Gold Rate Today: ಗ್ರಾಹಕರಿಗೆ ಖುಷಿಯ ವಿಚಾರ; ಏರುತ್ತಲೇ ಇದ್ದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ!
Gold Silver Price: ಚಿನ್ನವನ್ನು ಆಭರಣದ ಸಲುವಾಗಿ ಒಂದೇ ಅಲ್ಲದೇ, ಹೂಡಿಕೆ ದೃಷ್ಟಿಯಿಂದ ಖರೀದಿಸುವ ಪದ್ಧತಿ ಇದೆ. ಹೀಗಿರುವಾಗ ಚಿನ್ನದ ದರ ಎಷ್ಟಿದೆ? ಎಂಬುದರ ಕುರಿತು ಕುತೂಹಲ ಕಾಡುವುದು ಸಾಮಾನ್ಯ. ಹಾಗಾಗಿ ವಿವಿಧ ನಗರಗಳಲ್ಲಿ ಇಂದಿನ ಮಾರುಕಟ್ಟೆಯಲ್ಲಿನ ಚಿನ್ನದ ದರ ಎಷ್ಟಿದೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.
ಬೆಂಗಳೂರು: ಕಳೆದ ಹಲವು ವಾರಗಳಿಂದ ಚಿನ್ನದ ಬೆಲೆ ಏರುತ್ತಲೇ ಇತ್ತು. ಇಂದು (ಜೂನ್ 8) ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,800 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನ 4,58,000 ರೂಪಾಯಿಗೆ ಕುಸಿತ ಕಂಡಿದೆ. ಬೆಳ್ಳಿ ಬೆಲೆಯಲ್ಲೂ ಸಹ ಇಂದು ಇಳಿಕೆ ಕಂಡು ಬಂದಿರುವುದು ಗ್ರಾಹಕರಿಗೆ ಖುಷಿಯ ವಿಚಾರ.
ಪ್ರತಿನಿತ್ಯ ಏರುತ್ತಲೇ ಇದ್ದ ಚಿನ್ನ ದರವನ್ನು ಗಮನಿಸಿದ ಗ್ರಾಹಕರು ಬೇಸರ ಹೊರಹಾಕಿದ್ದರು. ಒಂದು ಕಡೆ ಇಂಧನದ ದರವೂ ಕೂಡಾ ಹೆಚ್ಚಳವಾಗುತ್ತಲೇ ಇದ್ದು ಸಂಕಷ್ಟ ತಂದೊಡ್ಡಿದೆ. ಜತೆಗೆ ಆಭರಣದ ಬೆಲೆಯೂ ಕೂಡಾ ಏರಿಕೆ ಕಾಣುತ್ತಿದೆ ಎಂದು ಬೇಸರಗೊಂಡಿದ್ದರು. ಚಿನ್ನ ಮತ್ತು ಬೆಳ್ಳಿ ದರ ಎರಡೂ ಆಭರಣಗಳೂ ಕೂಡಾ ದರದಲ್ಲಿ ಇಳಿಕೆ ಕಂಡಿರುವುದರಿಂದ ಗ್ರಾಹಕರು ಸಂತೋಷಗೊಂಡಿದ್ದಾರೆ.
ಚಿನ್ನವನ್ನು ಆಭರಣದ ಸಲುವಾಗಿ ಒಂದೇ ಅಲ್ಲದೇ, ಹೂಡಿಕೆ ದೃಷ್ಟಿಯಿಂದ ಖರೀದಿಸುವ ಪದ್ಧತಿ ಇದೆ. ಹೀಗಿರುವಾಗ ಚಿನ್ನದ ದರ ಎಷ್ಟಿದೆ? ಎಂಬುದರ ಕುರಿತು ಕುತೂಹಲ ಕಾಡುವುದು ಸಾಮಾನ್ಯ. ಹಾಗಾಗಿ ವಿವಿಧ ನಗರಗಳಲ್ಲಿ ಇಂದಿನ ಮಾರುಕಟ್ಟೆಯಲ್ಲಿನ ಚಿನ್ನದ ದರ ಎಷ್ಟಿದೆ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.
ಬೆಂಗಳೂರು ನಗರದಲ್ಲಿ 24 ಕ್ಯಾರೆಟ್ 10 ಗ್ರಾ ಚಿನ್ನದ ದರ 49,970 ರೂಪಾಯಿಗೆ ಇಳಿಕೆಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ದರ 4,99,700 ರೂಪಾಯಿಗೆ ನಿಗದಿಯಾಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿಯೂ ಕುಸಿತ ಕಂಡು ಬಂದಿದ್ದು 1ಕೆಜಿ ಬೆಳ್ಳಿ ದರ 71,000 ರೂಪಾಯಿ ಆಗಿದೆ. ದೈನಂದಿನ ದರ ಪರಿಶೀಲನೆಯಲ್ಲಿ ಸುಮಾರು 600 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,050 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,60,500 ರೂಪಾಯಿ ದಾಖಲಾಗಿದೆ. ಸುಮಾರು 1,100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,240 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,02,400 ರೂಪಾಯಿ ಆಗಿದೆ. ಸುಮಾರು 1,200 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. 1ಕೆಜಿ ಬೆಳ್ಳಿ ದರದಲ್ಲಿ 500 ರೂಪಾಯಿ ಇಳಿಕೆ ಕಂಡು ಬಂದಿದ್ದು 75,800 ರೂಪಾಯಿ ಇಳಿಕೆ ಆಗಿದೆ.
ದೆಹಲಿಯಲ್ಲಿ ಚಿನ್ನದ ದರ ಕೊಂಚ ಏರಿಕೆಯಾಗಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,950 ರೂಪಾಯಿಗೆ ಏರಿಕೆಯಾಗಿದೆ. ಹಾಗೂ 100 ಗ್ರಾಂ ಚಿನ್ನದ ರ 4,79,950 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 52,300 ರೂಪಾಯಿಗೆ ಏರಿಕೆಯಾಗಿದ್ದು, 100 ಗ್ರಾಂ ಚಿನ್ನದ ದರ 5,23,000 ರೂಪಾಯಿಗೆ ಹೆಚ್ಚಳವಾಗಿದೆ. ಕೆಜಿ ಬೆಳ್ಳಿ ದರ 71,000 ರೂಪಾಯಿ ಆಗಿದೆ. ಸುಮಾರು 600 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.
ವಾಣಿಜ್ಯ ನಗರಿ ಮುಂಬೈ ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,510 ರೂಪಾಯಿಗೆ ಇಳಿಕೆ ಆಗಿದೆ. ಹಾಗೂ 100 ಗ್ರಾಂ ಚಿನ್ನಕ್ಕೆ 4,75,100 ರೂಪಾಯಿ ನಿಗದಿಯಾಗಿದೆ. ಸರಿಸುಮಾರು 8,000 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 800 ರೂಪಾಯಿ ಇಳಿಕೆಯ ಬಳಿಕ 48,510 ರೂಪಾಯಿ ಆಗಿದೆ. ಹಾಗೂ 100 ಗ್ರಾಂ ಚಿನ್ನದ ದರ 4,85,100 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ 600 ರೂಪಾಯಿ ಇಳಿಕೆ ಕಂಡು ಬಂದಿದ್ದು 1ಕೆಜಿ ಬೆಳ್ಳಿ ಬೆಲೆ 71,000 ರೂಪಾಯಿಗೆ ಇಳಿಕೆಯಾಗಿದೆ.
ಇದನ್ನೂ ಓದಿ:
Published On - 8:42 am, Tue, 8 June 21