ಮೋದಿ ಸರ್ಕಾರಕ್ಕೆ 1 ವರ್ಷ, ಸಂಜೆ 6 ಗಂಟೆಗೆ ವರ್ಚುಯಲ್ ಕಾನ್ಫರೆನ್ಸ್: ಕರ್ನಾಟಕದಲ್ಲೇನು?

| Updated By: ಆಯೇಷಾ ಬಾನು

Updated on: Jun 15, 2020 | 10:47 AM

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವರ್ಚುಯಲ್ ಕಾನ್ಫರೆನ್ಸ್ ನಡೆಸಲಿದ್ದಾರೆ. ಇಂದು ಸಂಜೆ 6 ಗಂಟೆಗೆ ವರ್ಚುಯಲ್ ಕಾನ್ಫರೆನ್ಸ್ ನಡೀತಿದ್ದು, ಇದ್ರಲ್ಲಿ ಸಿಎಂ ಬಿಎಸ್​ವೈ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಗವಹಿಸಲಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರದ ಗದ್ದುಗೆ ಏರಿ ಒಂದು ವರ್ಷ ಆಗಿದೆ. 2ನೇ ಬಾರಿ ಗೆದ್ದು ಬೀಗಿದ್ದ ಕೇಸರಿ ಪಡೆ ಒಂದು ವರ್ಷದ ತಮ್ಮ ಸಾಧನೆಗಳನ್ನ […]

ಮೋದಿ ಸರ್ಕಾರಕ್ಕೆ 1 ವರ್ಷ, ಸಂಜೆ 6 ಗಂಟೆಗೆ ವರ್ಚುಯಲ್ ಕಾನ್ಫರೆನ್ಸ್: ಕರ್ನಾಟಕದಲ್ಲೇನು?
Follow us on

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವರ್ಚುಯಲ್ ಕಾನ್ಫರೆನ್ಸ್ ನಡೆಸಲಿದ್ದಾರೆ. ಇಂದು ಸಂಜೆ 6 ಗಂಟೆಗೆ ವರ್ಚುಯಲ್ ಕಾನ್ಫರೆನ್ಸ್ ನಡೀತಿದ್ದು, ಇದ್ರಲ್ಲಿ ಸಿಎಂ ಬಿಎಸ್​ವೈ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಗವಹಿಸಲಿದ್ದಾರೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರದ ಗದ್ದುಗೆ ಏರಿ ಒಂದು ವರ್ಷ ಆಗಿದೆ. 2ನೇ ಬಾರಿ ಗೆದ್ದು ಬೀಗಿದ್ದ ಕೇಸರಿ ಪಡೆ ಒಂದು ವರ್ಷದ ತಮ್ಮ ಸಾಧನೆಗಳನ್ನ ಪ್ರಚಾರ ಮಾಡೋದ್ರಲ್ಲಿ ಬ್ಯುಸಿ ಆಗಿದೆ. ಸಮರ್ಥ ನಾಯಕತ್ವ, ಸ್ವಾವಲಂಬಿ ಭಾರತ ಅಭಿಯಾನದ ಬಗ್ಗೆ ಜೆ.ಪಿ ನಡ್ಡಾ ಇಂದು ಭಾಷಣ ಮಾಡಲಿದ್ದಾರೆ. ಕೊರೊನಾ ಹಾವಳಿಯಲ್ಲಿ ನೇರವಾಗಿ ಸಭೆ ನಡೆಸೋಕೆ ಸಾಧ್ಯವಿಲ್ಲದ ಕಾರಣ ಬಿಜೆಪಿ ವರ್ಚುಯಲ್ ಱಲಿಗಳ ಮೊರೆ ಹೋಗಿದೆ.

ರಾಜ್ಯದಲ್ಲಿಯೂ ಬಿಜೆಪಿ ವರ್ಚುಯಲ್ ಕಾನ್ಫರೆನ್ಸ್..!
ಹೌದು, ಇಂದು ರಾಜ್ಯದಲ್ಲಿ ಬಿಜೆಪಿ ಕರ್ನಾಟಕ ಜನಸಂವಾದ ರ‍್ಯಾಲಿ ಹಮ್ಮಿಕೊಂಡಿದೆ. ಇಂದು ಸಂಜೆ 6 ಗಂಟೆಗೆ ಜನಸಂವಾದ ರ‍್ಯಾಲಿ ನಡೀತಿದೆ. ಱಲಿಯಲ್ಲಿ ಸಿಎಂ ಬಿಎಸ್​ವೈ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗವಹಿಸ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 600 ಸಾಮಾಜಿಕ ಜಾಲತಾಣ ಱಲಿಗಳನ್ನ ನಿಗದಿಪಡಿಸಲಾಗಿದೆ. ಈ ಪೈಕಿ ಇಂದು ನಡೆಯಲಿರೋ ಱಲಿಯೇ ಅತಿದೊಡ್ಡ ರ‍್ಯಾಲಿಯಾಗಿದ್ದು, ಒಂದು ಕೋಟಿ ಜನ್ರನ್ನ ತಲುಪುವ ಗುರಿಯಿದೆ.

ವರ್ಚುಯಲ್ ಕಾನ್ಫರೆನ್ಸ್ ಮುಖ್ಯ ಉದ್ದೇಶ ಏನು ಅಂದ್ರೆ..
ಚೀನಾ ವಿರುದ್ಧ ಆರ್ಥಿಕ ಸಮರ..! ಚೀನಾ ಉತ್ಪನ್ನಗಳನ್ನ ಬಹಿಷ್ಕರಿಸಿ ಆರ್ಥಿಕ ಸಮರದಲ್ಲಿ ಗೆಲ್ಲುವ ಗುರಿ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಬೆಂಬಲಿಸೋದು. ಸಣ್ಣ ಕೈಗಾರಿಕಗಳ ಉತ್ಪನ್ನಗಳನ್ನ ಖರೀದಿಸಿ ಆರ್ಥಿಕತೆ ಬಲಪಡಿಸುವುದು. ಇಂದು ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ಚೀನಾವನ್ನ ಸೋಲಿಸಿ ಭಾರತವನ್ನ ಗೆಲ್ಲಿಸೋಣ ಅಭಿಯಾನ ನಡೆಯಲಿದೆ.

50 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ
ಚೀನಾ ಉತ್ಪನ್ನಗಳನ್ನ ಬಹಿಷ್ಕರಿಸಿ ಆರ್ಥಿಕ ಸಮರದಲ್ಲಿ ಗೆಲ್ಲೋದೇ ಭಾರತದ ಮುಖ್ಯ ಉದ್ದೇಶವಾಗಿದೆ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಬೆಂಬಲಿಸೋದು. ಸಣ್ಣ ಕೈಗಾರಿಕಗಳ ಉತ್ಪನ್ನಗಳನ್ನ ಖರೀದಿಸಿ ಆರ್ಥಿಕತೆ ಬಲಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ರಾಜ್ಯದ 58 ಸಾವಿರ ಬೂತ್​ಗಳಲ್ಲಿ ಬಿಜೆಪಿ ಕಾರ್ಯಕರ್ತರು ಅಭಿಯಾನದ ಪ್ರತಿಜ್ಞಾ ಸಂಕಲ್ಪ ಮಾಡಲಿದ್ದಾರೆ. ಈ ವೇಳೆ 50 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸೋ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಇನ್ನು ಕರ್ನಾಟಕ ಜನಸಂವಾದ ವರ್ಚುಯಲ್ ಱಲಿಯಲ್ಲಿ ಸಿಎಂ ಬಿಎಸ್​ವೈ ಹಾಗೂ ನಳಿನ್ ಕುಮಾರ್ ಕಟೀಲು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಆರ್ಥಿಕತೆ ಚೇತರಿಕೆಗಾಗಿ ಏನೇನ್ ಮಾಡ್ಬೇಕು, ಕೊರೊನಾ ವೈರಸ್ ಹರಡಿದ ಚೀನಾಗೆ ಹೇಗೆ ಪಾಠ ಕಲಿಸಬೇಕು ಅನ್ನೋದ್ರ ಬಗ್ಗೆ ಮಾಹಿತಿ ನೀಡಲಿದ್ದಾರೆ.

Published On - 9:52 am, Sun, 14 June 20