
ಬೆಂಗಳೂರು: ರಾಜ್ಯಸಭೆಗೆ ಟಿಕೆಟ್ ನೀಡಲು ರಮೇಶ್ ಕತ್ತಿ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ಬೆಳಗ್ಗೆಯೇ ಬೆಂಗಳೂರಿಗೆ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ದೌಡಾಯಿಸಿದ್ದಾರೆ. ಬೆಳಗ್ಗೆ 6ಕ್ಕೆ ಬೆಳಗಾವಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಪ್ರಭಾಕರ್ ಕೋರೆಯ ರಾಜ್ಯಸಭಾ ಅವಧಿ ಜೂ.25ಕ್ಕೆ ಅಂತ್ಯವಾಗುತ್ತೆ. ಮತ್ತೆ ರಾಜ್ಯಸಭಾ ಟಿಕೆಟ್‌ಗಾಗಿ ಪ್ರಭಾಕರ್ ಕೋರೆ ಲಾಬಿ ನಡೆಸಿದ್ದಾರೆ. ಸಿಎಂ B.S.ಯಡಿಯೂರಪ್ಪರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ರಾಜ್ಯಸಭಾ ಟಿಕೆಟ್‌ಗಾಗಿ ಪ್ರಭಾಕರ್ ಕೋರೆ ಹಾಗೂ ರಮೇಶ್ ಕತ್ತಿ ನಡುವೆ ಪೈಪೋಟಿ ಇದೆ. ತಡ ಮಾಡಿದ್ರೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ಬೆಂಗಳೂರಿಗೆ ದೌಡಾಯಿಸಿದ್ದಾರೆ.
Published On - 9:02 am, Fri, 29 May 20