School Fees: ಪೋಷಕರಿಂದ ಫೀಸ್ ವಸೂಲಿ ಮಾಡುವಲ್ಲಿ ಖಾಸಗಿ ಶಾಲೆಗಳ ಜತೆ ಖಾಸಗಿ ಫೈನಾನ್ಸ್​ಗಳು ಶಾಮೀಲು: ಸಚಿವ ಸುರೇಶ್ ಕುಮಾರ್

ಶಾಲೆಗಳೇ ಪೋಷಕರಿಗೆ ಖಾಸಗಿ ಫೈನಾನ್ಸ್‌ನವರಿಂದ ಸಾಲ ಕೊಡಿಸುತ್ತಿರುವ ವಿಷಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಲುಪಿದೆ. ಈ ರೀತಿಯ ಯಾವುದಕ್ಕೂ ನಾವು ಅವಕಾಶ ಕೊಡುವುದಿಲ್ಲ. ಸಂಬಂಧಪಟ್ಟವರಿಗೆ ನೋಟಿಸ್ ಕೊಡುವುದಾಗಿ ಅವರು ತಿಳಿಸಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

School Fees: ಪೋಷಕರಿಂದ ಫೀಸ್ ವಸೂಲಿ ಮಾಡುವಲ್ಲಿ ಖಾಸಗಿ ಶಾಲೆಗಳ ಜತೆ ಖಾಸಗಿ ಫೈನಾನ್ಸ್​ಗಳು ಶಾಮೀಲು: ಸಚಿವ ಸುರೇಶ್ ಕುಮಾರ್
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್
Follow us
TV9 Web
| Updated By: guruganesh bhat

Updated on: Jun 12, 2021 | 3:26 PM

ಕೋಲಾರ: ಪೋಷಕರಿಂದ ಖಾಸಗಿ ಶಾಲೆಗಳು ಫೀಸ್ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಫೀಸ್‌ ವಸೂಲಿ ಮಾಡುವಲ್ಲಿ ಖಾಸಗಿ ಶಾಲೆಗಳು ಖಾಸಗಿ ಫೈನಾನ್ಸ್‌ಗಳ ಜತೆ ಶಾಮೀಲಾಗಿವೆ ಎಂದು ಅವರು ಕೋಲಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ತಾತ್ವಿಕವಾಗಿ ಯಾರೂ ಒಪ್ಪಿಕೊಳ್ಳದ ವಿಚಾರವಾಗಿದೆ. ಇಂತಹ ವಿಷಯವನ್ನು ಎಲ್ಲೂ ಕೇಳಿರಲಿಲ್ಲ, ಹೀಗೆ ಖಂಡಿತ ಆಗಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ ಅವರು, ಶಾಲೆಗಳೇ ಪೋಷಕರಿಗೆ ಖಾಸಗಿ ಫೈನಾನ್ಸ್‌ನವರಿಂದ ಸಾಲ ಕೊಡಿಸುತ್ತಿರುವ ವಿಷಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಲುಪಿದೆ. ಈ ರೀತಿಯ ಯಾವುದಕ್ಕೂ ನಾವು ಅವಕಾಶ ಕೊಡುವುದಿಲ್ಲ. ಸಂಬಂಧಪಟ್ಟವರಿಗೆ ನೋಟಿಸ್ ಕೊಡುವುದಾಗಿ ಅವರು ತಿಳಿಸಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಪೋಷಕರ ಆರ್ಥಿಕ ಪರಿಸ್ಥಿತಿ ತೊಂದರೆಯಲ್ಲಿದೆ. ಇತ್ತ ಶಿಕ್ಷಕರಿಗೂ ವೇತನ ಪಾವತಿಯಾಗದೇ ಇರುವುದು ತಿಳಿದಿದೆ. ಈ ಎರಡೂ ವಿಚಾರವನ್ನು ಬ್ಯಾಲೆನ್ಸ್ ಮಾಡಬೇಕಾಗಿದೆ. ಕಳೆದ ವರ್ಷ ಸರ್ಕಾರ ಶೇ.30ರಷ್ಟು ಶುಲ್ಕ ಪಡೆಯಲು ಆದೇಶ ಹೊರಡಿಸಿತ್ತು. ಆಗ ಸಸರ್ಕಾರದ ಆದೇಶದ ವಿರುದ್ಧ ಖಾಸಗಿ ಶಾಲೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವರ್ಷವೂ ಕೂಡ ಅದೇ ಪರಿಸ್ಥಿತಿ ಇದೆ. ಹೀಗಾಗಿ ಶಾಲೆ ಆಡಳಿತ ಮಂಡಳಿ, ಪೋಷಕರೇ ಬಗೆಹರಿಸಿಕೊಳ್ಳಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚ್ಯವಾಗಿ ವಿವರಿಸಿದರು.

ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ನಡೆಸುತ್ತಿರುವುದು ಮೌಲ್ಯಮಾಪನ ಮಾತ್ರ, ಪರೀಕ್ಷೆ ಅಲ್ಲ ಪ್ರಥಮ‌ ಪಿಯು ವಿದ್ಯಾರ್ಥಿಗಳಿಗೆ ಮೌಲ್ಯಮಾಪನ ನಡೆಸುತ್ತಿದ್ದೇವೆ. ಬದಲಿಗೆ ಅದನ್ನು ಪರೀಕ್ಷೆ ಎಂದು ತಪ್ಪಾಗಿ ಭಾವಿಸಬಾರದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದರು. ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಅಸೈನ್​ಮೆಂಟ್​ ಸಲ್ಲಿಸಬೇಕಿಲ್ಲ. ಮಕ್ಕಳ‌ ಹಿತದೃಷ್ಟಿಯಿಂದ‌ ಈ ನಿರ್ಧಾರ ಕೈಗೊಂಡಿದ್ದೇವೆ. ಈ ನಿರ್ಧಾರದ ಕುರಿತು ಅನವಶ್ಯಕ‌‌ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ.

ಇದೇ ವೇಳೆ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಮೌಲ್ಯಮಾಪನ ಮಾಡುವಂತೆ ಎಲ್ಲಾ ಕಾಲೇಜುಗಳಿಗೆ ಪಿಯು ಬೋರ್ಡ್‌ ಸುತ್ತೋಲೆ ನೀಡಿದೆ. ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ 2 ವಿಷಯಗಳಿಗೆ ಮೌಲ್ಯಮಾಪನ ನಡೆಸಲು ಬೋರ್ಡ್‌ ಸೂಚನೆ ನೀಡಿದೆ. ಈ ಮೊದಲು ಪ್ರಥಮ ಪಿಯುಸಿ ಪಾಸ್ ಎಂದು ಶಿಕ್ಷಣ ಸಚಿವರು ತಿಳಿಸಿದ್ದರೂ ಸಹ, ಆನ್ ಲೈನ್ ಮೌಲ್ಯಮಾಪನ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಇದನ್ನೂ ಓದಿ:  ಮತ್ತೆ ಶುರುವಾಯ್ತು ಖಾಸಗಿ ಶಾಲೆಗಳ ಫೀಸ್ ಟಾರ್ಚರ್; ಪೋಷಕರಿಂದ ಪ್ರತಿಭಟನೆ

ಫಸ್ಟ್ ಟೈಂ ವೋಟರ್ಸ್ ಟ್ರ್ಯಾಕ್ ಮಾಡಲು ಈ ನಿರ್ಧಾರವೇ? ಸಚಿವ ಸುರೇಶ್ ಕುಮಾರ್ ವಿರುದ್ಧ ರಿಪೀಟರ್ಸ್ ಆಕ್ರೋಶ

(Karnataka Education Minister Suresh Kumar says Private finances are boosting private schools to take fees from parents)