ಹಾಡುವವರ ಪಾಡು ಕೇಳೋರು ಯಾರೂ ಇಲ್ಲ.. ಆದ್ರೆ ಹಾಡು ಹಕ್ಕಿಗೂ ಬೇಕಿದೆ ಒಂದು ಗೂಡು, ನೆಲೆ!

|

Updated on: Jan 18, 2021 | 4:10 PM

ಹಾಡು ಹಕ್ಕಿಗೂ ಬೇಕು ಬಿರುದು ಸನ್ಮಾನ.. ಹಾಡಿನ ಮೂಲಕವೇ ಪ್ರತಿಭಟನೆ ನಡೆಸಿದ ಆರ್ಕೆಸ್ಟ್ರಾ ಕಲಾವಿದರು. ಬೇಡಿಕೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ.

ಹಾಡುವವರ ಪಾಡು ಕೇಳೋರು ಯಾರೂ ಇಲ್ಲ.. ಆದ್ರೆ ಹಾಡು ಹಕ್ಕಿಗೂ ಬೇಕಿದೆ ಒಂದು ಗೂಡು, ನೆಲೆ!
ಹಾಡುವವರ ಪಾಡು ಕೇಳೋರು ಯಾರೂ ಇಲ್ಲ.. ಆದ್ರೆ ಹಾಡು ಹಕ್ಕಿಗೂ ಬೇಕಿದೆ ಒಂದು ಗೂಡು, ನೆಲೆ!
Follow us on

ಬೆಂಗಳೂರು: ಕೊರೊನಾ ನಿಮಿತ್ತ ಆರ್ಕೆಸ್ಟ್ರಾಗಳ ಮೇಲೆ ಹೇರಲಾಗಿರುವ ನಿರ್ಬಂಧ ತೆರವುಗೊಳಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ವಾದ್ಯಗೋಷ್ಠಿ ಕಲಾವಿದರ ಮಹಾಸಂಘದ ವತಿಯಿಂದ ಬೆಂಗಳೂರಿನ ಮೌರ್ಯ ಸರ್ಕಲ್​ನಲ್ಲಿ ವಿನೂತನ ಶೈಲಿಯ ಪ್ರತಿಭಟನೆ ನಡೆಸಲಾಗಿದೆ. ಆರ್ಕೆಸ್ಟ್ರಾ ಕಲಾವಿದರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಬೇಕು. ಪ್ರಶಸ್ತಿ, ಪುರಸ್ಕಾರಗಳನ್ನೂ ಕೊಟ್ಟು ಗೌರವಿಸಬೇಕು ಎಂದು ಆಗ್ರಹಿಸಿರುವ ಕಲಾವಿದರು ಮುಖ್ಯಮಂತ್ರಿ ಮತ್ತು ಸಚಿವರು ಸ್ಥಳಕ್ಕೆ ಬರುವ ತನಕ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದ್ದಾರೆ.

ಹಾಡು, ನೃತ್ಯ, ಮಿಮಿಕ್ರಿ, ವಾದ್ಯಗೋಷ್ಠಿಗಳ ಮೂಲಕ ಪ್ರತಿಭಟನೆ ಆರಂಭಿಸಿದ ಕಲಾವಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಿಗುವ ಎಲ್ಲಾ ರೀತಿಯ ಸೌಲಭ್ಯಗಳನ್ನು ನಮಗೆ ಕೊಡಬೇಕು. ಜಾತ್ರೆ, ಉತ್ಸವ, ರಾಜ್ಯೋತ್ಸವ ಸಮಾರಂಭಗಳಲ್ಲಿ ಪ್ರೋತ್ಸಾಹ ನೀಡಬೇಕು. ವಾದ್ಯಗೋಷ್ಠಿ ನುಡಿಸುವ ಕಲಾವಿದರಿಗೆ 5 ಸಾವಿರ ಮನೆ ಮಂಜೂರು ಮಾಡಬೇಕು ಹಾಗೂ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗಳನ್ನು ನೀಡಿ ಗೌರವಿಸಬೇಕು ಎಂದು ಆಗ್ರಹಿಸಿದರು.


ಕೊರೊನಾ ಕಾರಣದಿಂದ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಆರ್ಕೆಸ್ಟ್ರಾ ನಡೆಸುವಂತಿಲ್ಲ ಎಂದು ವಿಧಿಸಲಾಗಿದ್ದ ನಿರ್ಬಂಧವನ್ನು ಇನ್ನೂ ತೆರವುಗೊಳಿಸದೇ ಇರುವುದು ಸರಿಯಲ್ಲ. ಕಾರ್ಯಕ್ರಮ ಪುನರಾರಂಭಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದ ನೂರಾರು ಕಲಾವಿದರು ಹಾಡುಗಳ ಮೂಲಕ ಪ್ರತಿಭಟಿಸಿದ್ದು, ಮುಖ್ಯಮಂತ್ರಿ ಮತ್ತು ಸಚಿವರು ಸ್ಥಳಕ್ಕೆ ಬರದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಆರ್ಕೆಸ್ಟ್ರಾ ಕಲಾವಿದರ ಪ್ರತಿಭಟನೆಗೆ ಕಿಚ್ಚ ಸುದೀಪ್​ ಬೆಂಬಲ; ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯ

Published On - 3:30 pm, Mon, 18 January 21