10 ವರ್ಷದಿಂದ ಇಸ್ಲಾಂ ಚಿಂತನೆ, 2 ವರ್ಷದ ಹಿಂದೆ ಮತಾಂತರ- ಇದು ಮಹೀರಾ ಅಂದ್ರೆ ಸಂಜನಾ ನಿಜ ಜೀವನ!

|

Updated on: Sep 19, 2020 | 9:13 AM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗರ್ಲಾನಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಅರ್ಚನಾ ಮನೋಹರ್ ಗಲ್ರಾನಿ ಎಂಬ ಮೂಲ ಹೆಸರಿನ ನಾನು.. ಸಂಜನಾ ಮೂಲ ಹೆಸರು ಅರ್ಚನಾ ಮನೋಹರ್ ಗಲ್ರಾನಿಯಾಗಿದ್ದು, 2018ರಲ್ಲಿ ಮತಾಂತರವಾಗಿರುವ ನಟಿ ಸಂಜನಾ ಗರ್ಲಾನಿ ತನ್ನ ಹೆಸರನ್ನ ಮಹಿರಾ ಎಂದು ಬದಲಾಯಿಸಿಕೊಂಡಿದ್ದಾರೆ. ನಾನು ಸ್ವ ಇಚ್ಛೆಯಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುತ್ತದ್ದೇನೆ. 10 ವರ್ಷಗಳಿಂದ […]

10 ವರ್ಷದಿಂದ ಇಸ್ಲಾಂ ಚಿಂತನೆ, 2 ವರ್ಷದ ಹಿಂದೆ ಮತಾಂತರ- ಇದು ಮಹೀರಾ ಅಂದ್ರೆ ಸಂಜನಾ ನಿಜ ಜೀವನ!
Follow us on

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗರ್ಲಾನಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ಅರ್ಚನಾ ಮನೋಹರ್ ಗಲ್ರಾನಿ ಎಂಬ ಮೂಲ ಹೆಸರಿನ ನಾನು..
ಸಂಜನಾ ಮೂಲ ಹೆಸರು ಅರ್ಚನಾ ಮನೋಹರ್ ಗಲ್ರಾನಿಯಾಗಿದ್ದು, 2018ರಲ್ಲಿ ಮತಾಂತರವಾಗಿರುವ ನಟಿ ಸಂಜನಾ ಗರ್ಲಾನಿ ತನ್ನ ಹೆಸರನ್ನ ಮಹಿರಾ ಎಂದು ಬದಲಾಯಿಸಿಕೊಂಡಿದ್ದಾರೆ. ನಾನು ಸ್ವ ಇಚ್ಛೆಯಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುತ್ತದ್ದೇನೆ.

10 ವರ್ಷಗಳಿಂದ ಇಸ್ಲಾಂ ಚಿಂತನೆಗಳು ನನ್ನ ಮೇಲೆ ಪ್ರಭಾವ ಬೀರಿದೆ. ನನ್ನ ಮೇಲೆ ಯಾವುದೇ ಒತ್ತಡವಿಲ್ಲದೆ ಮತಾಂತರಗೊಳ್ಳುತ್ತಿದ್ದೇನೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ನಟಿ ಸಂಜನಾ ತಿಳಿಸಿದ್ದಾರೆ.

ಜೊತೆಗೆ ಈ ಬಗ್ಗೆ ಸಂಜನಾ ಮಸೀದಿಯೊಂದಕ್ಕೂ ಮಾಹಿತಿ ನೀಡಿ ಅನುಮೋದನೆ ಪಡೆದಿದ್ದಾರೆ. 2 ವರ್ಷದಿಂದ ಮಾಹಿತಿಯನ್ನ ಬಚ್ಚಿಟ್ಟಿದ್ದ ನಟಿ ಸಂಜನಾ ಡ್ರಗ್ ಕೇಸಲ್ಲಿ ಅರೆಸ್ಟ್ ಆದ ಮೇಲೆ ಮತಾಂತರವಾಗಿರುವ ಮಾಹಿತಿಯನ್ನು ಪ್ರಶಾಂತ್ ಸಂಬರಗಿ ಬಹಿರಂಗಗೊಳಿಸಿದ್ದಾರೆ.

Published On - 8:29 am, Sat, 19 September 20