 89 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಸಾವಿರ ಗಡಿದಾಟಿ 1019ಕ್ಕೆ ತಲುಪಿದೆ. ಬೀದರ್‌ನಲ್ಲಿ ಸೋಂಕಿತರ ಸಂಖ್ಯೆ 646ಕ್ಕೆ ಇನ್ನೊಂದೆಡೆ ಕರ್ನಾಟಕದ ಉತ್ತರದ ತುತ್ತ ತುದಿ ಜಿಲ್ಲೆ ಬೀದರ್‌ನಲ್ಲೂ ಕೊರೊನಾ ಹೆಮ್ಮಾರಿ ಬಾಲ ಬಿಚ್ಚಿದೆ. ಇವತ್ತೊಂದೇ ದಿನ ಬೀದರ್‌ನಲ್ಲಿ 32 ಪ್ರಕರಣಗಳು ವರದಿಯಾಗಿವೆ. ಇಂದಿನ ಸೋಂಕಿತರ ಸಂಖ್ಯೆಯೊಂದಿಗೆ ಬೀದರ್‌ನಲ್ಲಿ ಸೋಂಕಿತರ ಸಂಖ್ಯೆ ಈಗ […]

ಬಳ್ಳಾರಿಯಲ್ಲಿ 1,000 ದಾಟಿದ ಸೋಂಕಿತರ ಸಂಖ್ಯೆ, ಬೀದರ್‌ನಲ್ಲೂ ಬಾಲ ಬಿಚ್ಚಿದ ಹೆಮ್ಮಾರಿ

Updated on: Jul 02, 2020 | 6:43 PM

ಬಳ್ಳಾರಿ: ಡೆಡ್ಲಿ ಕೊರೊನಾ ಇವತ್ತು ಬಳ್ಳಾರಿ ಜಿಲ್ಲೆಯಲ್ಲಿ ನಡುಕ ಹುಟ್ಟಿಸಿದೆ. ಇವತ್ತು ಒಂದೇ ದಿನ ಗಣಿನಾಡು ಬಳ್ಳಾರಿಯಲ್ಲಿ 89 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಸಾವಿರ ಗಡಿದಾಟಿ 1019ಕ್ಕೆ ತಲುಪಿದೆ.

ಬೀದರ್‌ನಲ್ಲಿ ಸೋಂಕಿತರ ಸಂಖ್ಯೆ 646ಕ್ಕೆ
ಇನ್ನೊಂದೆಡೆ ಕರ್ನಾಟಕದ ಉತ್ತರದ ತುತ್ತ ತುದಿ ಜಿಲ್ಲೆ ಬೀದರ್‌ನಲ್ಲೂ ಕೊರೊನಾ ಹೆಮ್ಮಾರಿ ಬಾಲ ಬಿಚ್ಚಿದೆ. ಇವತ್ತೊಂದೇ ದಿನ ಬೀದರ್‌ನಲ್ಲಿ 32 ಪ್ರಕರಣಗಳು ವರದಿಯಾಗಿವೆ. ಇಂದಿನ ಸೋಂಕಿತರ ಸಂಖ್ಯೆಯೊಂದಿಗೆ ಬೀದರ್‌ನಲ್ಲಿ ಸೋಂಕಿತರ ಸಂಖ್ಯೆ ಈಗ 646ಕ್ಕೇರಿದೆ.

ಹಾವೇರಿಯಲ್ಲಿ 122ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ಹಾವೇರಿ ಜಿಲ್ಲೆಯಲ್ಲಿ ಇವತ್ತು ಹೊಸದಾಗಿ ನಾಲ್ಕು ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿವೆ. ಹಾವೇರಿ ಜಿಲ್ಲೆಯ ಅಕ್ಕಿಆಲೂರು, ಯಳ್ಳೂರು ಪ್ಲಾಟ್ , ಮೇದೂರು ಮತ್ತು ಕನವಳ್ಳಿ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಹಾವೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 122ಕ್ಕೆ ಏರಿದೆ.

Published On - 6:26 pm, Thu, 2 July 20