ಪಾರ್ಕ್ ಟೈಂ ಮೀರಿ ವಾಕಿಂಗ್, ಪ್ರಶ್ನಿಸಿದಕ್ಕೆ ಹೋಂ ಗಾರ್ಡ್ಗೆ ಬಿತ್ತು ಗೂಸಾ, ಎಲ್ಲಿ..?
ಬೆಂಗಳೂರು: ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಆಯ್ತು. ನಂತರ ವೈದ್ಯರು, ಪೊಲೀಸರ ಮೇಲೂ ಸಹ ಹಲ್ಲೆ ನಡೆಯಿತು. ಇದೀಗ ಗೃಹರಕ್ಷಕ ದಳದ ಸಿಬ್ಬಂದಿಯ ಮೇಲೆ ಗಂಭೀರವಾದ ಹಲ್ಲೆ ನಡೆದಿರುವ ಘಟನೆ ನಗರದ ಅಮೃತಹಳ್ಳಿ ವ್ಯಾಪ್ತಿಯ ರಾಚೇನಹಳ್ಳಿ ಕೆರೆ ಪಾರ್ಕ್ ಬಳಿ ನಡೆದಿದೆ. ಹಲ್ಲೆಗೊಳಗಾದ ಹೋಂಗಾರ್ಡ್ನ ಮಂಜುನಾಥ್ (30) ಎಂದು ಗುರುತಿಸಲಾಗಿದೆ. ಈಶಾನ್ಯ ವಿಭಾಗದ ಅಮೃತಹಳ್ಳಿಯ ಗೃಹರಕ್ಷಕ ದಳಕ್ಕೆ ಸೇರಿರುವ ಮಂಜುನಾಥ್ ಮೇಲೆ ಸ್ಥಳೀಯ ನಿವಾಸಿ ರಾಘವೇಂದ್ರ (40) ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ […]
ಬೆಂಗಳೂರು: ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಆಯ್ತು. ನಂತರ ವೈದ್ಯರು, ಪೊಲೀಸರ ಮೇಲೂ ಸಹ ಹಲ್ಲೆ ನಡೆಯಿತು. ಇದೀಗ ಗೃಹರಕ್ಷಕ ದಳದ ಸಿಬ್ಬಂದಿಯ ಮೇಲೆ ಗಂಭೀರವಾದ ಹಲ್ಲೆ ನಡೆದಿರುವ ಘಟನೆ ನಗರದ ಅಮೃತಹಳ್ಳಿ ವ್ಯಾಪ್ತಿಯ ರಾಚೇನಹಳ್ಳಿ ಕೆರೆ ಪಾರ್ಕ್ ಬಳಿ ನಡೆದಿದೆ.
ಹಲ್ಲೆಗೊಳಗಾದ ಹೋಂಗಾರ್ಡ್ನ ಮಂಜುನಾಥ್ (30) ಎಂದು ಗುರುತಿಸಲಾಗಿದೆ. ಈಶಾನ್ಯ ವಿಭಾಗದ ಅಮೃತಹಳ್ಳಿಯ ಗೃಹರಕ್ಷಕ ದಳಕ್ಕೆ ಸೇರಿರುವ ಮಂಜುನಾಥ್ ಮೇಲೆ ಸ್ಥಳೀಯ ನಿವಾಸಿ ರಾಘವೇಂದ್ರ (40) ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಪಾರ್ಕ್ನ ಆಡಳಿತ ಮಂಡಳಿ ವಿಹಾರದ ಟೈಮಿಂಗ್ಸ್ ಬೆಳಗ್ಗೆ 6 ರಿಂದ 9 ವರೆಗೆ ಮಾತ್ರ ಎಂದು ನಿಗದಿಪಡಿಸಿತ್ತು. ಆದರೆ, ಟೈಮಿಂಗ್ಸ್ ಮೀರಿದ್ರೂ ಪಾರ್ಕ್ನಲ್ಲಿ ರಾಘವೇಂದ್ರ ವಾಕ್ ಮಾಡಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿದಕ್ಕೆ ಸಿಟ್ಟಾದ ರಾಘವೇಂದ್ರ ಮಂಜುನಾಥ್ ಮೇಲೆ ಹಲ್ಲೆ ಮಾಡಿದ್ದಾರಂತೆ.
ಹಲ್ಲೆಗೊಳಗಾದ ಹೋಮ್ ಗಾರ್ಡ್ ಕೂಡಲೇ ತನ್ನ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಹಾಗಾಗಿ, ಸದ್ಯ ಹಲ್ಲೆ ನಡೆಸಿರುವ ರಾಘವೇಂದ್ರನ ಅಮೃತಹಳ್ಳಿ ಪೊಲೀಸ್ ವಶಕ್ಕೆ ಪಡೆದು ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
Published On - 6:48 pm, Thu, 2 July 20