ರೌಡಿಶೀಟರ್ ಕಾರ್ತಿಕ್ ಅಲಿಯಾಸ್ ಗುಂಡನ ಮೇಲೆ ಪೊಲೀಸರಿಂದ ಫೈರಿಂಗ್..

|

Updated on: Jan 07, 2021 | 1:56 PM

ಕಾರ್ತಿಕ್ ಅಲಿಯಾಸ್ ಗುಂಡನ ಮೇಲೆ ಶ್ರೀರಾಂಪುರ ಠಾಣಾ ವ್ಯಾಪ್ತಿಯ ಓಕಳಿಪುರಂ ಬಳಿ ಗುಂಡಿನ ದಾಳಿ ನಡೆದಿದೆ.

ರೌಡಿಶೀಟರ್ ಕಾರ್ತಿಕ್ ಅಲಿಯಾಸ್ ಗುಂಡನ ಮೇಲೆ ಪೊಲೀಸರಿಂದ ಫೈರಿಂಗ್..
ಗಾಯಗೊಂಡಿರುವ ರೌಡಿಶೀಟರ್ ಕಾರ್ತಿಕ್ ಅಲಿಯಾಸ್ ಗುಂಡ
Follow us on

ಬೆಂಗಳೂರು: ಬೆಳ್ಳಂ ಬೆಳಗ್ಗೆ ಬೆಂಗಳೂರಿನಲ್ಲಿ ಪೊಲೀಸರ ಗನ್ ಸದ್ದು ಮಾಡಿದೆ. ರೌಡಿಶೀಟರ್ ಮೇಲೆ ನಂದಿನ ಲೇಔಟ್ ಠಾಣೆ ಪೊಲೀಸರಿಂದ ಫೈರಿಂಗ್ ನಡೆದಿದೆ. ಕಾರ್ತಿಕ್ ಅಲಿಯಾಸ್ ಗುಂಡನ ಮೇಲೆ ಶ್ರೀರಾಂಪುರ ಠಾಣಾ ವ್ಯಾಪ್ತಿಯ ಓಕಳಿಪುರಂ ಬಳಿ ಗುಂಡಿನ ದಾಳಿ ನಡೆದಿದೆ.

ಕಾರ್ತಿಕ್ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್. ಆತ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಿದ್ದವ. ರೌಡಿಶೀಟರ್ ಬಂಧಿಸಲು ಸಬ್ ಇನ್ಸ್‌ಪೆಕ್ಟರ್ ನಿತ್ಯಾನಂದ & ಟೀಂ ತೆರಳಿತ್ತು.

ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ರೌಡಿಶೀಟರ್ ಪ್ರಯತ್ನಿಸಿದ್ದ ಆತ್ಮರಕ್ಷಣೆಗಾಗಿ ಬಲಗಾಲಿಗೆ ಗುಂಡು ಹಾರಿಸಿ ಪೊಲೀಸರು ಕಾರ್ತಿಕ್​ನನ್ನ ಬಂಧಿಸಿದ್ದಾರೆ. ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಜೈಲಿಗೆ ಹೋಗಿ ಬಂದರೂ ಬಿಡಲಿಲ್ಲ ಹಳೆ ಚಾಳಿ
ಕಳೆದ ಇಪ್ಪತ್ತು ದಿನಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ ಆರೋಪಿ ಕಾರ್ತಿಕ್ ಕಳೆದ ಜನವರಿ 3ರಂದು ರಾತ್ರಿ ಒಂದೇ ದಿನ ಮೂರು ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ನಡೆಸಿ ದರೋಡೆ ಮಾಡಿದ್ದ. RMC ಯಾರ್ಡ್, ನಂದಿನಿ ಲೇಔಟ್, ಕಾಟನ್ ಪೇಟೆ ವ್ಯಾಪ್ತಿಯಲ್ಲಿ ಮೊಬೈಲ್, ಹಣ, ಚಿನ್ನ ರಾಬರಿ ಮಾಡಿದ್ದ. ಇದೇ ಕೇಸ್​ನಲ್ಲಿ ಬಂಧಿಸಲು ಹೋದಾಗ ಫೈರಿಂಗ್ ನಡೆದಿದೆ.

ಕಾರ್ತಿಕ್ ತನ್ನ ಸಹಚರ ಭದ್ರಿ ಜೊತೆ ಸೇರಿ ದರೋಡೆ ನಡೆಸಿದ್ದ. ಆರೋಪಿ ಭದ್ರಿಯನ್ನು ಪೊಲೀಸರು ಬಂಧಿಸಿದ ಬಳಿಕ ಕಾರ್ತಿಕ್ ಮಾಹಿತಿ ಕಲೆ ಹಾಕಿದ್ದರು. RMC ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಬಳಿ ಡಿಯೋ ಬೈಕ್ ಕಿತ್ತುಕೊಂಡಿದ್ದ.

ಸಾರ್ವಜನಿಕರ ಎದುರಲ್ಲೆ ಬೈಕ್ ಕಿತ್ತುಕೊಂಡು ದರೋಡೆ ಕೃತ್ಯ ಎಸಗಿದ್ದ. ಕಳೆದೆರಡು ವರ್ಷಗಳಿಂದ ಇವರಿಬ್ಬರೂ ಜೈಲಿನಲ್ಲಿದ್ದರು. ನಾಲ್ಕು ತಿಂಗಳ ಹಿಂದೆ ಭದ್ರಿ ರಿಲೀಸ್ ಆಗಿದ್ದ ಹಾಗೂ ಇಪ್ಪತ್ತು ದಿನಗಳ ಹಿಂದೆ ಕಾರ್ತಿಕ್ ರಿಲೀಸ್ ಆಗಿದ್ದು ಈಗ ಮತ್ತೆ ಪೊಲೀಸರ ಕೈಗೆ ಸಿಕ್ಕಿದ್ದಾರೆ. ಆರೋಪಿ ಕಾರ್ತಿಕ್ ಅಲಿಯಾಸ್ ಗುಂಡನ ಮೇಲೆ ಒಟ್ಟು 11ಪ್ರಕರಣಗಳು ದಾಖಲಾಗಿವೆ.

ಸಬ್ ಇನ್ಸ್‌ಪೆಕ್ಟರ್ ನಿತ್ಯಾನಂದ

ಖಾಕಿ ಪಡೆ ಭರ್ಜರಿ ಬೇಟೆ: ಫೈರಿಂಗ್ ಮಾಡಿ 4 ಕೊಲೆ ಆರೋಪಿಗಳ ಅರೆಸ್ಟ್​

Published On - 8:04 am, Thu, 7 January 21