ಮತ್ತೆ ಶುರುವಾಯ್ತು ಖಾಸಗಿ ಶಾಲೆಗಳ ಫೀಸ್ ಟಾರ್ಚರ್; ಪೋಷಕರಿಂದ ಪ್ರತಿಭಟನೆ

ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಖಾಸಗಿ ಶಾಲೆಗಳಲ್ಲಿ ಫೀಸ್ ಕೊಡುವಂತೆ ಒತ್ತಾಯ ಹೇರುತ್ತಿದ್ದಾರೆ. ಹೀಗಾಗಿ ಪೋಷಕರು ಮೌನ ಪ್ರತಿಭಟನೆ ಮಾಡಿದರು. ನಗರದ ನಂದಿನಿ ಲೇಔಟ್​ನ ಪ್ರೆಸಿಡೆನ್ಸಿ ಶಾಲೆಯಿಂದ ಫೀಸ್ ಟಾರ್ಚರ್ ಮಾಡುತ್ತಿದ್ದಾರೆ ಎಂದು ಮಕ್ಕಳ ಪೋಷಕರು ಪ್ರತಿಭಟನೆಗೆ ಮುಂದಾಗಿದ್ದರು.

ಮತ್ತೆ ಶುರುವಾಯ್ತು ಖಾಸಗಿ ಶಾಲೆಗಳ ಫೀಸ್ ಟಾರ್ಚರ್; ಪೋಷಕರಿಂದ ಪ್ರತಿಭಟನೆ
ಪಾಲಕರ ಪ್ರತಿಭಟನೆ
Follow us
TV9 Web
| Updated By: sandhya thejappa

Updated on: Jun 08, 2021 | 9:14 AM

ಬೆಂಗಳೂರು: ಕೊರೊನಾ ನಿಯಂತ್ರಿಸಲು ಲಾಕ್​ಡೌನ್​ ವಿಧಿಸುವುದು ಅನಿವಾರ್ಯವಾಗಿತ್ತು. ಆದರೆ ಜಾರಿಯಾದ ಲಾಕ್​ಡೌನ್​ನಿಂದಾದ ಸಮಸ್ಯೆ ಒಂದೆರೆಡಲ್ಲ. ಅದೆಷ್ಟೋ ಕುಟುಂಬಗಳು ಕೆಲಸವಿಲ್ಲದೆ, ಹಣವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಕೊರೊನಾ ಮಕ್ಕಳ ಭವಿಷ್ಯಕ್ಕೂ ಕಂಟಕವಾಗಿದೆ. ಶಾಲೆಗಳಲ್ಲಿ ಆಟದ ಜೊತೆಗೆ ಪಾಠ ಕಲಿಯುತ್ತಿದ್ದ ಮಕ್ಕಳು ಮನೆಯಲ್ಲಿ ಒಂದು ಕಡೆ ಕೂತು ಆನ್​ಲೈನ್​ ತರಗತಿಯನ್ನು ಕೇಳುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳ ನಡುವೆ ಖಾಸಗಿ ಶಾಲೆಗಳು ಮಕ್ಕಳ ಶಾಲಾ ಫೀಸ್ ಕೊಡುವಂತೆ ಒತ್ತಾಯಿಸುತ್ತಿವೆ.

ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಖಾಸಗಿ ಶಾಲೆಗಳಲ್ಲಿ ಫೀಸ್ ಕೊಡುವಂತೆ ಒತ್ತಾಯ ಹೇರುತ್ತಿದ್ದಾರೆ. ಹೀಗಾಗಿ ಪೋಷಕರು ಮೌನ ಪ್ರತಿಭಟನೆ ಮಾಡಿದರು. ನಗರದ ನಂದಿನಿ ಲೇಔಟ್​ನ ಪ್ರೆಸಿಡೆನ್ಸಿ ಶಾಲೆಯಿಂದ ಫೀಸ್ ಟಾರ್ಚರ್ ಮಾಡುತ್ತಿದ್ದಾರೆ ಎಂದು ಮಕ್ಕಳ ಪೋಷಕರು ಪ್ರತಿಭಟನೆಗೆ ಮುಂದಾಗಿದ್ದರು. ಫೀಸ್ ಕಟ್ಟದ ಮಕ್ಕಳನ್ನು ಖಾಸಗಿ ಶಾಲೆಗಳು ಅನ್​ಲೈನ್​ ತರಗತಿಯಿಂದ ರಿಮೂವ್ ಮಾಡುತ್ತಿವೆ. ಇದರಿಂದ ಈಗಾಗಲೇ ವಿದ್ಯಾಭ್ಯಾಸದಿಂದ ವಂಚಿತರಾಗಿರುವ ಮಕ್ಕಳ ಭವಿಷ್ಯಕ್ಕೆ ಇನ್ನಷ್ಟು ಹೊಡೆತ ಬೀಳುತ್ತದೆ.

ಇದನ್ನೂ ಖಂಡಿಸಿ ಪ್ರೆಸಿಡೆನ್ಸಿ ಶಾಲೆಯ ಮುಂದೆ ಮೌನ ಪ್ರತಿಭಟನೆಗೆ ಪೋಷಕರು ಮುಂದಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದರು. ಈ ವೇಳೆ ಉಲ್ಟಾ ಹೊಡೆದ ಕೆಲ ಪೋಷಕರು ಫೀಸ್ ಕಟ್ಟಲು ಬಂದಿದ್ದೇವೆ ಎಂದು ಹೇಳಿದ್ದಾರೆ.

Fees Torture

ಫೀಸ್​ ಕೋರಿದ ಪ್ರೆಸಿಡೆನ್ಸಿ ಶಾಲೆ

ಇದನ್ನೂ ಓದಿ

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ಪ್ರತಿಷ್ಠಿತ ಕಾಲೇಜುಗಳಲ್ಲಿ ಹೆಚ್ಚಿದ ಸೀಟು ಬೇಡಿಕೆ

ಹತ್ತನೇ ತರಗತಿ ಪರೀಕ್ಷೆ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ; ಆಗಲೇ ಪಿಯು ಫೀಸ್ ಕಟ್ಟಿಸಿಕೊಳ್ಳುತ್ತಿವೆ ಕೆಲ ಖಾಸಗಿ ಕಾಲೇಜುಗಳು

(Parents protested as private schools demanded a fee in Bengaluru)