ಜನರಲ್ ತಿಮ್ಮಯ್ಯ ವಾರ್ ಮ್ಯೂಸಿಯಂ: ಟ್ವೀಟ್​ ಮಾಡಿ ಸಂತಸ ವ್ಯಕ್ತಪಡಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್!

|

Updated on: Feb 08, 2021 | 10:30 AM

ಜನರಲ್ ತಿಮ್ಮಯ್ಯ ವಾರ್ ಮ್ಯೂಸಿಯಂ ಉದ್ಘಾಟನೆ ಮಾಡಿರುವುದರ ಕುರಿತಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್​ ಟ್ವೀಟ್​ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಜನರಲ್ ತಿಮ್ಮಯ್ಯ ವಾರ್ ಮ್ಯೂಸಿಯಂ: ಟ್ವೀಟ್​ ಮಾಡಿ ಸಂತಸ ವ್ಯಕ್ತಪಡಿಸಿದ ರಾಷ್ಟ್ರಪತಿ ರಾಮನಾಥ ಕೋವಿಂದ್!
ರಾಷ್ಟ್ರಪತಿ ರಾಮನಾಥ್ ಕೋವಿಂದ್
Follow us on

ಮಡಿಕೇರಿ: ಜನರಲ್ ತಿಮ್ಮಯ್ಯ ವಾರ್ ಮ್ಯೂಸಿಯಂ ಉದ್ಘಾಟನೆ ಮಾಡಿರುವುದರ ಕುರಿತಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್​ ಟ್ವೀಟ್​ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 6 ರಂದು ಸನ್ನಿಸೈಡ್ ಮ್ಯೂಸಿಯಂ ಲೋಕಾರ್ಪಣೆ ಮಾಡಿದ್ದರು. ಈ ಕುರಿತಂತೆ ಭಾರತೀಯ ಸೇನೆಯ ಇತಿಹಾಸದಲ್ಲಿ ಒಬ್ಬ ಅತ್ಯುತ್ತಮ ವ್ಯಕ್ತಿತ್ವ ಹಾಗೂ ಅವರ ಕೊಡುಗೆಯನ್ನು ಇಲ್ಲಿ ಸಂರಕ್ಷಿಸಲಾಗಿದೆ ಎಂದು ಟ್ವೀಟ್​ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.

ಸನ್ನಿಸೈಡ್ ನಮ್ಮ ವೀರ ಯೋಧರ ಸಾಧನೆಯನ್ನು ಬಿಂಬಿಸುವಂತಿದೆ. ಮ್ಯೂಸಿಯಂ ತಿಮ್ಮಯ್ಯ ಅವರ ಜೀವನ, ಸಾಧನೆಯನ್ನು ಬಿಂಬಿಸುವ ಮೂಲಕ ಯುವಕರಿಗೆ ಪ್ರೇರಣೆಯಾಗಲ್ಲಿದೆ. ಕೊಡಗು, ಜನರಲ್ ಕಾರ್ಯಪ್ಪ, ತಿಮ್ಮಯ್ಯರಂತವರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಪೋಟೋ ಹಂಚಿಕೊಳ್ಳುವುದರ ಮೂಲಕ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 5.50 ಕೋಟಿ ರೂ. ಅನುದಾನದಲ್ಲಿ ಜ.ತಿಮ್ಮಯ್ಯ ಮಸ್ತು ಸಂಗ್ರಹಾಲಯವನ್ನು ನಿರ್ಮಿಸಿದ್ದು, ಉದ್ಘಾಟನೆಯ ವೇಳೆ ರಾಷ್ಟ್ಟಪತಿಗಳು ವಸ್ತು ಸಂಗ್ರಹಾಲಯದಲ್ಲಿನ ತಮ್ಮಯ್ಯ ಸೇನಾ ಸಾಧನೆಯ ಮಹತ್ವದ ಚಿತ್ರಗಳು, ದಾಖಲೆಗಳನ್ನು ತಮ್ಮ ಪತ್ನಿ ಸವಿತಾ ಕೋವಿಂದ್​ ಅವರೊಂದಿಗೆ ವೀಕ್ಷಿಸಿದ್ದರು.

ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಫೆಬ್ರವರಿ 6ಕ್ಕೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಆಗಮನ

Published On - 10:11 am, Mon, 8 February 21