ಬೆಂಗಳೂರು: 2021-22ನೇ ಸಾಲಿನಲ್ಲಿ ಖಾಸಗಿ ಶಾಲೆಗಳ ಫೀಸ್ ವಿಚಾರಕ್ಕೆ ಸಂಬಂಧಿಸಿ ರುಪ್ಸಾದಿಂದ ಹಲವು ನಿರ್ಧಾರ ಕೈಗೊಳ್ಳಲಾಗಿದೆ. ಲೋಕೇಶ್ ತಾಳಿಕಟ್ಟೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಈ ವರ್ಷದ ಶುಲ್ಕ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2021-22ನೇ ಸಾಲಿನ ಬೋಧನಾ ಶುಲ್ಕ ಹೆಚ್ಚಳ ಮಾಡಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯಲ್ಲಿ ರುಪ್ಸಾ ಒಕ್ಕೂಟ ತೆಗೆದುಕೊಂಡ ನಿರ್ಣಯಗಳು
1. 2021-22 ನೇ ಸಾಲಿನ ಬೋಧನಾ ಶುಲ್ಕ ಹೆಚ್ಚಳ ಇಲ್ಲ.
2. 2021-22 ನೇ ಶೈಕ್ಷಣಿಕ ವೇಳಾಪಟ್ಟಿ ನಿರ್ದೇಶನದಂತೆ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಬೇಕು.
3. ಕಂತುಗಳಲ್ಲಿ ಶುಲ್ಕ ಕಟ್ಟಲು ಪೋಷಕರಿಗೆ ಅವಕಾಶ.
4. ಪೋಷಕರಿಗೆ ಶುಲ್ಕದ ವಿಚಾರವಾಗಿ ಟಾರ್ಚರ್ ಕೊಡುತ್ತಿರುವ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ.
5. ಕಳೆದ ವರ್ಷ ಶೇ.30 ರಷ್ಟು ಶುಲ್ಕ ಕಡಿತಕ್ಕೆ ರುಪ್ಸಾ ಒಕ್ಕೂಟ ಒಪ್ಪಿಗೆ ಸೂಚಿಸಿತ್ತು. ಕಳೆದ ವರ್ಷದ ಶುಲ್ಕ ಪೋಷಕರು ಪಾವತಿ ಮಾಡಿಲ್ಲ. ಕಳೆದ ವರ್ಷ ಬಾಕಿ ಶುಲ್ಕ ಪಾವತಿ ಮಾಡಲು ಸರ್ಕಾರ ನಿರ್ದೇಶನ ನೀಡಬೇಕು.
2021-22 ನೇ ಸಾಲಿನ ಶುಲ್ಕದ ವಿಚಾರವಾಗಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ರುಪ್ಸಾ ಒಕ್ಕೂಟ ಒಪ್ಪಿಗೆಯಿದೆ. ಶುಲ್ಕದ ವಿಚಾರವಾಗಿ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರು ಅದರ ಪರವಾಗಿ ನಿಲ್ಲುತ್ತೇವೆ. ಕೊರೊನಾ ಸಂಕಷ್ಟ ಕಾಲದಲ್ಲಿ ನಾವು ಸಹಕರಿಸಬೇಕಿದೆ ಎಂದು ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ
ಶಿಕ್ಷಣ ಸಚಿವರ ವಿರುದ್ಧ ಅಸಮಧಾನ ಹೊರಹಾಕಿದ ಖಾಸಗಿ ಶಾಲೆಗಳ ಒಕ್ಕೂಟ; ಇಂದು ಸಭೆಗೆ ನಿರ್ಧಾರ
(private school fees would not be increased It was decided at the RUPSA meeting)
Published On - 11:24 am, Mon, 14 June 21