ಸಿದ್ದರಾಮಯ್ಯ ಹೇಳಿಕೆ ಮತ್ತು ನಾವು ಖರ್ಗೆಯವರನ್ನು ಭೇಟಿಯಾಗಿರುವ ನಡುವೆ ಸಂಬಂಧವಿಲ್ಲ: ಸತೀಶ್ ಜಾರಕಿಹೊಳಿ

Updated on: Jul 10, 2025 | 5:09 PM

ಸಿದ್ದರಾಮಯ್ಯ ಹೇಳಿಕೆ ನೀಡಿದ್ದಿ ಇವತ್ತು, ಅದರೆ ಮೂರು ದಿನಗಳಷ್ಟು ಮೊದಲೇ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗುವುದು ನಿಗದಿಯಾಗಿತ್ತು ಎಂದು ಸತೀಶ್ ಜಾರಕಿಹೊಳಿ ಹೇಳಿದರು. ರಾಜ್ಯದ ಸ್ಥಿತಿಗತಿಯ ಬಗ್ಗೆ ಖರ್ಗೆ ಅವರೊಂದಿಗೆ ಚರ್ಚೆ ನಡೆಯಿತು, ಸಿದ್ದರಾಮಯ್ಯನವರ ಹೇಳಿಕೆ ಮತ್ತು ಖರ್ಗೆಯವರ ಭೇಟಿಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಜಾರಕಿಹೊಳಿ ಹೇಳಿದರು.

ಬೆಂಗಳೂರು, ಜುಲೈ 10: ಐದು ವರ್ಷಗಳ ಅವಧಿಗೂ ನಾನೇ ಮುಖ್ಯಮಂತ್ರಿ ಎಂದು ಇವತ್ತು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿರುವುದನ್ನು ಹಿರಿಯ ಸಚಿವರು ಮತ್ತು ಕಾಂಗ್ರೆಸ್ ಪ್ರಮುಖ ನಾಯಕರು ಹೇಗೆ ಅರ್ಥೈಸಿಕೊಂಡಿದ್ದಾರೋ? ಅತ್ತ ಸಿದ್ದರಾಮಯ್ಯ ಹೇಳಿಕೆ ನೀಡಿದ ಕೂಡಲೇ ಇತ್ತ ಬೆಂಗಳೂರಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ (Satish Jarkiholi), ಡಾ ಹೆಚ್​ಸಿ ಮಹಾದೇವಪ್ಪ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಡಾ ಶರಣ ಪ್ರಕಾಶ್ ಪಾಟೀಲ್, ಬಿಜೆಡ್ ಜಮೀರ್ ಅಹ್ಮದ್ ಖಾನ್ ನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ದೌಡಾಯಿಸಿದರು. ಭೇಟಿಯ ನಂತರ ಮಾತಾಡಿದ ಸತೀಶ್ ಜಾರಕಿಹೊಳಿ, ಮಾಧ್ಯಮದವರು ಊಹಿಸಿರುವಂಥದ್ದೇನಿಲ್ಲ, ಖರ್ಗೆ ಅವರು ನಮ್ಮ ಅಧ್ಯಕ್ಷರು, ಅವರು ಬೆಂಗಳೂರಿಗೆ ಬಂದಿದ್ದು ಗೊತ್ತಾಯಿತು, ಸೌಹಾರ್ದಯುತ ಭೇಟಿಗೆ ಬಂದಿದ್ದು, ಅಷ್ಟೇ ಎಂದರು.

ಇದನ್ನೂ ಓದಿ:  ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ