ನಿನ್ನೆ ಸಿಡಿಮಿಡಿ.. ಇಂದು ಚಕ್ಕಡಿ ಓಡಿಸಿ ಸುಗ್ಗಿ ಆಚರಿಸಿದ ಹೊನ್ನಾಳಿ ಹೋರಿ!
ನಿನ್ನೆಯವರೆಗೂ ಸಚಿವ ಸ್ಥಾನ ಸಿಗಲಿಲ್ಲ ಎಂದು ಸಿಡಿಮಿಡಿಗೊಂಡಿದ್ದ ಹೊನ್ನಾಳಿ ಶಾಸಕ M.P.ರೇಣುಕಾಚಾರ್ಯ ಇಂದು ಜಿಲ್ಲೆಯ ಹೊನ್ನಾಳಿಯಲ್ಲಿ ಸಂಕ್ರಾಂತಿ ಸುಗ್ಗಿ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಚಕ್ಕಡಿ ಓಡಿಸಿದರು.
ದಾವಣಗೆರೆ: ನಿನ್ನೆಯವರೆಗೂ ಸಚಿವ ಸ್ಥಾನ ಸಿಗಲಿಲ್ಲ ಎಂದು ಸಿಡಿಮಿಡಿಗೊಂಡಿದ್ದ ಹೊನ್ನಾಳಿ ಶಾಸಕ M.P. ರೇಣುಕಾಚಾರ್ಯ ಇಂದು ಕೊಂಚ ರಿಲ್ಯಾಕ್ಸ್ ಮೂಡ್ನಲ್ಲಿ ಕಂಡುಬಂದರು. ಮಂತ್ರಿಗಿರಿ ಒಲಿಯದ ನೋವಿನಲ್ಲಿದ್ದ ಶಾಸಕರು ಇಂದು ಜಿಲ್ಲೆಯ ಹೊನ್ನಾಳಿಯಲ್ಲಿ ಸಂಕ್ರಾಂತಿ ಸುಗ್ಗಿ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಚಕ್ಕಡಿ ಓಡಿಸಿದರು.
ಸಂಕ್ರಾಂತಿ ಸುಗ್ಗಿ ಅಂಗವಾಗಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಡಿಸಿಎಂ ಲಕ್ಷ್ಮಣ ಸವದಿ ಪಾಲ್ಗೊಂಡ ಕಾರ್ಯಕ್ರಮಕ್ಕೆ ರೇಣುಕಾಚಾರ್ಯ ಗೈರು ಹಾಜರಾಗಿದ್ದರು. ಜೊತೆಗೆ, ಪಕ್ಷದ ಹಿರಿಯ ನಾಯಕರ ಬಳಿ ತಮ್ಮ ಅಳಲು ತೋಡಿಕೊಳ್ಳಲು ಇಂದು ದೆಹಲಿಗೆ ಹೋಗುವುದಾಗಿ ಸಹ ಹೇಳಿದ್ದರು. ಆದರೆ, ಇದ್ಯಾವುದನ್ನೂ ಮಾಡದೆ ಶಾಸಕ ರೇಣುಕಾಚಾರ್ಯ ಇಂದು ಎತ್ತಿನ ಗಾಡಿ ಓಡಿಸುತ್ತಾ ಸ್ವಕ್ಷೇತ್ರದಲ್ಲೇ ಉಳಿದಿದ್ದರು.
ಅಂದ ಹಾಗೆ, ಶಾಸಕರು ಎತ್ತಿನ ಗಾಡಿ ಓಡಿಸಿದರೆ ಇತ್ತ ಹೆಂಗಳೆಯರು ಪೂರ್ಣಕುಂಭ ಕಲಶ ಹೊತ್ತು ಬಂಡಿಯ ಮುಂದೆ ಮೆರವಣಿಗೆ ಹೊರಟರು. ಶಾಸಕರ ಹುಮ್ಮಸ್ಸು ಮತ್ತು ಉತ್ಸಾಹ ನೋಡಿ ನೆರೆದವರು ಫುಲ್ ಫಿದಾ ಆದರು.
ರಮೇಶಣ್ಣ.. ನಿನಗೆ ಒಳ್ಳೆ ಖಾತೆ ಸಿಕ್ಕಿದೆ, ನೋಡ್ಕೊಂಡು ಸುಮ್ನಿರು -ರೇಣುಕಾಚಾರ್ಯ ಸಿಡಿಮಿಡಿ
Published On - 4:53 pm, Mon, 18 January 21