ಕರ್ನಾಟಕ ಸರ್ಕಾರದ ಕಾರ್ಯಕ್ರಮದಲ್ಲಿ ಮರಾಠಿ ಪ್ರೇಮ: ಕನ್ನಡಿಗರ ಆಕ್ರೋಶ
ಒಂದು ಕಡೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿ ವಿಚಾರದಲ್ಲಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ಮತ್ತೊಂದೆಡೆ, ರಾಜ್ಯದ ಸಚಿವರ ಮರಾಠಿ ಪ್ರೇಮಕ್ಕೆ ಕನ್ನಡಿಗರ ಆಕ್ರೋಶ ವ್ಯಕ್ತವಾಗಿದೆ.

ಬೆಳಗಾವಿ: ನಿಪ್ಪಾಣಿಯ ತಾಯಿ-ಮಗು ಆಸ್ಪತ್ರೆ ಉದ್ಘಾಟನೆಯಲ್ಲಿ ಮರಾಠಿ ಗೀತೆ ಹಾಡಲಾಗಿದೆ. ಸ್ವಾಗತ ಸೇರಿದಂತೆ ಬಹುತೇಕ ಭಾಷಣಕ್ಕೆ ಮರಾಠಿ ಭಾಷೆ ಬಳಕೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ಆರೋಗ್ಯ ಸಚಿವ ಡಾ. ಸುಧಾಕರ್ ಸಮ್ಮುಖದಲ್ಲೇ ಮರಾಠಿಗೆ ಮಣೆ ಹಾಕಲಾಗಿದೆ.
ಒಂದು ಕಡೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿ ವಿಚಾರದಲ್ಲಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ಮತ್ತೊಂದೆಡೆ, ರಾಜ್ಯದ ಸಚಿವರ ಮರಾಠಿ ಪ್ರೇಮಕ್ಕೆ ಕನ್ನಡಿಗರ ಆಕ್ರೋಶ ವ್ಯಕ್ತವಾಗಿದೆ. ಸಮಾರಂಭದಲ್ಲಿ ಆಯೋಜಕರು ಮರಾಠಿ ಭಾಷೆಯ ಸ್ವಾಗತ ಗೀತೆಯನ್ನು ಹಾಡಿಸಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಶಾಸಕರಾಗಿರುವ ಕ್ಷೇತ್ರದಲ್ಲಿ, ಮರಾಠಿಮಯವಾದ ಸರ್ಕಾರಿ ಕಾರ್ಯಕ್ರಮ ನಡೆಸಿರುವುದರ ಬಗ್ಗೆ ಜನರ ಆಕ್ರೋಶ ವ್ಯಕ್ತವಾಗಿದೆ.
ಸಚಿವೆ ಶಶಿಕಲಾ ಜೊಲ್ಲೆ ಸಮರ್ಥನೆ ಸರ್ಕಾರಿ ಕಾರ್ಯಕ್ರಮದಲ್ಲಿ ಮರಾಠಿ ಪ್ರೇಮ ವಿಚಾರವನ್ನು ಸಚಿವೆ ಶಶಿಕಲಾ ಜೊಲ್ಲೆ ಸಮರ್ಥನೆ ಮಾಡಿಕೊಂಡಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಕೆಲವು ವೈದ್ಯರು ಮಾತನಾಡಿದ್ದಾರೆ. ಅವರಿಗೆ ಕನ್ನಡ ಬರಲ್ಲ ಎಂದು ಭಾವನಾತ್ಮಕವಾಗಿ ಮರಾಠಿಯಲ್ಲಿ ಮಾತಾಡಿದ್ದಾರೆ. ನಿಪ್ಪಾಣಿಯಲ್ಲಿ ಮರಾಠಿ ಜೊತೆ ಕನ್ನಡ ಭಾಷೆಯೂ ಬೆಳೆಯುತ್ತಿದೆ ಎಂದು ಜೊಲ್ಲೆ ಸಮಜಾಯಿಷಿ ನೀಡಿದ್ದಾರೆ.
ನಾನು ಮತ್ತು ಡಾ.ಸುಧಾಕರ್ ಮಾತಾಡಿದಾಗ ನಮ್ಮ ಜನ ಚಪ್ಪಾಳೆ ತಟ್ಟಿದ್ದಾರೆ. ಬೆಳಗಾವಿ ಹಾಗೂ ಮಹಾರಾಷ್ಟ್ರ ಗಡಿಯಲ್ಲಿ ಮರಾಠಿ ಹಾಗೂ ಕನ್ನಡ ಭಾಷಿಕರು ಅನ್ನೋನ್ಯತೆಯಿಂದ ಇದ್ದಾರೆ. ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಗಡಿ ವಿಷಯದ ಬಗ್ಗೆ ಮಾತಾಡುವ ಅಧಿಕಾರ ಇಲ್ಲ. ಉದ್ಧವ್ ಠಾಕ್ರೆ ಹೇಳಿಕೆ ಮೂರ್ಖತನದ್ದು. ಅದನ್ನು ನಾನು ಖಂಡಿಸುತ್ತೇನೆ. ಯಾವುದೇ ಪರಿಸ್ಥಿತಿಯಲ್ಲೂ ಬೆಳಗಾವಿಯನ್ನ ಬಿಟ್ಟು ಕೊಡುವದಿಲ್ಲ ಎಂದು ಶಶಿಕಲಾ ಜೊಲ್ಲೆ ಮಾತನಾಡಿದ್ದಾರೆ.

ಕರ್ನಾಟಕ ಸರ್ಕಾರದ ಕಾರ್ಯಕ್ರಮದಲ್ಲಿ ಮರಾಠಿ ಹಾಡು
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧಟತನ ತೋರುತ್ತಿದ್ದಾರೆ.. ಗಡಿ ಸೌಹಾರ್ದತೆ ಕದಡುತ್ತಿದ್ದಾರೆ: ಸಿಎಂ ಯಡಿಯೂರಪ್ಪ ಆಕ್ರೋಶ
Published On - 4:53 pm, Mon, 18 January 21




