ತುಮಕೂರು, ಮಾರ್ಚ್ 11: ಪೋಕ್ಸೋ ಕೇಸ್ (POCSO Act) ನಲ್ಲಿ ಬಾಲಮಂಜುನಾಥ ಸ್ವಾಮೀಜಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಮಂಜುನಾಥಶ್ರೀ (Bala Manjunatha Swamiji) ಅವರದ್ದು ಎನ್ನಲಾದ ಬಾಲಕಿ ಜತೆ 37 ಸೆಕೆಂಡ್ ವಿಡಿಯೋ ಕಾಲ್ನಲ್ಲಿ ಮಾತನಾಡಿದ ಬೆತ್ತಲೆ ವಿಡಿಯೋ ವೈರಲ್ ಆಗಿದೆ. ವಿಡಿಯೋ ಕಾಲ್ನಲ್ಲಿ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠದ ಬಾಲಮಂಜುನಾಥ ಸ್ವಾಮೀಜಿ ಮಾತನಾಡಿದ್ದಾರೆ. ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಸದ್ಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ನಡೆಸಲಾಗುತ್ತಿದೆ. ಬಾಲಮಂಜುನಾಥ್ ಸ್ವಾಮೀಜಿ ಹಾಗೂ ಸ್ವಾಮೀಜಿಯ ಆಪ್ತ ಸಹಾಯಕ ಸೇರ ಮೂವರನ್ನ ಈಗಾಗಲೇ ಬಂಧಿಸಲಾಗಿದೆ.
ಬಾಲ ಮಂಜುನಾಥ ಸ್ವಾಮೀಜಿಗೆ ದೇಹದ ಖಾಸಗಿ ಜಾಗದಲ್ಲಿ ಚರ್ಮದ ಸೋಂಕು ಉಂಟಾಗಿತ್ತು. ಈ ವಿಚಾರವನ್ನ ತಮ್ಮ ಆಪ್ತ ಸೇವಕ ಅಭಿಷೇಕ್ ಬಳಿ ಸ್ವಾಮೀಜಿ ಹೇಳಿಕೊಂಡಿದ್ದರು. ಬಳಿಕ ಅಭಿಷೇಕ್ ಸೂಚಿಸಿದ ಮಹಿಳಾ ವೈದ್ಯರ ಬಳಿ ಸ್ವಾಮೀಜಿ ತಮ್ಮ ಖಾಸಗಿ ಭಾಗವನ್ನು ನೇರವಾಗಿ ತೋರಿಸಲು ಮುಜುಗರ ಪಟ್ಟುಕೊಂಡಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಅಭಿಷೇಕ್ ವೈದ್ಯರೊಂದಿಗೆ ವಿಡಿಯೋ ಕಾಲ್ ಮೂಲಕ ಸ್ವಾಮೀಜಿಯ ಖಾಸಗಿ ಜಾಗವನ್ನು ತೋರಿಸಿದ್ದನು.
ಇದನ್ನೂ ಓದಿ: ಬಾಲಕಿಗೆ ಲೈಂಗಿಕ ಕಿರುಕುಳ: ಪೋಕ್ಸೊ ಕೇಸ್ನಡಿ ಕುಣಿಗಲ್ ವಿದ್ಯಾಚೌಡೇಶ್ವರಿ ಮಠದ ಪೀಠಾಧ್ಯಕ್ಷ, ಆಪ್ತ ಸಹಾಯಕ ಅರೆಸ್ಟ್
ಬಳಿಕ ಈ ವಿಡಿಯೋ ಕಾಲ್‌ನ ಸ್ಟ್ರೀನ್ ರೆಕಾರ್ಡ್ ಮಾಡಿಕೊಂಡು ಸ್ವಾಮೀಜಿಯನ್ನು ಬ್ಲಾಕ್ ಮೇಲ್ ಮಾಡಲಾರಂಭಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲಾಕ್ ಮೇಲ್ ಮಾಡುತ್ತಿದ್ದ 6 ಮಂದಿ ವಿರುದ್ದ ಮಾರ್ಚ್ 6 ರಂದು ಸ್ವಾಮೀಜಿಯು, ದೇವಸ್ಥಾನದ ಟ್ರಸ್ಟಿ ಅಭಿಲಾಷ್ ಮೂಲಕ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇತ್ತ ಸ್ವಾಮೀಜಿಯ ದೂರು ಸ್ವೀಕರಿಸುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬ್ಲಾಕ್ ಮೇಲ್ ಮಾಡುತ್ತಿದ್ದವರ ವಿಚಾರಣೆ ಆರಂಭಿಸಿದ್ದಾರೆ. ಪ್ರಮುಖ ಆರೋಪಿ, ಸ್ವಾಮೀಜಿಯ ಆಪ್ತಸೇವಕನಾಗಿದ್ದ ಅಭಿಷೇಕ್ನನ್ನು ವಿಚಾರಣೆಗಾಗಿ ಗುರುವಾರ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಠಾಣೆಗೆ ಬಂದ ಅಭಿಷೇಕ್, ಸ್ವಾಮೀಜಿ ಕೆಲ ದಿನಗಳ ಹಿಂದೆ ಮಠಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ: ಮುರುಘಾಶ್ರೀ ಆಡಳಿತಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ; ಸಮಿತಿ ರಚನೆಗೆ ಸೂಚನೆ
ಈ ಮಾಹಿತಿಯನ್ನ ಆಧರಿಸಿದ ಪೊಲೀಸರು, ಎಸ್ಪಿ ಅಶೋಕ್ ಅವರ ನೇತೃತ್ವದಲ್ಲಿ ನಿನ್ನೆ ರಾತ್ರಿ ಮಠದಲ್ಲಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಸಿಕ್ಕ ಕೆಲ ಸಾಕ್ಷಿಗಳನ್ನ ಕಲೆಹಾಕಿದ ಬಳಿಕ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲಮಂಜುನಾಥ ಸ್ವಾಮೀಜಿ ಹಾಗೂ ದೇವಾಲಯದ ಟ್ರಸ್ಟಿ ಅಭಿಲಾಷ್ ಇಬ್ಬರನ್ನೂ ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.