ಬೆಂಗಳೂರು: ಬಳ್ಳಾರಿ ಅಂತ್ಯಕ್ರಿಯೆ ಘಟನೆ ಬಳಿಕ ಬೆಂಗಳೂರಿನಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ. ಕೊರೊನಾ ಸೋಂಕಿತರ ಅಂತ್ಯ ಕ್ರಿಯೆ ಮಾಡಿ ಬಳಸಿದ ಪಿಪಿಇ ಕಿಟ್ಗಳನ್ನು ಸಿಬ್ಬಂದಿ ಹಾಗೇ ಬಿಟ್ಟು ಹೋದ ಘಟನೆ ಜೆ.ಸಿ ನಗರದಲ್ಲಿ ನಡೆದಿದೆ. ಈ ಘಟನೆಯಿಂದ ಜನರು ಕಂಗಾಲಾಗಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗ್ತಿದ್ದಂತೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಸಿಬ್ಬಂದಿ ಮೃತ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಮಾಡಿ ಪಿಪಿಇ ಕಿಟ್ ಹಾಗೇ ಬಿಟ್ಟು ಹೋಗಿದ್ದಾರೆ. ಹೀಗೆ ಬಿಟ್ಟುಹೋದ ಕಿಟ್ ಗಾಳಿಗೆ ಹಾರಿ ಮನೆ ಮುಂದೆ ಬರುತ್ತಿರುವ ಹಿನ್ನೆಲೆಯಲ್ಲಿ ಜೆ.ಸಿ.ನಗರದ ನಿವಾಸಿಗಳಲ್ಲಿ ಕೊರೊನಾ ಆತಂಕ ಹೆಚ್ಚಾಗಿದೆ. ಅಂತ್ಯಕ್ರಿಯೆ ಮಾಡಿದ ಸ್ಥಳದಿಂದ ಪಿಪಿಇ ಕಿಟ್ಗಳು ಹಾರಿಬರುತ್ತಿವೆ. ಈ ಬಗ್ಗೆ ಪೊಲೀಸರಿಗೆ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ. ಪಿಪಿಇ ಕಿಟ್ ಸುಟ್ಟು ಹಾಕಿದ್ದಾರೆ. ಈ ನಡುವೆ ಸೋಂಕಿತನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿ ಪಿಪಿಇ ಕಿಟ್ ಕಳಚಿ ಬೀದಿಯಲೆಲ್ಲಾ ಓಡಾಡಿದ್ದಾರೆ. ಸ್ಥಳೀಯರು ಈ ದೃಶ್ಯವನ್ನು ತಮ್ಮ ಫೋನಿನಲ್ಲಿ ಸೆರೆ ಹಿಡಿದಿದ್ದಾರೆ.
Published On - 10:33 am, Wed, 1 July 20