ವಿಜಯೇಂದ್ರನಲ್ಲಿರುವ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಪಕ್ಷದ ವರಿಷ್ಠರು ಗುರುತಿಸಿದ್ದಾರೆ: ಎಸ್ ಎಂ ಕೃಷ್ಣ
ವಿಜಯೇಂದ್ರರನ್ನು ಹಾರೈಸಿ ಅಭಿನಂದಿಸಿದ ಕೃಷ್ಣ, ಯಡಿಯೂರಪ್ಪನವರು ಬಿಜೆಪಿಯನ್ನು ರಾಜ್ಯದಲ್ಲಿ ಒಂದು ಭದ್ರ ತಳಪಾಯ ಹಾಕಿ ಕಟ್ಟಿ ಬೆಳೆಸಿದ್ದಾರೆ, ಅದದನ್ನು ಬೃಹತ್ತಾಗಿ ಬೆಳೆಸುವ ದೊಡ್ಡ ಜವಾಬ್ದಾರಿಯನ್ನು ವಿಜಯೇಂದ್ರ ಮೇಲೆ ಹೊರಿಸಲಾಗಿದೆ ಎಂದರು
ಬೆಂಗಳೂರು: ರಾಜ್ಯದ ಎಲ್ಲ ಮುಖ್ಯಮಂತ್ರಿಗಳನ್ನು ಇವತ್ತು ಭೇಟಿಯಾಗಿ, ಮಾತಾಡಿಸಿ ಎಲ್ಲರ ಆಶೀರ್ವಾದ ಪಡೆದು ಬಾ ಅಂತ ಬಿಎಸ್ ಯಡಿಯೂರಪ್ಪ (BS Yediyurappa) ತಮ್ಮ ಮಗ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ (BY Vijayendra) ಹೇಳಿದ್ದಾರೆಯೇ? ಹೌದೆನಿಸುತ್ತದೆ ಮಾರಾಯ್ರೇ. ಮೊದಲಿಗೆ ಅವರು ಬಸವರಾಜ ಬೊಮ್ಮಾಯಿ ಆಮೇಲೆ ಹೆಚ್ ಡಿ ದೇವೇಗೌಡ ನಂತರ ಎಸ್ ಎಂ ಕೃಷ್ಣ (SM Krishna) ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ದೃಶ್ಯಗಳಲ್ಲಿ ಅವರನ್ನು ಕೃಷ್ಣ ಅವರೊಂದಿಗೆ ನೋಡಬಹುದು. ಈ ಸಂದರ್ಧದಲ್ಲಿ ವಿಜಯೇಂದ್ರರನ್ನು ಹಾರೈಸಿ ಅಭಿನಂದಿಸಿದ ಕೃಷ್ಣ, ಯಡಿಯೂರಪ್ಪನವರು ಬಿಜೆಪಿಯನ್ನು ರಾಜ್ಯದಲ್ಲಿ ಒಂದು ಭದ್ರ ತಳಪಾಯ ಹಾಕಿ ಕಟ್ಟಿ ಬೆಳೆಸಿದ್ದಾರೆ, ಅದದನ್ನು ಬೃಹತ್ತಾಗಿ ಬೆಳೆಸುವ ದೊಡ್ಡ ಜವಾಬ್ದಾರಿಯನ್ನು ವಿಜಯೇಂದ್ರ ಮೇಲೆ ಹೊರಿಸಲಾಗಿದೆ ಎಂದರು. ಯುವ ನಾಯಕನಲ್ಲಿರುವ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಗುರುತಿಸಿದ್ದಾರೆ. ಮುಂಬರುವ ಲೋಕಸಭಾ ಮತ್ತು ಸ್ಥಾನಕ ಚುನಾವಣೆಗಳಲ್ಲಿ ವಿಜಯೇಂದ್ರ ತಮ್ನ ಛಾಪು ಮೂಡಿಸಲಿದ್ದಾರೆ ಎಂದು ಕೃಷ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ