ಬೆಣ್ಣೆನಗರಿಯಲ್ಲಿ ಭರ್ಜರಿ ಬೇಟೆ: ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ 47 ಲಕ್ಷ ನಗದು ಜಪ್ತಿ

|

Updated on: Feb 05, 2021 | 10:45 PM

ಕಾರಿನಲ್ಲಿ 1 ಕೋಟಿ 47 ಲಕ್ಷ ನಗದನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಘಟನೆ ನಗರದ ಅರಳಿಮರ ಸರ್ಕಲ್ ಬಳಿ ವರದಿಯಾಗಿದೆ. ದಾಖಲೆ ಇಲ್ಲದ ಹಣವನ್ನು ಸಂಚಾರಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಬೆಣ್ಣೆನಗರಿಯಲ್ಲಿ ಭರ್ಜರಿ ಬೇಟೆ: ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ 47 ಲಕ್ಷ ನಗದು ಜಪ್ತಿ
ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ 47 ಲಕ್ಷ ನಗದು ಜಪ್ತಿ
Follow us on

ದಾವಣಗೆರೆ: ಕಾರಿನಲ್ಲಿ 1 ಕೋಟಿ 47 ಲಕ್ಷ ನಗದನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಘಟನೆ ನಗರದ ಅರಳಿಮರ ಸರ್ಕಲ್ ಬಳಿ ವರದಿಯಾಗಿದೆ. ದಾಖಲೆ ಇಲ್ಲದ ಹಣವನ್ನು ಸಂಚಾರಿ ಪೊಲೀಸರು ಜಪ್ತಿ ಮಾಡಿದ್ದಾರೆ.

KA 39P 8055 ನೋಂದಣಿ ಸಂಖ್ಯೆಯ ಸ್ವಿಫ್ಟ್​​ ಕಾರಿನಲ್ಲಿ ನಗದನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಕಾರಿನಲ್ಲಿ ಹಣವನ್ನು ಕಲಬುರಗಿಯಿಂದ ದಾವಣಗೆರೆ ಕಡೆ ಸಾಗಿಸಲಾಗ್ತಿತ್ತು.

ಈ ವೇಳೆ, ವಾಹನವನ್ನು ಅಡ್ಡಗಟ್ಟಿದ ಪೊಲೀಸರು, ಹಣದ ಬಗ್ಗೆ ದಾಖಲೆ ಕೇಳಿದಾಗ ಮಾಹಿತಿ ನೀಡದ ಹಿನ್ನೆಲೆಯಲ್ಲಿ
ಕಲಬುರಗಿ ಮೂಲದ ಮೂವರನ್ನ ವಶಕ್ಕೆ ಪಡೆದಿದ್ದಾರೆ. ಮಹೇಶ್, ಬೀರಲಿಂಗ ಹಾಗೂ ಶ್ರೀಕಾಂತ್ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ನಗರ DySP ನಾಗೇಶ್​​ ಐತಾಳ್​ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.

ಇಬ್ಬರು ನ್ಯಾಯಮೂರ್ತಿಗಳನ್ನು ಕೊಲ್ಲುವುದಾಗಿ.. ಪತ್ರ ಬರೆದ ವೃದ್ಧನಿಗೆ ಹೈಕೋರ್ಟ್ ನೋಟಿಸ್