ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ಪ್ರತಿಷ್ಠಿತ ಕಾಲೇಜುಗಳಲ್ಲಿ ಹೆಚ್ಚಿದ ಸೀಟು ಬೇಡಿಕೆ

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ಪ್ರತಿಷ್ಠಿತ ಕಾಲೇಜುಗಳಲ್ಲಿ ಹೆಚ್ಚಿದ ಸೀಟು ಬೇಡಿಕೆ
ಪ್ರಾತಿನಿಧಿಕ ಚಿತ್ರ

ಕಾಲೇಜುಗಳಲ್ಲಿ ಸೀಟ್​ಗಾಗಿ ಬೇಡಿಕೆ ಹೆಚ್ಚಾಗಿರುವ ಕಾರಣ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಕಾಲೇಜುಗಳು ನಿರ್ಧರಿಸಿದೆ. ಆದರೆ ಸರ್ಕಾರದ ಸೂಚನೆಗಾಗಿ ಕಾಯುತ್ತಿವೆ. ವಿದ್ಯಾರ್ಥಿಗಳ ಪದವಿ ಕೋರ್ಸ್​ಗಳಿಗೆ ತಮ್ಮದೇ ಮಾನದಂಡ ಅನುಸರಿಸಲು ಕೆಲ ಪ್ರತಿಷ್ಠಿತ ಕಾಲೇಜುಗಳು ಮುಂದಾಗಿವೆ.

TV9kannada Web Team

| Edited By: sandhya thejappa

Jun 07, 2021 | 1:30 PM

ಬೆಂಗಳೂರು: ಮೂರನೇ ಅಲೆಯಲ್ಲಿ ಕೊರೊನಾ ಸೋಂಕು ಮಕ್ಕಳಿಗೆ ಹೆಚ್ಚು ಹರಡುತ್ತೆ ಎಂದು ತಜ್ಞರು ಹೇಳಿದ್ದಾರೆ. ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಕೊರೊನಾ ಮೂರನೇ ಅಲೆ ಬಂದು ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸರ್ಕಾರ ಹೆಚ್ಚು ಜವಾಬ್ದಾರಿಯಿಂದ ಇರಬೇಕು ಅಂತ ತಿಳಿಸಿದೆ. ಹೀಗಾಗಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಪರೀಕ್ಷೆಯನ್ನು ರದ್ದುಗೊಳಿಸಿದ ಹಿನ್ನೆಲೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟ್​ಗಾಗಿ ಬೇಡಿಕೆ ಹೆಚ್ಚಾಗಿದೆ.

ಕಾಲೇಜುಗಳಲ್ಲಿ ಸೀಟ್​ಗಾಗಿ ಬೇಡಿಕೆ ಹೆಚ್ಚಾಗಿರುವ ಕಾರಣ ಪ್ರವೇಶ ಪರೀಕ್ಷೆ ನಡೆಸುವುದಕ್ಕೆ ಕಾಲೇಜುಗಳು ನಿರ್ಧರಿಸಿದೆ. ಆದರೆ ಸರ್ಕಾರದ ಸೂಚನೆಗಾಗಿ ಕಾಯುತ್ತಿವೆ. ವಿದ್ಯಾರ್ಥಿಗಳ ಪದವಿ ಕೋರ್ಸ್​ಗಳಿಗೆ ತಮ್ಮದೇ ಮಾನದಂಡ ಅನುಸರಿಸಲು ಕೆಲ ಪ್ರತಿಷ್ಠಿತ ಕಾಲೇಜುಗಳು ಮುಂದಾಗಿವೆ. ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲು ಕಾಲೇಜುಗಳು ಸಿದ್ಧತೆ ಮಾಡಿಕೊಂಡಿವೆ. ಸೀಟು ನೀಡಲು ಪಿಯು ಅಂಕವನ್ನು ಪರಿಗಣಿಸುವುದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಪ್ರವೇಶ ಪರೀಕ್ಷೆ ಆಧಾರದ ಮೇಲೆ ಸೀಟು ನೀಡಲಾಗುತ್ತದೆ.

ಎನ್.ಎಂ.ಕೆ.ಆರ್.ವಿ ಕಾಲೇಜು, ಮೌಂಟ್ ಕಾರ್ಮಲ್, ಶೇಷಾದ್ರಿ ಪುರಂ ಸೇರಿದಂತೆ ಹಲವು ಪ್ರತಿಷ್ಠಿತ ಕಾಲೇಜುಗಳು ಈ ಮಾನದಂಡ ಅನುಸರಿಸಲು ಮುಂದಾಗಿವೆ. ಸೀಟು ಬೇಡಿಕೆ ಬಗ್ಗೆ ಟಿವಿ9 ಗೆ ಪ್ರತಿಕ್ರಿಯಿಸಿದ ಬೆಂಗಳೂರು ವಿವಿ ಕುಲಪತಿ ಪ್ರೋ.ಕೆ.ಆರ್.ವೇಣುಗೋಪಾಲ್, ಈ ಬಾರಿ ಸೀಟುಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಪರೀಕ್ಷೆ ರದ್ದಾದ ಕಾರಣ ಪ್ರವೇಶ ಪರೀಕ್ಷೆಯನ್ನು ನಡೆಸಿ ಆ ಬಳಿಕ ಸೀಟು ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಆದರೆ ಸರ್ಕಾರದ ಸೂಚನೆಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ

ದ್ವಿತೀಯ ಪಿಯುಸಿ ಪರೀಕ್ಷೆ ಶುಲ್ಕವನ್ನು ವಾಪಸ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪೋಷಕರ ಸಮನ್ವಯ ಸಮಿತಿ ಆಗ್ರಹ

ಬಗೆಹರಿಯುತ್ತಿಲ್ಲ ದ್ವಿತೀಯ ಪಿಯುಸಿ ಫಲಿತಾಂಶ ವಿಚಾರ; ಶಿಕ್ಷಣ ಇಲಾಖೆಗೆ ಸಲಹೆ, ಸವಾಲು ತಿಳಿಸಿದ ರುಪ್ಸಾ

(Due to the cancellation of the second PUC exam the demand for seats in prestigious colleges has increased)

Follow us on

Related Stories

Most Read Stories

Click on your DTH Provider to Add TV9 Kannada