ಬೆಂಗಳೂರಿನ ವಿವಿಧೆಡೆ ಪೊಲೀಸರ ಕಾರ್ಯಾಚರಣೆ; ಬಂಧಿತರಿಂದ ಚಿನ್ನ, ಮಾದಕ ವಸ್ತು ವಶ

| Updated By: Praveen Sahu

Updated on: Mar 23, 2021 | 12:46 PM

ಕಳ್ಳತನವಾದ 48 ಗಂಟೆಯಲ್ಲೇ ಖಚಿತ ಮಾಹಿತಿ ಆಧರಿಸಿ ಮೆಜೆಸ್ಟಿಕ್‌ನಲ್ಲಿ ಕುಖ್ಯಾತ ನೇಪಾಳಿ ಗ್ಯಾಂಗ್‌ನ ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ವಿವಿಧೆಡೆ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಈ ಮೂವರು ಕಳ್ಳತನ ಬಳಿಕ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾರೆ.

ಬೆಂಗಳೂರಿನ ವಿವಿಧೆಡೆ ಪೊಲೀಸರ ಕಾರ್ಯಾಚರಣೆ; ಬಂಧಿತರಿಂದ ಚಿನ್ನ, ಮಾದಕ ವಸ್ತು ವಶ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತಿದ್ದ ಕುಖ್ಯಾತ ನೇಪಾಳಿ ಗುಂಪೊಂದನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಶಾಹಿ, ಉದಯಕುಮಾರ್, ರೋಷನ್ ಬಿಷ್ಠಾ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 13 ಲಕ್ಷ ಮೌಲ್ಯದ 325 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬರುವ ಮನೆಯಲ್ಲಿ ಈ ಗುಂಪು ಕಳ್ಳತನ ಮಾಡಿದ್ದು, ಕಳ್ಳತನವಾದ 48 ಗಂಟೆಯಲ್ಲೇ ಖಚಿತ ಮಾಹಿತಿ ಆಧರಿಸಿ ಮೆಜೆಸ್ಟಿಕ್‌ನಲ್ಲಿ ಕುಖ್ಯಾತ ನೇಪಾಳಿ ಗ್ಯಾಂಗ್‌ನ ಮೂವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ವಿವಿಧೆಡೆ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಈ ಮೂವರು ಕಳ್ಳತನ ಬಳಿಕ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದು, ಸದ್ಯ ಪೊಲೀಸರ ವಶದಲ್ಲಿದ್ದಾರೆ.

ಸಂಪಿಗೆಹಳ್ಳಿ ಪೊಲೀಸರಿಂದ ಆಂಧ್ರ ಗ್ಯಾಂಗ್ ಅರೆಸ್ಟ್:
ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಚೆಲ್ಲಾ ಪ್ರಭುದಾಸ್ ಎಂಬ ಗುಂಪನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದು, ಆಂಧ್ರ ಮೂಲದ ಈ ಬಂಧಿತ ಗುಂಪಿನಿಂದ ಬರೋಬ್ಬರಿ 24 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 48 ಗಂಟೆಗಳಲ್ಲಿ 400 ಕಿ.ಮೀ. ವರೆಗೆ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದು, ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ
ಸಂಪಿಗೆಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳ 19ರಂದು ಸಂಪಿಗೆಹಳ್ಳಿಯ ಬಳಿ ಹೋಲ್ ಸೇಲ್ ಚಿನ್ನದ ಅಂಗಡಿಗಳಿಂದ ಚಿನ್ನ ತಂದು ಮಾರಟ ಮಾಡುತಿದ್ದ ಶಿವರಾಂ ಶೌಚಾಲಯಕ್ಕೆ ಹೊದಾಗ ಬೈಕ್ ಡಿಕ್ಕಿ ಹೊಡೆದು ಬರೊಬ್ಬರಿ 1200ಗ್ರಾಂ ಚಿನ್ನವನ್ನು ಕಳ್ಳತನ ಮಾಡಿದ್ದಾರೆ. ಬಳಿಕ ಚಿನ್ನದ ಸಮೇತ ಆಂಧ್ರದ ನೆಲ್ಲೂರಿಗೆ ತೆರಳಿದ್ದು, ಸಿಸಿ ಟಿವಿ ದೃಶ್ಯ ಪರಿಶೀಲಿಸಿ ಸಿಕ್ಕ ಮಾಹಿತಿ ಆಧರಿಸಿ ಚೆಲ್ಲಾ ಪ್ರಭುದಾಸ್​ನನ್ನು ಬಂಧಿಸಲಾಗಿದೆ.

ಸರಗಳ್ಳರ ಬಂಧನ:
ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರ ಕಾರ್ಯಾಚರಣೆ ವೇಳೆ ಸರಗಳವು ಮತ್ತು ಮನೆಗಳಲ್ಲಿ ಕಳ್ಳತನ ಸೇರಿದಂತೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ ಸುಮಾರು 50 ಲಕ್ಷ ಮೌಲ್ಯದ ಚಿನ್ನಾಭರಣ, 10 ಲಕ್ಷ ಮೌಲ್ಯದ ಗಾಂಜಾ ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾದಕ ವಸ್ತು ಮಾರಟದಲ್ಲಿ ಭಾಗಿಯಾಗಿದ್ದ ಆಫ್ರಿಕನ್ ಪ್ರಜೆಗಳ ಬಂಧನ:
ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರ ಕಾರ್ಯಾಚರಣೆ ವೇಳೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆಫ್ರಿಕನ್ ಪ್ರಜೆಗಳು ಸೇರಿದಂತೆ ಒಟ್ಟು 7 ಜನರು ಸಿಕ್ಕಿ ಹಾಕಿಕೊಂಡಿದ್ದಾರೆ. ಇಡೋಚಿ ಜೇಮ್ಸ್, ಅಗುಂಟಾ ಡಾನಿಯಲ್ ಸೇರಿ 7 ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ 7.5 ಲಕ್ಷ ರೂಪಾಯಿ ಮೌಲ್ಯದ 40 ಕೆಜಿ ಗಾಂಜಾ, 2.5 ಲಕ್ಷ ಮೌಲ್ಯದ ಮೆಥಾಕೋಲಿನ್ ಮತ್ತು ಕೊಕೇನ್ ವಶಪಡಿಸಿಕೊಂಡಿದ್ದಾರೆ

ರಾಜ್ಯ ರೈಲ್ವೆ ಪೊಲೀಸರಿಂದ 10ಕ್ಕೂ ಹೆಚ್ಚು ಆರೋಪಿಗಳ ಸೆರೆ:
ರೈಲು ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ10ಕ್ಕೂ ಹೆಚ್ಚು ಆರೋಪಿಗಳನ್ನು ಕರ್ನಾಟಕ ರೈಲ್ವೆ ಪೊಲೀಸರು ಬಂದಿಸಿದ್ದು, ಬಂಧಿತ ಆರೋಪಿಗಳಿಂದ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ಗೋವಿಂದಪುರ ಪೊಲೀಸರಿಂದ ಜೇಮ್ಸ್ ಕೆಲ್ವಿನ್ ಬಂಧನ:
ಜಾನ್ ಪೆಡ್ಲರ್ ಜೊತೆಗಿದ್ದ ಮತ್ತೊಬ್ಬ ಡ್ರಗ್ ಪೆಡ್ಲರ್, ಜೇಮ್ಸ್ ಕೆಲ್ವಿನ್​ನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 9 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ತೂಕದ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಮನೆಯಲ್ಲಿಟ್ಟುಕೊಂಡೇ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದ ಜೇಮ್ಸ್ ಕೆಲ್ವಿನ್​ ಉದ್ಯಮಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್​ ಮಾರಾಟ ಮಾಡುತ್ತಿದ್ದ. ಅನುಮಾನ ಬಾರದಂತೆ ಟಾಯ್ಲೆಟ್​ನಲ್ಲಿ ಡ್ರಗ್ಸ್​ ಬಿಸಾಡುತ್ತಿದ್ದ ಈತನ ಮನೆಯಲ್ಲಿ ಪೊಲೀಸರ ದಾಳಿ ವೇಳೆ ಲಾಂಗ್ ಕೂಡ ಪತ್ತೆಯಾಗಿದೆ. ಈ ಹಿಂದೆ ಬಂಧಿಸಲ್ಪಟ್ಟ ಜಾನ್ ಪೆಡ್ಲರ್ ಸ್ಯಾಂಡಲ್ ವುಡ್ ಮಂದಿಯ ಜೊತೆ ಸಂಪರ್ಕ ಹೊಂದಿದ್ದ, ಹೀಗಾಗಿ ಸ್ಯಾಂಡಲ್​ವುಡ್ ಡ್ರಗ್ಸ್​ ಕೇಸ್ ಸಂಬಂಧವೂ ಇರುವ ಬಗ್ಗೆ ವಿಚಾರಣೆ ಜೇಮ್ಸ್ ಕೆಲ್ವಿನನ್ನು ನಡೆಸಲಾಗುತ್ತಿದೆ.

ಶಿವಮೊಗ್ಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ:
ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ಸಲ್ಮಾನ್(22) ಗಾಂಜಾ ಮಾರಾಟ ಮಾಡುತ್ತಿದ್ದ. ಬಂಧಿತನಿಂದ 145 ಗ್ರಾಂ ತೂಕದ ಗಾಂಜಾ ಮತ್ತು ಈ ಕೃತ್ಯಕ್ಕೆ ಬಳಸಿದ ಒಂದು ಕಾರು ಜಪ್ತಿ ಮಾಡಲಾಗಿದೆ. ಸಾಗರ ನಗರ ಪೊಲೀಸರ ಕಾರ್ಯಾಚರಣೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.

ಸಲ್ಮಾನ್(22) ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ

ಇದನ್ನೂ ಓದಿ:

ಹಾಲು ಕದಿಯುವ ಬೆಕ್ಕಿಗೆ ಕಳ್ಳರ ಭಯ: ಗದಗ ಜಿಲ್ಲೆಯ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಕಳ್ಳತನದ ದೃಶ್ಯ

Published On - 3:54 pm, Sat, 20 March 21