ಬಳ್ಳಾರಿ: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದ ಕಾರಣ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾಗಿದೆ. ಹೀಗಾಗಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಿ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿದೆ. ಹೋಟೆಲ್ಗಳಲ್ಲಿ ಪಾರ್ಸಲ್ಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಬಳ್ಳಾರಿಯಲ್ಲಿ ಹೋಟೆಲ್ ಓಪನ್ ಮಾಡಿದ್ದಕ್ಕಾಗಿ ಪೊಲೀಸರು ಸಿಲಿಂಡರ್ನ ಹೊತ್ತುಕೊಂಡು ಹೋಗಿದ್ದಾರೆ. ಬೀದಿ ಬದಿ ವ್ಯಾಪಾರಿ ಬೇಡಿಕೊಂಡರು ಯಾರ ಮಾತು ಕೇಳದೆ ಪೊಲೀಸರು ಸಿಲಿಂಡರ್ನ ಹೊತ್ತುಕೊಂಡು ಹೋಗಿದ್ದಾರೆ.
ಹೊಸಪೇಟೆಯ ವಾಲ್ಮೀಕಿ ರಸ್ತೆ ಬಳಿ ರೋಡ್ ಸೈಡ್ ಹೋಟೆಲ್ ತೆರೆದಿತ್ತು. ಫುಡ್ ಇನ್ಸ್ಪೆಕ್ಟರ್ ಬಂದು ಪಾರ್ಸಲ್ ಮಾತ್ರ ಅಂತ ಹೇಳಿ ಹೋಗಿದ್ದರು. ಆದರೆ ಪೊಲೀಸರು ಹೋಟೆಲ್ ಓಪನ್ ಮಾಡಲು ನಿಮಗೆ ಅನುಮತಿ ಕೊಟ್ಟಿದ್ದು ಯಾರು ಎಂದು ಕೇಳಿದ್ದಾರೆ. ಹೋಟೆಲ್ ಓಪನ್ ಮಾಡಲು ಅವಕಾಶ ಇದೆ. ನಾವು ಪಾರ್ಸಲ್ ಮಾತ್ರ ಕೊಡುತ್ತಿದ್ದೆವು. ಯಾರಿಗೂ ತಿನ್ನಲು ಇಲ್ಲಿ ಕೊಟ್ಟಿಲ್ಲ. ಆದರೆ ಪೊಲೀಸರು ಹೇಳಿಲ್ಲ ಕೇಳಿಲ್ಲ ನಮ್ಮ ಸಿಲಿಂಡರ್ನ ತೆಗೆದುಕೊಂಡು ಹೋದರು. ಎಲ್ಲರಿಗೂ ಅವಕಾಶ ಇದೆ. ನಮಗೆ ಮಾತ್ರ ಯಾಕಿಲ್ಲ ಎಂದು ಬೀದಿ ಬದಿ ವ್ಯಾಪಾರಿ ಬೇಸರ ವ್ಯಕ್ತಪಡಿಸಿದ್ದಾರೆ.
ನೂರಾರು ರೈತರ ಕ್ಯೂ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಬೀಜ, ರಸಗೊಬ್ಬರಕ್ಕಾಗಿ ನೂರಾರು ರೈತರು ಕಾಯುತ್ತಿದ್ದಾರೆ. ಬೆಳಿಗ್ಗೆ 5 ಗಂಟೆಗೆ ರೈತರು ಅಂಗಡಿಗಳ ಮುಂದೆ ಜಮಾಯಿಸಿದ್ದಾರೆ. ರೈತರು ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದು, ಬೇಗ ಅಂಗಡಿಗಳು ತೆರೆಯದಿದ್ದಕ್ಕೆ ರೈತರು ಆಕ್ರೋಶ ಹೊರಹಾಕಿದ್ದರು.
ಇವತ್ತು ಬೆಳಿಗ್ಗೆ 12 ರಿಂದ ಮೇ 21 ರವರೆಗೆ ಬಳ್ಳಾರಿ ಸಂಪೂರ್ಣ ಲಾಕ್ಡೌನ್ ಆಗಲಿದೆ. ಅಗತ್ಯ ವಸ್ತುಗಳ ಖರೀದಿಗೆ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ, ಬೆಂಗಳೂರು ರಸ್ತೆಯ ಮಾರ್ಕೆಟ್ನಲ್ಲಿ ಜನಜಾತ್ರೆಯೇ ಸೇರಿದೆ. ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಜನರು ವ್ಯಾಪಾರದಲ್ಲಿ ಮುಗಿಬಿದ್ದಿದ್ದಾರೆ.
ಇದನ್ನೂ ಓದಿ
ಲಾಕ್ಡೌನ್ ಎಫೆಕ್ಟ್: ಟೋಮ್ಯಾಟೋ, ಬದನೆ, ಎಲೆಕೋಸು ಮಾರಾಟ ಮಾಡಲಾಗದೆ ಹಸುಗಳಿಗೆ ತಿನ್ನಿಸುತ್ತಿರುವ ರೈತಾಪಿ ವರ್ಗ
Coronavirus cases in India: ದೇಶದಲ್ಲಿ ಹೊಸ ಕೊವಿಡ್ ಪ್ರಕರಣ 2 ಲಕ್ಷಕ್ಕಿಂತ ಕಡಿಮೆ, 3511 ಮಂದಿ ಸಾವು
(police had seized the cylinder since hotel was open at bellary)