AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sunset Point: ಕರುನಾಡಲೊಂದು ಮಿನಿ ಕನ್ಯಾಕುಮಾರಿ.. ಸೂರ್ಯಾಸ್ತ ನೋಡಿ ರೋಮಾಂಚನಗೊಳ್ಳಲು ಇಲ್ಲಿಗೆ ಬರಲೇ ಬೇಕು..

ಕಡಲ ತಡಿಯಲ್ಲಿ ನಿಂತು ಸೂರ್ಯ ಅಸ್ತಮಿಸುವುದನ್ನು ನೋಡುವುದೇ ಒಂದು ಸ್ವರ್ಗ. ಅದ್ರಲ್ಲೂ ಕನ್ಯಾಕುಮಾರಿಯ ಸೂರ್ಯಾಸ್ತದ ರಮಣೀಯ ದೃಶ್ಯಕ್ಕೆ ಎಂತಹವರು ಕೂಡ ತಲೆದೂಗಿಬಿಡ್ತಾರೆ. ಆದ್ರೆ ಕನ್ಯಾಕುಮಾರಿ ನೋಡೋದಕ್ಕೆ ತುಂಬಾ ದೂರ ಹೋಗಬೇಕು. ಇಂತಹ ಜಾಗ ನಮ್ಮ ಅಕ್ಕಪಕ್ಕದಲ್ಲಿದ್ರೆ ಹೇಗಿರುತ್ತೆ..? ಹೌದು ಅಂತಹ ಜಾಗ ಇಲ್ಲೇ, ನಮ್ಮ ಕರುನಾಡಲ್ಲೇ ಇದೆ.

Sunset Point: ಕರುನಾಡಲೊಂದು ಮಿನಿ ಕನ್ಯಾಕುಮಾರಿ.. ಸೂರ್ಯಾಸ್ತ ನೋಡಿ ರೋಮಾಂಚನಗೊಳ್ಳಲು ಇಲ್ಲಿಗೆ ಬರಲೇ ಬೇಕು..
ಕಂದವಾರ ಕೆರೆ ಬಳಿಯ ಸೂರ್ಯ ಅಸ್ತಮಿಸುವ ದೃಶ್ಯ
ಆಯೇಷಾ ಬಾನು
|

Updated on: Feb 06, 2021 | 7:20 AM

Share

ಚಿಕ್ಕಬಳ್ಳಾಪುರ: ನಗರದ ಕಂದವಾರ ಕೆರೆ ಬಳಿ ಥೇಟ್ ಮಿನಿ ಕನ್ಯಾಕುಮಾರಿಯ ನೆನಪು ತರುವ ಕಂದವಾರ ಕೆರೆಯ ದೃಶ್ಯಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಸ್ಕಂದಗಿರಿ ಹಾಗೂ ನಂದಿಗಿರಿಯ ನಡುವೆ ಸೂರ್ಯ ಅಸ್ತಮಿಸುವುದನ್ನ ಕಣ್ತುಂಬಿಕೊಳ್ಳುವುದೇ ಹಬ್ಬ. ಸ್ಥಳೀಯರು ಕೂಡ ಈ ದೃಶ್ಯಗಳಿಗೆ ಮನಸೋತು ಬಿಡ್ತಾರೆ. ಮತ್ತೊಂದ್ಕಡೆ ಕಂದವಾರ ಕೆರೆಯಲ್ಲಿ ಅಳವಡಿಸಿರುವ ಕಾರಂಜಿಗಳು, ಸೂರ್ಯನೆಡೆಗೆ ನೀರು ಚಿಮ್ಮುತ್ತವೆ. ಈ ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಹೊತ್ತಿಗೆ ಸೂರ್ಯನಿಗೆ ಬೀಳ್ಕೊಡುಗೆ ಆರಂಭವಾಗಿರುತ್ತದೆ. ಇದು ಪ್ರಕೃತಿ ಪ್ರೇಮಿಗಳ ದಿಲ್ ಖುಷ್ ಮಾಡುವಂತಿದ್ದು, ನೋಡಲು ಎರಡು ಕಣ್ಣು ಸಾಲದು.

ಅಷ್ಟಕ್ಕೂ ಕಳೆದ ಕೆಲ ದಶಕಗಳಿಂದ ಕಂದವಾರ ಕೆರೆ ನೀರಿಲ್ದೆ ಬರಡಾಗಿತ್ತು. ಆದ್ರೆ ಈಗ ಎಚ್.ಎನ್. ವ್ಯಾಲಿಯ ನೀರಿನಿಂದ ತುಂಬಿ ತುಳುಕುತ್ತಿದ್ದು, ಪ್ರಕೃತಿಯ ಈ ವೈಭೋಗ ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ಇತಿಹಾಸದ ಮೇಲೆ ಬೆಳಕು ಚೆಲ್ಲುವ ದೀಪಸ್ತಂಭ ನಡುಗಡ್ಡೆ ಲೈಟ್ ಹೌಸ್.. ಇದು ಪ್ರವಾಸಿಗರ ನೆಚ್ಚಿನ ತಾಣ