ಮೈಸೂರು: ಅರಮನೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ (PM Narendra Modi)ಯವರು ಬಾಣಸಿಗರ ಕೈ ರುಚಿ ಸವಿದು ಸಖತ್ ಫಿದಾ ಆಗಿದ್ದಾರೆ. ನಿರಂತರ ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿಯವರಿಗೆ, ಎರಡನೇ ದಿನ ಹಾಗೂ ಕರ್ನಾಟಕ ಪ್ರವಾಸವಾದ ಕೊನೆಯ ದಿನವಾದ ಇಂದು ಮೈಸೂರು ಅರಮನೆ (Mysore Palace)ಯಲ್ಲಿ ವಿಶೇಷ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಉಪಹಾರದ ರುಚಿಗೆ ಮನಸೋತ ಮೋದಿ, ಬಳಿಕ ಬಾಣಸಿಗರಿಗೆ ಧನ್ಯವಾದ ತಿಳಿಸಲು ಖುದ್ದು ಅವರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಬಾಣಿಸಿಗರು ಪ್ರಧಾನಿ ಜೊತೆ ಫೋಟೋ ತೆಗೆಸಿಕೊಳ್ಳಲು ಮನವಿ ಮಾಡಿದಾಗ ಮೋದಿಯವರು ಬಾಣಸಿಗರೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಇದನ್ನೂ ಓದಿ: PM Modi In Mysuru: ಒಡೆಯರ್ಗಳ ಅರಮನೆಯಲ್ಲಿ ಪ್ರಧಾನಿ ಮೋದಿ ಮೈಸೂರು ಪಾಕ್ ಸವಿದರೋ ಇಲ್ಲವೋ ಗೊತ್ತಾಗಲಿಲ್ಲ!
ಬಾಣಸಿಗರೊಂದಿಗೆ ಪ್ರಧಾನಿ ಮೋದಿವಿಶ್ವ ಯೋಗದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಅರಮನೆ ಮೈದಾನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪೂರ್ವ ನಿಗದಿತ 6.30ರ ಒಳಗೆ ಮೋದಿ ಮೈಸೂರು ಅರಮನೆಗೆ ಬಂದ ಮೋದಿ ಅವರನ್ನು ರಾಜಮಾತೆ ಪ್ರಮೋದ ದೇವಿ ಸ್ವಾಗತಿಸಿದರು. 6.30ರಿಂದ 7.45ರ ವರೆಗೂ ಯೋಗಭ್ಯಾಸ ನಡೆಸಿದ ಮೋದಿ ಅವರು, 45 ನಿಮಿಷಗಳಲ್ಲಿ 15,000 ಮಂದಿಯೊಂದಿಗೆ 19 ಆಸನಗಳನ್ನು ಮಾಡಿದರು.
ಇದನ್ನೂ ಓದಿ: Political Analysis: ಮೋದಿ ಭೇಟಿಯ ರಾಜಕೀಯ ಲೆಕ್ಕಾಚಾರ; ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಲಾಭದ ನಿರೀಕ್ಷೆ
ಪ್ರಧಾನಿಯವರು ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಜೂನ್ 20 ರಂದು ಬೆಂಗಳೂರಿಗೆ ಆಗಮಿಸಿ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜೂನ್ 21ರಂದು ಮೈಸೂರು ಅರಮನೆ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನದಲ್ಲಿ(International Yoga Day 2022)ಭಾಗಿಯಾಗಿ ದೆಹಲಿಗೆ ತೆರಳಿದ್ದಾರೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ