SP ಹೆಸರು ಹೇಳಿ PSIಗೆ ಪಂಗನಾಮ.. ಕೊನೆಗೂ ಯಾಮಾರಿಸಿದ್ದವ ಕಂಬಿ ಹಿಂದೆ
Fraud ಕಲಬುರಗಿ ಜಿಲ್ಲೆ ಜೇವರ್ಗಿ ಠಾಣೆ ಪಿಎಸ್ಐ ಆಗಿದ್ದ ಮಂಜುನಾಥ ಹೂಗಾರ್, ತಿಂಗಳ ಹಿಂದೆ ಕಲಬುರಗಿ ಡಿಸಿಬಿಗೆ ವರ್ಗಾವಣೆಯಾಗಿದ್ದರು. ಈ ವೇಳೆ ಅವರಿಗೆ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಹೆಸರು ಹೇಳಿ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ನಿವಾಸಿ ಖಾಸಿಂ ಪಟೇಲ್ ಎಂಬ ವ್ಯಕ್ತಿ ವಂಚನೆ ಮಾಡಿದ್ದಾನೆ.
ಕಲಬುರಗಿ: SP ಹೆಸರು ಹೇಳಿ 8.5 ಲಕ್ಷ ಹಣ ಪಡೆದು ಪಿಎಸ್ಐ ಯಾಮಾರಿಸಿದ್ದ ಕಿಲಾಡಿಯನ್ನು ಪೊಲೀಸರು ಬಂಧಿಸಿದ್ದಾರೆ. PSI ಮಂಜುನಾಥ ಹೂಗಾರ್ರಿಂದ 8.5 ಲಕ್ಷ ಹಣ ಪಡೆದು ಕೊಂಡಗುಳಿ ಗ್ರಾಮದ ಖಾಸಿಂ ಪಟೇಲ್ ಮೋಸ ಮಾಡಿದ್ದಾನೆ. ಸದ್ಯ ಖಾಸಿಂನನ್ನು ಬಂಧಿಸಲಾಗಿದ್ದು ಆತನಿಂದ ಎರಡು ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಜೇವರ್ಗಿ ಠಾಣೆ ಪಿಎಸ್ಐ ಆಗಿದ್ದ ಮಂಜುನಾಥ ಹೂಗಾರ್, ತಿಂಗಳ ಹಿಂದೆ ಕಲಬುರಗಿ ಡಿಸಿಬಿಗೆ ವರ್ಗಾವಣೆಯಾಗಿದ್ದರು. ಈ ವೇಳೆ ಅವರಿಗೆ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಹೆಸರು ಹೇಳಿ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ನಿವಾಸಿ ಖಾಸಿಂ ಪಟೇಲ್ ಎಂಬ ವ್ಯಕ್ತಿ ವಂಚನೆ ಮಾಡಿದ್ದಾನೆ.
ಖಾಸಿಂ ಕಲಬುರಗಿ ಎಸ್ಪಿ ಪರ್ಸನಲ್ ನಂಬರ್ ಎಂದು ಹೇಳಿ ಎಸ್ಐ ಮಂಜುನಾಥ ಹೂಗಾರ್ಗೆ SMS ಮಾಡುತ್ತಿದ್ದ. ಮೊಬೈಲ್ ನಂಬರ್ 74114 47060ನಿಂದ SMS ಮಾಡ್ತಿದ್ದ. ಖಾಸಿಂ ಬೇರೆ ಬೇರೆ ಕಾರಣಗಳನ್ನು ಹೇಳಿ ಮಂಜುನಾಥ ಬಳಿ 3 ಬಾರಿ ಹಣ ಪಡೆದಿದ್ದ.
ಸುಮಾರು 8 ಲಕ್ಷ 50 ಸಾವಿರ ಹಣ ಪಡೆದಿದ್ದಾನೆ. ಫೆಬ್ರವರಿ 4ರಂದು ಎಸ್ಪಿ ಭೇಟಿಯಾಗಿ ಹಣ ನೀಡಿದ್ದರ ಬಗ್ಗೆ ಮಂಜುನಾಥ್, ಎಸ್ಪಿ ಸಿಮಿ ಮರಿಯಮ್ ಜಾರ್ಜ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ನಾನು ಯಾವುದೇ ಹಣ ಕೇಳಿಲ್ಲ, ಅದು ನನ್ನ ನಂಬರ್ ಅಲ್ಲ ಅಂತ ಪಿಎಸ್ಐ ಮಂಜುನಾಥ ಹೂಗಾರ್ಗೆ, ಎಸ್ಪಿ ತಿಳಿಸಿದ್ದಾರೆ. ನಂತರ ವಂಚನೆ ನಡೆದಿರುವುದು ಗೊತ್ತಾಗಿ ಫೆಬ್ರವರಿ 4ರ ರಾತ್ರಿ ಮಂಜುನಾಥ್ ಕಲಬುರಗಿ ಸ್ಟೇಷನ್ ಬಜಾರ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ₹8 ಲಕ್ಷ 50ಸಾವಿರ ಪಡೆದಿದ್ದ ವಂಚಕ ಖಾಸಿಂ ಪಟೇಲ್ನನ್ನು ಪೊಲೀಸರು ಬಂಧಿಸಿದ್ದು ಆತನಿಂದ ₹2 ಲಕ್ಷ ವಶಕ್ಕೆ ಪಡೆದಿದ್ದಾರೆ.