ಹಾಸನ ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆ ಹಾವಳಿ: ಅಧಿಕಾರಿಗಳ ಸಭೆ

| Updated By: ಸಾಧು ಶ್ರೀನಾಥ್​

Updated on: Feb 16, 2021 | 5:39 PM

ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ ವಿಚಾರಕ್ಕೆ ಸಂಬಂಧಿಸಿದಂತೆ, ಸಕಲೇಶಪುರ ಪಟ್ಟಣದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಜನರ ಆಕ್ರೋಶ ಮುಗಿಲು ಮುಟ್ಟಿದೆ.

ಹಾಸನ ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆ ಹಾವಳಿ: ಅಧಿಕಾರಿಗಳ ಸಭೆ
ಕಾಡಾನೆ ಹಾವಳಿ ಮಿತಿಮೀರಿದ ವಿಚಾರ ಸಂಬಂಧಿಸಿ ಅಧಿಕಾರಿಗಳ ಸಭೆ
Follow us on

ಹಾಸನ: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ ವಿಚಾರಕ್ಕೆ ಸಂಬಂಧಿಸಿದಂತೆ, ಸಕಲೇಶಪುರ ಪಟ್ಟಣದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಹಾಜರಿದ್ದ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆ ನೀಡಿದ್ದಾರೆ. ಹಾಸನ, ಚಿಕ್ಕಮಗಳೂರು, ಕೊಡಗು, ಬೇಲೂರು ಭಾಗದ ಬಹುತೇಕ ಕಾಫಿ ಬೆಳೆಗಾರರು ಬಿಜೆಪಿಗೆ ಮತ ಹಾಕುತ್ತಾರೆ. ಈ ಕಾರಣಕ್ಕಾದರೂ ಅವರ ಸಮಸ್ಯೆ ಕಡೆ ಗಮನಹರಿಸಿ ಎಂದು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಅರಣ್ಯ ಸಚಿವರಿಗೆ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಜನರ ಅಹವಾಲು ಆಲಿಸದ ಸಚಿವರ ವಿರುದ್ದ ಜನರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಶಾಸಕರು ಸಂಸದರು ಮಾತನಾಡುತ್ತಿರುವಾಗಲೇ, ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾತನಾಡಲು ಮುಂದಾಗಿದ್ದಾರೆ. ಈ ವೇಳೆ ಸಭೆಯಲ್ಲಿ ಜನರ ಅಹವಾಲು ಕೇಳದೇ ನೀವು ಹೇಗೆ ಮಾತನಾಡುತ್ತೀರಾ? ಮೊದಲು ನಮ್ಮ ಮಾತು ಕೇಳಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Elephant Attack ಕಾಡಾನೆ ದಾಳಿಗೆ ಮತ್ತೋರ್ವ ವ್ಯಕ್ತಿ ಬಲಿ.. ಹಾಸನದಲ್ಲಿ ಹೆಚ್ಚುತ್ತಿದೆ ಕಾಡಾನೆ ಹಾವಳಿ

ಈ ಕುರಿತಂತೆ ಮಾತನಾಡುತ್ತಿದ್ದ ಪ್ರಜ್ವಲ್ ರೆವಣ್ಣ, ನನಗೇನೂ ಬೇಜಾರಿಲ್ಲ. ಮೊದಲು ಜನರ ಸಮಸ್ಯೆ ಬಗೆಹರಿಸಿ. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ವಾರಕ್ಕೊಂದು ಧರಣಿ ಮಾಡುತ್ತಿದ್ದರು. ಬಿಎಸ್‌ವೈ ಮುಖ್ಯಮಂತ್ರಿಯಾದ ಬಳಿಕ ಒಂದು ಪ್ರತಿಭಟನೆಯೂ ಆಗಿಲ್ಲ. ನಿಮ್ಮ ಮೇಲೆ ಕಾಫಿ ಬೆಳೆಗಾರರಿಗೆ ಅಷ್ಟೊಂದು ಅಭಿಮಾನ. ಇದಕ್ಕಾದರೂ ನೀವು ಅವರ ಸಮಸ್ಯೆಯನ್ನು ಬಗೆಹರಿಸಿ ಎಂದು ಕೇಳಿದ್ದಾರೆ.

ಅಧಿಕಾರಿಗಳ ಸಭೆ