ಇಬ್ಬರು ನ್ಯಾಯಮೂರ್ತಿಗಳನ್ನು ಕೊಲ್ಲುವುದಾಗಿ.. ಪತ್ರ ಬರೆದ ವೃದ್ಧನಿಗೆ ಹೈಕೋರ್ಟ್ ನೋಟಿಸ್
ಇಬ್ಬರು ನ್ಯಾಯಮೂರ್ತಿಗಳನ್ನು ಕೊಲ್ಲುವುದಾಗಿ ಜ.29ರಂದು ಪತ್ರ ಬರೆದ ವೃದ್ಧನಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಶ್ರೀನಿವಾಸ ರಾವ್ ಎಂಬುವವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅಡಿಯಲ್ಲಿ ಹೈಕೋರ್ಟ್ ನೋಟಿಸ್ ನೀಡಿದೆ.
ಬೆಂಗಳೂರು: ಇಬ್ಬರು ನ್ಯಾಯಮೂರ್ತಿಗಳನ್ನು ಕೊಲ್ಲುವುದಾಗಿ ಜ.29ರಂದು ಪತ್ರ ಬರೆದ ವೃದ್ಧನಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಶ್ರೀನಿವಾಸ ರಾವ್ ಎಂಬುವವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅಡಿಯಲ್ಲಿ ಹೈಕೋರ್ಟ್ ನೋಟಿಸ್ ನೀಡಿದೆ.
ಅಂದ ಹಾಗೆ, ಶ್ರೀನಿವಾಸ್ ರಾವ್ 2010ರಲ್ಲೂ ಇಂಥದ್ದೇ ಕೃತ್ಯ ಮಾಡಿದ್ದರು. ಜೊತೆಗೆ, ಕಳೆದ ವರ್ಷವೂ ನ್ಯಾಯಮೂರ್ತಿಗಳ ಮೇಲೆ ಇಂಥದ್ದೇ ಆರೋಪ ಮಾಡಿದ್ದರು. ಅಷ್ಟೇ ಅಲ್ಲ, ತಮ್ಮ ಪತ್ರದಲ್ಲಿ ಇಬ್ಬರು ವಕೀಲರನ್ನು ಸಹ ಕೊಲ್ಲುವುದಾಗಿಯೂ ಉಲ್ಲೇಖಿಸಿದ್ದಾರೆ. ಜೊತೆಗೆ, ವಕೀಲರು, ನ್ಯಾಯಾಧೀಶರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ.
ಹಾಗಾಗಿ, ನ್ಯಾಯಾಲಯದ ಮೇಲೆ ಆಧಾರರಹಿತ ಆರೋಪ ಹೊರಿಸಲಾಗಿದೆ. ಮೇಲ್ನೋಟಕ್ಕೆ ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗಿದೆ. ಹೀಗಾಗಿ, ಮಾ.1ರಂದು ಕಾನ್ಫರೆನ್ಸ್ ಮೂಲಕ ಹಾಜರಾಗಲು ವೃದ್ಧನಿಗೆ ಕೋರ್ಟ್ ಸೂಚನೆ ನೀಡಿದೆ. ಜೊತೆಗೆ, ಪತ್ರವನ್ನು ಮುಂದಿನ ಕ್ರಮಕ್ಕಾಗಿ ಪೊಲೀಸರಿಗೆ ಕಳುಹಿಸಲು ಸಿ.ಜೆ ಎ.ಎಸ್ ಒಕಾ ನೇತೃತ್ವದ ವಿಭಾಗೀಯ ಪೀಠ ಆದೇಶ ನೀಡಿದೆ.
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ: ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸಿಎಂ BSY ಸೂಚನೆ